ಶಕ್ತಿ ಮಿಲ್ ಅತ್ಯಾಚಾರ ಪ್ರಕರಣ: 3 ಅಪರಾಧಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದ ಬಾಂಬೆ ಹೈಕೋರ್ಟ್

ಸಾಂವಿಧಾನಿಕ ನ್ಯಾಯಾಲಯವು ಸಾರ್ವಜನಿಕ ಅಭಿಪ್ರಾಯದ ಆಧರಿಸಿ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಎಸ್ ಎಸ್ ಜಾಧವ್ ಮತ್ತು ಪಿಕೆ ಚವಾಣ್ ಅವರಿದ್ದ ಪೀಠ ಹೇಳಿದೆ.
Bombay High Court with “Shakti Mills Rape Case
Bombay High Court with “Shakti Mills Rape Case

ಶಕ್ತಿ ಮಿಲ್‌ ಸಾಮೂಹಿಕ ಅತ್ಯಾಚಾರ ಪ್ರಕರಣದ ಮೂವರು ಅಪರಾಧಿಗಳ ಮರಣದಂಡನೆ ಶಿಕ್ಷೆಯನ್ನು ಜೀವಾವಧಿ ಸಜೆಯಾಗಿ ಬಾಂಬೆ ಹೈಕೋರ್ಟ್ ಗುರುವಾರ ಮಾರ್ಪಡಿಸಿದೆ.

ಮುಂಬೈನ ಶಕ್ತಿ ಮಿಲ್‌ ಪ್ರದೇಶದಲ್ಲಿ 23 ವರ್ಷದ ಪತ್ರಿಕಾ ಛಾಯಾಗ್ರಾಹಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಮೂವರು ಆರೋಪಿಗಳಿಗೆ ಅವರು ಪುನರಾವರ್ತಿತ ಅಪರಾಧಿಗಳೆಂಬ ಕಾರಣಕ್ಕಾಗಿ ಸೆಷನ್ಸ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿತ್ತು. ನ್ಯಾಯಮೂರ್ತಿಗಳಾದ ಎಸ್‌ ಎಸ್ ಜಾಧವ್ ಮತ್ತು ಪಿ ಕೆ ಚವ್ಹಾಣ್ ಅವರಿದ್ದ ಪೀಠ ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದರೂ ಶಿಕ್ಷೆಯ ಪ್ರಮಾಣವನ್ನು ಕಠಿಣ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿತು. ಜೀವಿತದ ಅಂತ್ಯದವರೆಗೂ ಕಠಿಣ ಸಜೆಯನ್ನು ಆರೋಪಿಗಳು ಅನುಭವಿಸಬೇಕು. ಅಪರಾಧಿಗಳಿಗೆ ಸಮಾಜದಲ್ಲಿ ಮಿಳಿತಗೊಳ್ಳಲು ಸಾಧ್ಯವಿಲ್ಲದೆ ಇರುವುದರಿಂದ ಪೆರೋಲ್‌ ಅಥವಾ ಫರ್ಲೋ ಯಾವುದಕ್ಕೂ ಅವರು ನ್ಯಾಯಾಲಯವನ್ನು ಎಡತಾಕಬಾರದು ಎಂದ ಪೀಠ ಹೇಳಿತು.

Also Read
ವಿಕೃತ ಕಾಮಿ ಉಮೇಶ್‌ ರೆಡ್ಡಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್‌; ಸುಪ್ರೀಂನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ

"ಸಾಂವಿಧಾನಿಕ ನ್ಯಾಯಾಲಯವು ಸಾರ್ವಜನಿಕ ಅಭಿಪ್ರಾಯ ಆಧರಿಸಿ ಶಿಕ್ಷೆಯನ್ನು ನೀಡಲು ಸಾಧ್ಯವಿಲ್ಲ. ಮರಣದಂಡನೆಯನ್ನು ರದ್ದುಗೊಳಿಸುವಾಗ, ನಾವು ಬಹುಮತಕ್ಕೆ ವಿರುದ್ಧವಾದ ಅಭಿಪ್ರಾಯ ಅಂಗೀಕರಿಸಿದ್ದೇವೆ ಎಂದು ಹೇಳಬಹುದು ಆದರೆ ಸಾಂವಿಧಾನಿಕ ನ್ಯಾಯಾಲಯವು ಕಾರ್ಯವಿಧಾನವನ್ನು ಅನುಸರಿಸಬೇಕಾಗುತ್ತದೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Related Stories

No stories found.
Kannada Bar & Bench
kannada.barandbench.com