Aryan khan
Aryan khan

ವಿಲಾಸಿ ಹಡಗಿನ ಡ್ರಗ್ಸ್ ಪ್ರಕರಣ: ಆರ್ಯನ್‌ ಖಾನ್‌ ಜಾಮೀನು ಮನವಿ ತಿರಸ್ಕರಿಸಿದ ಮುಂಬೈ ನ್ಯಾಯಾಲಯ

ಜಾಮೀನು ಮನವಿಯ ವಿಚಾರಣೆ ನಡೆಸುವುದು ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿದೆಯೇ ವಿನಾ ಮ್ಯಾಜಿಸ್ಟ್ರೇಟ್‌ಗೆ ಅಲ್ಲ ಎಂಬ ಎನ್‌ಸಿಬಿ ವಾದವನ್ನು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಎಂ ನೇರ್ಲೀಕರ್ ಒಪ್ಪಿದರು.

ವಿಲಾಸಿ ಹಡಗಿನಲ್ಲಿ ಮಾದಕ ವಸ್ತುಗಳು ಪತ್ತೆಯಾದ ಪ್ರಕರಣದಲ್ಲಿ ಬಂಧಿತನಾಗಿರುವ ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ ಸಲ್ಲಿಸಿದ್ದ ಜಾಮೀನು ಮನವಿಯನ್ನು ಶುಕ್ರವಾರ ತಿರಸ್ಕರಿಸಿರುವ ಮುಂಬೈ ನ್ಯಾಯಾಲಯವು ಮನವಿಯು ಊರ್ಜಿತ ಯೋಗ್ಯವಲ್ಲ ಎಂದು ಹೇಳಿದೆ.

ಜಾಮೀನು ಮನವಿಯ ವಿಚಾರಣೆ ನಡೆಸುವುದು ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಒಳಪಟ್ಟಿದೆಯೇ ವಿನಾ ಮ್ಯಾಜಿಸ್ಟ್ರೇಟ್‌ಗೆ ಅಲ್ಲ ಎಂಬ ಎನ್‌ಸಿಬಿ ವಾದವನ್ನು ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌ ಎಂ ನೆರ್ಲೀಕರ್‌ ಒಪ್ಪಿದರು.

ಮಾದಕ ವಸ್ತುಗಳ ನಿಯಂತ್ರಣ ದಳವು (ಎನ್‌ಸಿಬಿ) ಆರ್ಯನ್‌ ಜಾಮೀನು ಮನವಿಯ ಊರ್ಜಿತತ್ವದ ಬಗ್ಗೆ ಪ್ರಶ್ನಿಸಿತ್ತು. ಅರ್ಜಿಯ ಅರ್ಹತೆ ಬಗ್ಗೆ ಆಲಿಸುವುದಕ್ಕ ಪ್ರಕರಣ ಊರ್ಜಿತ ಯೋಗ್ಯವೇ ಎನ್ನುವ ಬಗ್ಗೆ ಮೊದಲು ವಾದವನ್ನು ಆಲಿಸಬೇಕು ಎಂದು ಎನ್‌ಸಿಬಿ ಪರ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಪೀಠವನ್ನು ಕೋರಿದರು.

Also Read
ಮಾದಕ ವಸ್ತು ಪ್ರಕರಣದಲ್ಲಿ ಬಂಧನ: ನ್ಯಾಯಾಲಯಕ್ಕೆ ಘಟನೆ ವಿವರಿಸಿದ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌

“ನಾವು ಅರ್ಜಿಯ ನಿರ್ವಹಣೆಯ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇವೆ. ಇದಕ್ಕೆ ಮೊದಲು ಉತ್ತರಿಸಿ” ಎಂದು ಎಎಸ್‌ಜಿ ಅವರು ಖಾನ್‌ ಪರ ವಕೀಲ ಸತೀಶ್‌ ಮಾನೆಶಿಂಧೆ ಅವರನ್ನು ಪ್ರಶ್ನಿಸಿದರು. “ಎಲ್ಲಾ ವಾದಗಳನ್ನು ಒಂದು ಹಂತದಲ್ಲಿ ಮಂಡಿಸಲಾಗುವುದು” ಎಂದು ಮಾನೆಶಿಂಧೆ ಹೇಳಿದರು. ಇದಕ್ಕೆ ಎಎಸ್‌ಜಿ ಅವರು “ಹಾಗೆ ಮಾಡಲಾಗದು. ಒಮ್ಮೆ ಊರ್ಜಿತತೆಯ ಪ್ರಶ್ನೆ ಎದ್ದ ಮೇಲೆ ಅದನ್ನು ಮೊದಲು ಆಲಿಸಬೇಕು” ಎಂದು ತಗಾದೆ ಎತ್ತಿದರು. ವಾದ-ಪ್ರತಿವಾದವನ್ನು ವಿಸ್ತೃತವಾಗಿ ಆಲಿಸಿದ ಪೀಠವು ಆರ್ಯನ್‌ ಜಾಮೀನು ಮನವಿಯನ್ನು ತಿರಸ್ಕರಿಸಿತು.

Related Stories

No stories found.
Kannada Bar & Bench
kannada.barandbench.com