ನ್ಯಾಯಾಧೀಶರ ವಿರುದ್ಧ ವೈಯಕ್ತಿಕ ದಾಳಿಗೆ ಬಳಕೆಯಾಗುತ್ತಿರುವ ಡಿಜಿಟಲ್ ಮಾಧ್ಯಮ ನಿಯಂತ್ರಿಸಬೇಕಿದೆ: ನ್ಯಾ. ಪರ್ದಿವಾಲಾ

ಭಾರತವನ್ನು ಸಂಪೂರ್ಣ ಪ್ರಬುದ್ಧ ಅಥವಾ ಸ್ಪಷ್ಟ ಪ್ರಜಾಪ್ರಭುತ್ವ ಎನ್ನಲಾಗದು. ಶುದ್ಧ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳನ್ನು ರಾಜಕೀಯಗೊಳಿಸಲು ಸಾಮಾಜಿಕ ಮಾಧ್ಯಮವನ್ನು ಆಗಾಗ್ಗೆ ಬಳಸಿಕೊಳ್ಳಲಾಗುತ್ತಿದೆ ಎಂದರು ನ್ಯಾಯಮೂರ್ತಿಗಳು.
Justice JB Pardiwala
Justice JB Pardiwala

ನ್ಯಾಯಾಧೀಶರ ಮೇಲೆ ಸಾಮಾಜಿಕ ಮಾಧ್ಯಮದ ದಾಳಿ ಮತ್ತು ಮಾಧ್ಯಮ ವಿಚಾರಣೆಯ ಋಣಾತ್ಮಕ ಪರಿಣಾಮಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜೆ ಬಿ ಪರ್ದಿವಾಲಾ ಕರೆ ನೀಡಿದರು.

ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟ (ಸಿಎಎನ್‌ ಪ್ರತಿಷ್ಠಾನದ) ಸಹಭಾಗಿತ್ವದಲ್ಲಿ ಲಖನೌನ ಡಾ ರಾಮ್ ಮನೋಹರ್ ಲೋಹಿಯಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಮತ್ತು ಒಡಿಶಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಭಾನುವಾರ ಆಯೋಜಿಸಿದ್ದ ನ್ಯಾ. ಎಚ್‌ ಆರ್ ಖನ್ನಾ ಸ್ಮಾರಕ 2ನೇ ವಿಚಾರ ಸಂಕಿರಣದಲ್ಲಿ "ಫೋಕ್ಸ್‌ ಪಾಪುಲಿ ವರ್ಸಸ್ ರೂಲ್ ಆಫ್ ಲಾ: ಸುಪ್ರೀಂ ಕೋರ್ಟ್ ಆಫ್ ಇಂಡಿಯಾ" ವಿಷಯದ ಕುರಿತು ಅವರು ಮಾತನಾಡಿದರು.

Also Read
ಸುಪ್ರೀಂ ನ್ಯಾಯಮೂರ್ತಿಗಳಾಗಿ ಸುಧಾಂಶು ಧುಲಿಯಾ, ಜೆ ಬಿ ಪರ್ದಿವಾಲಾ ಅವರ ನೇಮಕಾತಿ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

ಭಾರತವನ್ನು ಸಂಪೂರ್ಣ ಪ್ರಬುದ್ಧ ಅಥವಾ ಸ್ಪಷ್ಟ ಪ್ರಜಾಪ್ರಭುತ್ವ ಎನ್ನಲಾಗದು. ಶುದ್ಧ ಕಾನೂನು ಮತ್ತು ಸಾಂವಿಧಾನಿಕ ವಿಷಯಗಳನ್ನು ರಾಜಕೀಯಗೊಳಿಸಲು ಸಾಮಾಜಿಕ ಮಾಧ್ಯಮವನ್ನು ಆಗಾಗ್ಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.

ನ್ಯಾಯಾಧೀಶರ ಮೇಲೆ ಮಾಧ್ಯಮಗಳಿಂದ ಅನಿಯಂತ್ರಿತ ವೈಯಕ್ತಿಕ ದಾಳಿಗಳು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗುವುದರಿಂದ ನಿಯಮಾವಳಿಗಳನ್ನು ಜಾರಿಗೆ ತರಬೇಕು ಎಂದು ನ್ಯಾಯಮೂರ್ತಿಗಳು ಇದೇ ವೇಳೆ ಅಭಿಪ್ರಾಯಪಟ್ಟರು.

"ನ್ಯಾಯಾಧೀಶರು ತಾವು ನೀಡಿದ ತೀರ್ಪುಗಳಿಗಾಗಿ ಎದುರಿಸುವ ದಾಳಿಗಳು ಅಪಾಯಕಾರಿ ಸನ್ನಿವೇಶಕ್ಕೆ ಕಾರಣವಾಗಲಿದ್ದು, ಅಲ್ಲಿ ನ್ಯಾಯಾಧೀಶರು ಕಾನೂನು ಏನು ಹೇಳುತ್ತದೆ ಎಂಬುದರ ಬದಲು ಮಾಧ್ಯಮಗಳು ಏನು ಯೋಚಿಸುತ್ತವೆ ಎಂದು ಆಲೋಚಿಸಬೇಕಾಗುತ್ತದೆ ಇದು ನ್ಯಾಯಾಲಯಗಳ ಗೌರವದ ಪವಿತ್ರತೆಯನ್ನು ಕಡೆಗಣಿಸಿ ನ್ಯಾಯಿಕ ಆಡಳಿತವನ್ನು ದಹಿಸುತ್ತದೆ. ನಮ್ಮ ಸಂವಿಧಾನದ ಅಡಿಯಲ್ಲಿ ನ್ಯಾಯಿಕ ಆಡಳಿತವನ್ನು ಕಾಪಾಡುವ ಸಲುವಾಗಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮವನ್ನು ದೇಶದಾದ್ಯಂತ ನಿಯಂತ್ರಿಸುವ ಅಗತ್ಯವಿದೆ ”ಎಂದು ಅವರು ಹೇಳಿದರು.

ಸಾರ್ವಜನಿಕ ಅಭಿಪ್ರಾಯ ಮತ್ತು ನ್ಯಾಯಿಕ ಆಡಳಿತದ ನಡುವಿನ ಸಮತೋಲನದ ಕುರಿತಂತೆಯೂ ಮಾತನಾಡಿದ ನ್ಯಾ. ಪರ್ದಿವಾಲಾ, ನ್ಯಾಯಿಕ ಆಡಳಿತದ್ದು ಮೇಲುಗೈಯಾಗಿ ಸಾರ್ವಜನಿಕ ಅಭಿಪ್ರಾಯ ಅಧೀನವಾಗಿರಬೇಕು ಎಂದು ಅಭಿಪ್ರಾಯಪಟ್ಟರು.

“ದೇಶದ ಅತ್ಯುನ್ನತ ನ್ಯಾಯಾಲಯ (ಸುಪ್ರೀಂ ಕೋರ್ಟ್‌) ಒಂದು ವಿಷಯವನ್ನು ಮಾತ್ರ ಧ್ಯಾನಿಸಿ ಯಾವುದೇ ಪ್ರಕರಣವನ್ನು ನಿರ್ಧರಿಸುತ್ತದೆ- ಅದೇ ನ್ಯಾಯಿಕ ಆಡಳಿತ ಎಂದು ನಾನು ದೃಢವಾಗಿ ನಂಬುತ್ತೇನೆ. ನ್ಯಾಯಾಂಗ ತೀರ್ಪುಗಳು ಸಾರ್ವಜನಿಕ ಅಭಿಪ್ರಾಯ ಬೀರುವ ಪ್ರಭಾವದ ಪ್ರತಿಬಿಂಬವಾಗಲಾರವು” ಎಂದು ಅವರು ಹೇಳಿದರು.

ದೇಶದಲ್ಲಿ ಜ್ಯೂರಿ ವ್ಯವಸ್ಥೆ ರದ್ದು, ಸುಪ್ರೀಂ ಕೋರ್ಟ್‌ನ ಶಬರಿ ಮಲೆ ತೀರ್ಪು, ಸಲಿಂಗ ಕಾಮ ಅಪರಾಧವಲ್ಲ ಎನ್ನುವ ನವತೇಜ್‌ ಸಿಂಗ್‌ ಜೋಹರ್‌ ತೀರ್ಪುಗಳ ಕುರಿತಂತೆಯೂ ಅವರು ಮಾತನಾಡಿದರು.

“ಬಹುಸಂಖ್ಯಾತರ ಜೀವನವನ್ನು ಪಾಲಿಸದೇ ಇರುವ ಕಾರಣಕ್ಕೆ ಯಾವುದೇ ಅಲ್ಪಸಂಖ್ಯಾತ ಗುಂಪುಗಳು ನಮ್ಮ ಸಾಂವಿಧಾನಿಕ ಯೋಜನೆಯಡಿ ತಮ್ಮ ಹಕ್ಕುಗಳಿಂದ ವಂಚಿತರಾಗಬಾರದು. ಶಬರಿಮಲೆ,. ಎಲ್‌ಜಿಬಿಟಿ ಹಕ್ಕುಗಳು, ಮರಣದಂಡನೆ ಎದುರಿಸುತ್ತಿರುವವರ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪುಗಳನ್ನು ಗಮನಿಸಿದರೆ ಸಮಾಜದ ಆಕಾಂಕ್ಷೆ ಮತ್ತು ನ್ಯಾಯಿಕ ಆಡಳಿತದ ನಡುವಿನ ಸಂಘರ್ಷ ಮುನ್ನೆಲೆಗೆ ಬರುತ್ತದೆ” ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲರಾದ ನಿಧೇಶ್ ಗುಪ್ತಾ ಮತ್ತು ಸಿದ್ಧಾರ್ಥ್ ಭಟ್ನಾಗರ್ ಕೂಡ ಮಾತನಾಡಿದರು.

Related Stories

No stories found.
Kannada Bar & Bench
kannada.barandbench.com