ನ್ಯಾಯಾಧೀಶರು ಯಾವ ಪ್ರಕರಣದ ವಿಚಾರಣೆ ನಡೆಸುತ್ತಾರೆಂದು ಮೊದಲೇ ಹೇಳಿ ಬಿಡುತ್ತದೆ ಸಾಮಾಜಿಕ ಮಾಧ್ಯಮ: ನ್ಯಾ. ಚಂದ್ರಚೂಡ್

ಆದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿಯನ್ನು ಪ್ರತಿನಿಧಿಸುವುದರಿಂದ ಸಾಮಾಜಿಕ ಮಾಧ್ಯಮ ನಿಯಂತ್ರಿಸುವಾಗ ಕಾಳಜಿ ಮತ್ತು ಎಚ್ಚರಿಕೆ ಇರಬೇಕು ಎಂದು ಅವರು ಪ್ರತಿಪಾದಿಸಿದರು.
Justice DY Chandrachud
Justice DY Chandrachud

ಸಾಮಾಜಿಕ ಮಾಧ್ಯಮದ ಪ್ರಭಾವ ಎಷ್ಟರಮಟ್ಟಿಗೆ ಇದೆ ಎಂದರೆ ನ್ಯಾಯಾಧೀಶರು ಮತ್ತು ನ್ಯಾಯಾಂಗ ಕೂಡ ಅದರಿಂದ ದೂರ ಉಳಿದಿಲ್ಲ ಎಂದು ಸುಪ್ರೀಂ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅಭಿಪ್ರಾಯಪಟ್ಟರು.

'ನ್ಯಾಯ ನಿರ್ಣಯದೊಂದಿಗಿನ ಅನುಭವಗಳು: ಹಕ್ಕುಗಳು, ಅಸ್ಮಿತೆ ಹಾಗೂ ಪೂರ್ವಾಗ್ರಹಗಳ ಸಮನ್ವಯಗೊಳಿಸುವಿಕೆ' ಎಂಬ ವಿಷಯದ ಕುರಿತು ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ (ಎಲ್‌ಎಸ್‌ಇ) ಇತ್ತೀಚೆಗೆ ಮಾತನಾಡಿದರು.

ನ್ಯಾಯಾಧೀಶರು ಪ್ರಕರಣವನ್ನು ಗಮನಿಸುವ ಮೊದಲೇ, ಸಾಮಾಜಿಕ ಮಾಧ್ಯಮಗಳು ಅವರ ಮುಂದೆ ಏನು ನಡೆಯಲಿದೆ ಎಂಬುದನ್ನು ಅವರಿಗೆ ತಿಳಿಸಿರುತ್ತದೆ ಎಂದು ಅವರು ಹೇಳಿದರು. “ವಾದಕ್ಕೂ ಮೊದಲೇ ನಿಮ್ಮ ಮುಂದೆ ಯಾವ ಪ್ರಕರಣ ಬರಲಿದೆ ಅಥವಾ ನೀವು ಯಾವ ವಾದವನ್ನು ಆಲಿಸಲಿದ್ದೀರಿ ಎಂಬುದನ್ನು ನಿಮಗೆ ಹೇಳಲಾಗುತ್ತದೆ. ಇದು ಸಾಮಾಜಿಕ ವಾಸ್ತವವಾಗಿದೆ” ಎಂದು ನ್ಯಾ. ಚಂದ್ರಚೂಡ್‌ ನುಡಿದರು.

ಆದರೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಶಕ್ತಿಯನ್ನು ಪ್ರತಿನಿಧಿಸುವುದರಿಂದ ಸಾಮಾಜಿಕ ಮಾಧ್ಯಮ ನಿಯಂತ್ರಿಸುವಾಗ ಕಾಳಜಿ ಮತ್ತು ಎಚ್ಚರಿಕೆ ಇರಬೇಕು ಎಂದು ಅವರು ಪ್ರತಿಪಾದಿಸಿದರು.

Also Read
ಇ-ಕೋರ್ಟ್‌ ಯೋಜನೆ ಮೂರನೇ ಹಂತದ ಸಿದ್ಧತೆ; ಸ್ವಂತ ಸರ್ವರ್‌ನಿಂದ ಸ್ಟ್ರೀಮಿಂಗ್‌, ರೆಕಾರ್ಡಿಂಗ್‌: ನ್ಯಾ. ಚಂದ್ರಚೂಡ್‌

ನ್ಯಾಯಾಧೀಶರು ಸತ್ಯ, ಪುರಾವೆ ಹಾಗೂ ವಾದಗಳ ಆಧಾರದ ಮೇಲೆ ಪ್ರಕರಣ ನಿರ್ಧರಿಸುತ್ತಾರೆ, ವಿಶೇಷವಾಗಿ ವಿವಾದಕ್ಕೀಡಾದ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಲ್ಲಿ, ನ್ಯಾಯಾಧೀಶರು ಬಹು ಅಭಿಪ್ರಾಯಗಳ ಜ್ಞಾನ ಪಡೆದಿರುವುದು ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.

ಈಗ ವಕೀಲ ವೃತ್ತಿ ಅನೌಪಚಾರಿಕ ನೆಟ್‌ವರ್ಕ್‌ಗಳನ್ನು ಹೇಗೆ ಆಧರಿಸಿದೆ ಎಂಬುದರ ಕುರಿತು ಚರ್ಚಿಸಿದ ಅವರು “ನೀವು ಚೇಂಬರ್‌ ಪ್ರವೇಶಿಸಲು ಬಯಸಿದರೆ ಅದನ್ನು ಅನೌಪಚಾರಿಕ ನೆಟ್‌ವರ್ಕ್‌ ಆಧರಿಸಿ ಪ್ರವೇಶಿಸುತ್ತೀರಿ. ನೀವು ಕಕ್ಷೀದಾರರನ್ನು ತಲುಪಬೇಕಾದರೆ ಅವರ ಸ್ನೇಹದ ಆಧಾರದ ಮೇಲೆ ಅದು ನಿರ್ಧರಿತವಾಗುತ್ತದೆ. ಅದು ಬದಲಾಗಬೇಕು ಎಂದು ನಾನು ನಂಬುತ್ತೇನೆ” ಎಂದು ಆಶಿಸಿದರು.

ಎಲ್‌ಎಸ್‌ಇ ದಕ್ಷಿಣ ಏಷ್ಯಾ ಕೇಂದ್ರದ ನಿರ್ದೇಶಕರಾದ ಪ್ರೊ. ಅಲ್ನೂರ್‌ ಭಿಮಾನಿ, ವಕೀಲೆ ತನ್ವಿ ದುಬೆ, ಎಲ್‌ಎಸ್‌ಇ ದಕ್ಷಿಣ ಏಷ್ಯಾ ಕೇಂದ್ರದ ಉಪ ನಿರ್ದೇಶಕ ಡಾ ನೀಲಾಂಜನ್‌ ಸರ್ಕಾರ್‌ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Stories

No stories found.
Kannada Bar & Bench
kannada.barandbench.com