ಸರ್ಕಾರ ವಿದೇಶಿ ವೈದ್ಯಕೀಯ ಪದವೀಧರರಿಂದ ಇಂಟರ್ನ್‌ಶಿಪ್‌ ಶುಲ್ಕ ಪಡೆಯುವಂತಿಲ್ಲ: ಕೇರಳ ಹೈಕೋರ್ಟ್

ರೋಗಿಗಳ ಪರೀಕ್ಷೆಗೆ ಇಂಟರ್ನ್‌ಗಳನ್ನು ಹೆಚ್ಚಾಗಿ ನಿಯೋಜಿಸಲಾಗುತ್ತದೆ. ಹೀಗಾಗಿ ವೈದ್ಯಕೀಯ ಕಾಲೇಜುಗಳು ಸಹ ಅವರ ಸೇವೆಯಿಂದ ಪ್ರಯೋಜನ ಪಡೆಯುತ್ತವೆ ಎಂದು ನ್ಯಾಯಾಲಯವು ತರ್ಕಿಸಿತು.
Kerala High Court and Doctors
Kerala High Court and Doctors
Published on

ವಿದೇಶಿ ವೈದ್ಯಕೀಯ ಪದವೀಧರರಿಂದ (ಎಫ್‌ಎಂಜಿಗಳು) ಕಡ್ಡಾಯ ಪರಿಭ್ರಮಣ ವೈದ್ಯಕೀಯ ಪ್ರಶಿಕ್ಷಣ (ಸಿಆರ್‌ಎಂಐ) ಶುಲ್ಕ ವಿಧಿಸುವ ರಾಜ್ಯ ಸರ್ಕಾರದ ಆದೇಶವನ್ನು ಕೇರಳ ಹೈಕೋರ್ಟ್ ಇತ್ತೀಚೆಗೆ ರದ್ದುಗೊಳಿಸಿದೆ [ಶಾರೂಕ್ ಮೊಹಮ್ಮದ್ ಮತ್ತಿತರರು ಹಾಗೂ ಕೇರಳ ಸರ್ಕಾರ ಇನ್ನಿತರರು ಹಾಗೂ ಸಂಬಂಧಿತ ಪ್ರಕರಣಗಳು].

ಶುಲ್ಕ ವಿಧಿಸುವುದು ಕಾನೂನುಬಾಹಿರ ಮತ್ತು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಹೊರಡಿಸಿದ ಮಾರ್ಗಸೂಚಿಗಳಿಗೆ ವಿರುದ್ಧ ಎಂದು ನ್ಯಾಯಮೂರ್ತಿ ಎನ್ ನಗರೇಶ್ ಅಭಿಪ್ರಾಯಪಟ್ಟರು.

Also Read
ವಕೀಲರ ಕಲ್ಯಾಣಕ್ಕೆ ₹43 ಕೋಟಿ ಸಂಗ್ರಹಿಸಿದ ಎಸ್‌ಸಿಬಿಎ; ವೈದ್ಯಕೀಯ ವಿಮೆ, ಆರ್ಥಿಕ ಸವಲತ್ತು ಒದಗಿಸುವ ಉದ್ದೇಶ

ಎನ್‌ಎಂಸಿ ಸುತ್ತೋಲೆಗಳು ಇಂಟರ್ನ್‌ಶಿಪ್ (ಪ್ರಶಿಕ್ಷಣ) ಶುಲ್ಕವನ್ನು ಸಂಗ್ರಹಿಸುವುದನ್ನು ಸ್ಪಷ್ಟವಾಗಿ ನಿಷೇಧಿಸಿರುವಾಗ, ರಾಜ್ಯ ಸರ್ಕಾರ ಆಡಳಿತಾತ್ಮಕ ವಿವೇಚನಾಧಿಕಾರ ಉಲ್ಲೇಖಿಸಿ ಅದನ್ನು ಅತಿಕ್ರಮಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ಆರೈಕೆಯಲ್ಲಿ ವಿದೇಶಿ ವೈದ್ಯಕೀಯ ಗುಂಪುಗಳು ವಹಿಸುವ ಸಕ್ರಿಯ ಪಾತ್ರವನ್ನು ನ್ಯಾಯಾಲಯವು ಎತ್ತಿ ತೋರಿಸಿತು.

ರೋಗಿಗಳನ್ನು ಪರೀಕ್ಷಿಸಲು ಇಂಟರ್ನ್‌ಗಳನ್ನು ಬಹುತೇಕ ನಿಯೋಜಿಸಲಾಗುತ್ತದೆ. ಹೀಗಾಗಿ ವೈದ್ಯಕೀಯ ಕಾಲೇಜುಗಳು ಕೂಡ ಅವರ ಸೇವೆಯಿಂದ ಪ್ರಯೋಜನ ಪಡೆಯುತ್ತವೆ ಎಂದು ನ್ಯಾಯಾಲಯ ಅವಲೋಕಿಸಿತು.

ಭಾರತದ ಹೊರಗೆ ವೈದ್ಯಕೀಯ ಪದವಿ ಪಡೆದ ಭಾರತೀಯ ವಿದ್ಯಾರ್ಥಿಗಳು/ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು (ಅರ್ಜಿದಾರರು) ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.

Also Read
ಸುಳ್ಳು ವೈದ್ಯಕೀಯ ವರದಿ: ಇಬ್ಬರು ವೈದ್ಯರ ವಿರುದ್ಧ ಇಲಾಖಾ ತನಿಖೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಭಾರತದ ಹೊರಗಿನ ಸಂಸ್ಥೆಗಳಿಂದ ಪ್ರಾಥಮಿಕ ವೈದ್ಯಕೀಯ ಅರ್ಹತೆ ಪಡೆದ ಭಾರತೀಯ ನಾಗರಿಕರು ಮತ್ತು ವಿದೇಶಿ ಭಾರತೀಯ ನಾಗರಿಕರು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ) ಅಥವಾ ಯಾವುದೇ ರಾಜ್ಯ ವೈದ್ಯಕೀಯ ಮಂಡಳಿಯ ಅಡಿಯಲ್ಲಿ ನೋಂದಣಿ ಪಡೆಯಲು ವಿದೇಶಿ ವೈದ್ಯಕೀಯ ಪದವಿ ಪರೀಕ್ಷೆಯಲ್ಲಿ (ಎಫ್‌ಎಂಜಿಇ) ಉತ್ತೀರ್ಣರಾಗಬೇಕಾಗುತ್ತದೆ. ಕಡ್ಡಾಯ ಪರಿಭ್ರಮಣ ವೈದ್ಯಕೀಯ ಪ್ರಶಿಕ್ಷಣಕ್ಕೆ (ಸಿಆರ್‌ಎಂಐ) ಅರ್ಜಿ ಸಲ್ಲಿಸಲು ಅವರು ರಾಜ್ಯ ವೈದ್ಯಕೀಯ ಮಂಡಳಿಗಳ ಅಡಿಯಲ್ಲಿ ತಾತ್ಕಾಲಿಕ ನೋಂದಣಿಯನ್ನು ಪಡೆಯಬೇಕಾಗುತ್ತದೆ. ರಾಜ್ಯ ವೈದ್ಯಕೀಯ ಮಂಡಳಿಗಳ ಅಡಿಯಲ್ಲಿ ಶಾಶ್ವತ ನೋಂದಣಿಗೆ ಅರ್ಜಿ ಸಲ್ಲಿಸಲು ಅರ್ಹರಾಗಲು ಎಫ್‌ಎಂಜಿಗಳು ಭಾರತೀಯ ವೈದ್ಯಕೀಯ ಪದವೀಧರರಿಗೆ (ಐಎಂಜಿಗಳು) ಅಂತೆಯೇ  12 ತಿಂಗಳ ಸಿಆರ್‌ಎಂಐ ಅನ್ನು ಪೂರ್ಣಗೊಳಿಸಬೇಕಾಗುತ್ತದೆ.

ಅರ್ಜಿದಾರರು ರಷ್ಯಾ, ಬಲ್ಗೇರಿಯಾ, ಫಿಲಿಪೈನ್ಸ್ ಮತ್ತು ಗಯಾನಾದಂತಹ ದೇಶಗಳಲ್ಲಿ ತಮ್ಮ ವೈದ್ಯಕೀಯ ಪದವಿ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ್ದರು. ಶಿಕ್ಷಣ ಪಡೆದು ಹಿಂದಿರುಗಿದ ನಂತರ, ಸಿಆರ್‌ಎಂಐಗೆ ಅರ್ಜಿ ಸಲ್ಲಿಸಿ ವಿವಿಧ  ಸರ್ಕಾರಿ ಆಸ್ಪತ್ರೆಗಳಿಗೆ ನಿಯೋಜನೆಗೊಂಡಿದ್ದರು. ಅರ್ಜಿದಾರರು ತಮ್ಮ ಒಂದು ವರ್ಷದ ಇಂಟರ್ನ್‌ಶಿಪ್ ಪೂರ್ಣಗೊಳಿಸಲು ವಾರ್ಷಿಕ ಶುಲ್ಕ ಪಾವತಿಸಬೇಕಾಗಿತ್ತು. ಈ ಶುಲ್ಕ ಭಾರತೀಯ ವೈದ್ಯಕೀಯ ಪದವೀಧರರಿಗೆ ವಿಧಿಸುವ ಶುಲ್ಕಕ್ಕಿಂತ ಹೆಚ್ಚಾಗಿತ್ತು.

[ತೀರ್ಪಿನ ಪ್ರತಿ]

Attachment
PDF
Sharooq_Mohammed___ors_v_State_of_Kerala___ors_and_connected_cases
Preview
Kannada Bar & Bench
kannada.barandbench.com