ನಮ್ಮದು ಅಮೆರಿಕ ಸುಪ್ರೀಂಕೋರ್ಟ್ ಅಲ್ಲ, 'ಯುವರ್ ಆನರ್' ಎಂದು ಕರೆಯದಿರಿ: ಸಿಜೆಐ ಎಸ್ ಎ ಬೊಬ್ಡೆ ಎಚ್ಚರಿಕೆ

ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿತ್ತು.
Supreme Court
Supreme Court

ನ್ಯಾಯಮೂರ್ತಿಗಳನ್ನು ಯುವರ್‌ ಆನರ್‌ ಎಂದು ಸಂಬೋಧಿಸುವುದಕ್ಕೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಅವರ ನೇತೃತ್ವದ ಪೀಠ ಆಕ್ಷೇಪ ವ್ಯಕ್ತಪಡಿಸಿದೆ. ನಮ್ಮದು ಅಮೆರಿಕ ಸರ್ವೋಚ್ಛ ನ್ಯಾಯಾಲಯ ಅಲ್ಲ, ಆ ರೀತಿ ನಮ್ಮನ್ನು ಕರೆಯದಿರಿ ಎಂದು ಕಾನೂನು ವಿದ್ಯಾರ್ಥಿಯೊಬ್ಬರಿಗೆ ಮಂಗಳವಾರ ಅದು ಎಚ್ಚರಿಸಿತು.

ಇದಕ್ಕೆ ಕ್ಷಮೆಯಾಚಿಸಿದ ಕಾನೂನು ವಿದ್ಯಾರ್ಥಿ ʼಮೈ ಲಾರ್ಡ್‌ʼ ಎಂದು ಸಂಬೋಧಿಸುವುದಾಗಿ ತಿಳಿಸಿದರು. ಆಗ ನ್ಯಾ. ಬೊಬ್ಡೆ ʼಏನೇ ಆಗಲಿ, ಆದರೆ ತಪ್ಪು ಪದಗಳು ಬೇಡʼ ಎಂದರು. ಜೊತೆಗೆ " ನೀವು ನಮ್ಮನ್ನು ತಪ್ಪಾಗಿ ಉಲ್ಲೇಖಿಸಿದ್ದರಿಂದ ಪ್ರಕರಣವನ್ನು ನಾಲ್ಕು ವಾರಗಳ ಕಾಲ ಮುಂದೂಡುತ್ತಿದ್ದೇವೆ.." ಎನ್ನುತ್ತಾ ಪ್ರಕರಣವನ್ನು ಮುಂದೂಡಿದರು.

Also Read
ಇಲ್ಲಿವೆ, 2020ರಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಾದ ಹತ್ತು ವಿಲಕ್ಷಣ ಅರ್ಜಿಗಳು!

ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಕ ಮಾಡುವುದಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿತ್ತು. ಮತ್ತೊಬ್ಬ ನ್ಯಾಯಮೂರ್ತಿ ವಿ ರಾಮಸುಬ್ರಮಣಿಯನ್‌ ಅವರು 'ನೀವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಹೋಂವರ್ಕ್‌ ಮಾಡಿಲ್ಲ. ಮಲಿಕ್ ಮಜಾರ್ ಸುಲ್ತಾನ್ ಪ್ರಕರಣವನ್ನು ನೀವು ಮರೆತಿದ್ದೀರಿʼ ಎಂದು ಕುಟುಕಿದರು.

ಕಳೆದ ವರ್ಷ ಆಗಸ್ಟ್‌ನಲ್ಲಿಯೂ ವಕೀಲರೊಬ್ಬರು ಇದೇ ಬಗೆಯ ಪದ ಪ್ರಸ್ತಾಪಿಸಿದ್ದಕ್ಕೆ ಸುಪ್ರೀಂಕೋರ್ಟ್‌ ಗರಂ ಆಗಿತ್ತು. ಅಂತಹ ಪದಗಳು ವಸಾಹತುಶಾಹಿ ಆಡಳಿತದ ಕುರುಹು ಎಂದು ಆಗ ಅದು ಅಭಿಪ್ರಾಯಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Kannada Bar & Bench
kannada.barandbench.com