ನಿಗದಿತ ವೇಳೆಗೆ ಶುಲ್ಕ ಪಾವತಿಸಲಾಗದ ದಲಿತ ವಿದ್ಯಾರ್ಥಿಗೆ ಬಾಂಬೆ ಐಐಟಿಯಲ್ಲಿ ಸೀಟು ಕಲ್ಪಿಸಲು ಸುಪ್ರೀಂ ಕೋರ್ಟ್ ಆದೇಶ

ಯಾವುದೇ ತಪ್ಪಿಲ್ಲದೆಯೂ ವಿದ್ಯಾರ್ಥಿ ಪ್ರವೇಶಾತಿ ಅವಕಾಶ ಕಳೆದುಕೊಂಡರೆ ಅದು ನ್ಯಾಯದ ದೊಡ್ಡ ವಿಡಂಬನೆಯಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
ನಿಗದಿತ ವೇಳೆಗೆ ಶುಲ್ಕ ಪಾವತಿಸಲಾಗದ ದಲಿತ ವಿದ್ಯಾರ್ಥಿಗೆ ಬಾಂಬೆ ಐಐಟಿಯಲ್ಲಿ ಸೀಟು ಕಲ್ಪಿಸಲು ಸುಪ್ರೀಂ ಕೋರ್ಟ್ ಆದೇಶ

ಭಾರತೀಯ ತಂತ್ರಜ್ಞಾನ ಸಂಸ್ಥೆ - ಬಾಂಬೆಯಲ್ಲಿ (ಐಐಟಿ) ಶಿಕ್ಷಣ ಪಡೆಯಲು ಅರ್ಹತೆ ಹೊಂದಿದ್ದರೂ ತಾಂತ್ರಿಕ ದೋಷದಿಂದಾಗಿ ಗಡುವಿನೊಳಗೆ ಶುಲ್ಕ ಪಾವತಿಸಲಾಗದೆ ಸೀಟು ವಂಚಿತನಾಗಿದ್ದ ದಲಿತ ಸಮುದಾಯದ 17 ವರ್ಷದ ಬಾಲಕನಿಗೆ ಸೀಟು ಸೃಜಿಸುವಂತೆ ಸುಪ್ರೀಂಕೋರ್ಟ್‌ ಸೋಮವಾರ ನಿರ್ದೇಶನ ನೀಡಿದೆ.

ಸಂವಿಧಾನದ 142ನೇ ವಿಧಿಯಡಿಯಲ್ಲಿ ತನ್ನ ಅಧಿಕಾರ ಚಲಾಯಿಸಿ ವಿದ್ಯಾರ್ಥಿಗೆ ಸೀಟು ನಿಗದಿಪಡಿಸುವಂತೆ ಜಂಟಿ ಸೀಟು ಹಂಚಿಕೆ ಪ್ರಾಧಿಕಾರಕ್ಕೆ (ಜೋಸಾ) ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಎ ಎಸ್ ಬೋಪಣ್ಣ ಅವರಿದ್ದ ಪೀಠ ನಿರ್ದೇಶಿಸಿತು. ತನ್ನ ಯಾವುದೇ ತಪ್ಪಿಲ್ಲದೆಯೂ ವಿದ್ಯಾರ್ಥಿ ಪ್ರವೇಶಾತಿ ಅವಕಾಶ ಕಳೆದುಕೊಂಡರೆ ಅದು ನ್ಯಾಯದ ದೊಡ್ಡ ವಿಡಂಬನೆಯಾಗಲಿದೆ ಎಂದು ನ್ಯಾಯಾಲಯ ಹೇಳಿತು.

Also Read
ಐಐಟಿ ಜೆಇಇ ತೇರ್ಗಡೆಯಾದರೂ ಸೀಟು ವಂಚಿತನಾಗಿದ್ದ ದಲಿತ ವಿದ್ಯಾರ್ಥಿಯ ನೆರವಿಗೆ ಧಾವಿಸಿದ ಸುಪ್ರೀಂ ಕೋರ್ಟ್

ಬೇರಾವುದೇ ವಿದ್ಯಾರ್ಥಿಗಳ ಪ್ರವೇಶಾತಿಗೆ ತೊಂದರೆಯಾಗದಂತೆ ಸೀಟು ಹಂಚಿಕೆ ಮಾಡಬೇಕು ಎಂದು ನ್ಯಾಯಾಲಯ ಹೇಳಿತು. ಅಲ್ಲದೆ, ಇತರ ಯಾವುದೇ ಸೀಟು ಖಾಲಿಯಾದರೆ ಈ ಸೀಟನ್ನು ಕ್ರಮಬದ್ಧಗೊಳಿಸುವಂತೆ ಸ್ಪಷ್ಟಪಡಿಸಿತು. ಎಲ್ಲ ಸೀಟುಗಳು ಭರ್ತಿಯಾಗಿದ್ದು, ಸೀಟುಗಳು ಲಭ್ಯವಿಲ್ಲ ಎಂದು ಜೋಸಾ ಮಾಹಿತಿ ನೀಡಿದ ಬಳಿಕ ನ್ಯಾಯಾಲಯ ಪ್ರತ್ಯೇಕವಾಗಿ ಸೀಟು ಸೃಜಿಸಲು ಆದೇಶಿಸಿತು.

ತಾಂತ್ರಿಕ ದೋಷಗಳಿಂದಾಗಿ ವಿದ್ಯಾರ್ಥಿ ಸರಿಯಾದ ಸಮಯಕ್ಕೆ ಶುಲ್ಕ ಪಾವತಿಸಲು ಸಾಧ್ಯವಾಗದೇ ಇರುವುದಕ್ಕೆ ಆತ ಜವಾಬ್ದಾರನಲ್ಲ. ಅಧಿಕಾರಿಗಳು ಇಂತಹ ಅರಣ್ಯಕ ನಿರ್ಧಾರವನ್ನು ಕೈಗೊಳ್ಳುವಂತಿಲ್ಲ ಬದಲಿಗೆ ವಾಸ್ತವಾಂಶಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಾಲಯ ಈ ಹಿಂದಿನ ವಿಚಾರಣೆ ವೇಳೆ ಎಚ್ಚರಿಸಿತ್ತು.

Related Stories

No stories found.
Kannada Bar & Bench
kannada.barandbench.com