ವಿದ್ಯುತ್ ಶುಲ್ಕ ವಿನಾಯಿತಿ: ಅದಾನಿ ಪವರ್ ಮೇಲ್ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್

ಅದಾನಿ ಪವರ್ 2009–10ರ ಸೀಮಿತ ಎಸ್ಇಜಡ್ ಶುಲ್ಕ ವಿನಾಯಿತಿಯನ್ನು ಮುಂದೆಯೂ ವಿಸ್ತರಿಸಲು ಸಾಧ್ಯವಿಲ್ಲ ಎಂದು ಗುಜರಾತ್ ಹೈಕೋರ್ಟ್ ಈ ಹಿಂದೆ ತೀರ್ಪು ನೀಡಿತ್ತು.
Gautam Adani and Supreme Court
Gautam Adani and Supreme Court
Published on

ಗುಜರಾತ್‌ನ ಮುಂದ್ರಾದಲ್ಲಿರುವ ತನ್ನ ಎಸ್‌ಇಜಡ್‌ ಘಟಕದಿಂದ ದೇಶೀಯ ಶುಲ್ಕ ಪ್ರದೇಶಕ್ಕೆ ಸರಬರಾಜು ಮಾಡುವ ವಿದ್ಯುತ್ ಮೇಲಿನ ಕಸ್ಟಮ್ಸ್ ಸುಂಕ ವಿಧಿಸುವುದರಿಂದ ಅದಾನಿ ಪವರ್‌ಗೆ ವಿನಾಯಿತಿ ನಿರಾಕರಿಸಿ ಗುಜರಾತ್ ಹೈಕೋರ್ಟ್‌ ಜೂನ್ 28, 2019ರಂದು ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ರದ್ದುಗೊಳಿಸಿದೆ [ ಅದಾನಿ ಪವರ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ.

Also Read
ಅದಾನಿ ಸಮೂಹಕ್ಕೆ ಆಸ್ತಿ ಮಾರಾಟ: ಸಹಾರಾ ಮನವಿ ಸಂಬಂಧ ಹಣಕಾಸು ಸಚಿವಾಲಯದ ಅಭಿಪ್ರಾಯ ಕೇಳಿದ ಸುಪ್ರೀಂ

ಎಸ್‌ಇಜಡ್‌ದಿಂದ ದೇಶೀಯಸುಂಕ ಪ್ರದೇಶಕ್ಕೆ (ಡಿಟಿಎ) ವಿದ್ಯುತ್ ಸರಬರಾಜು ಮೇಲೆ ವಿಧಿಸಲಾದ ಕಸ್ಟಮ್ಸ್ ಶುಲ್ಕಕ್ಕೆ ಸಂಬಂಧಿಸಿದಂತೆ, 2015ರ ತೀರ್ಪಿನ ಪರಿಣಾಮವನ್ನು ಮಿತಿಗೊಳಿಸುವಂತೆ ಕೋರಿ ಮತ್ತು 2010 ನಂತರದ ಅವಧಿಗೆ ಅನ್ವಯಿಸುವ ಶುಲ್ಕ ಪ್ರಶ್ನಿಸಿ ವಿರುದ್ಧ ಅದಾನಿ ಪವರ್‌ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಗುಜರಾತ್ ಹೈಕೋರ್ಟ್ ನಿರ್ಧಾರ ಸರಿಯೇ ಎಂಬುದನ್ನು ಸುಪ್ರೀಂ ಕೋರ್ಟ್ ಪರಿಶೀಲಿಸಿ ಈ ತೀರ್ಪು ಪ್ರಕಟಿಸಿದೆ.

ಮುಂದ್ರಾ ಎಸ್‌ಇಜಡ್‌ ಪ್ರದೇಶದೊಳಗೆ ಅದಾನಿ ಪವರ್‌ ಸಹ ಡೆವಲಪರ್‌ ಆಗಿ ಕಲ್ಲಿದ್ದಲು ಆಧರಿತ ಬೃಹತ್‌ ಉಷ್ಣ ವಿದ್ಯುತ್‌ ಸ್ಥಾವರ ನಿರ್ವಹಿಸುತ್ತಿದೆ. ಇಲ್ಲಿ ಉತ್ಪಾದಿಸಲಾದ ವಿದ್ಯುತ್ ಅನ್ನು ಎಸ್‌ಇಜಡ್‌ ಒಳಗೂ ಹಾಗೂ ಗುಜರಾತ್ ಮತ್ತು ಇತರ ರಾಜ್ಯಗಳ ವಿತರಣಾ ಕಂಪನಿಗಳಿಗೆ ಸರಬರಾಜು ಮಾಡಲಾಗುತ್ತದೆ. ಸುಂಕ ನಿಯಮಗಳಲ್ಲಿ ಬದಲಾವಣೆಗಳಾದ ಬಳಿಕ, ಎಸ್‌ಇಜಡ್‌ದಿಂದ ದೇಶೀಯ ಸುಂಕ ಪ್ರದೇಶಕ್ಕೆ (ಡಿಟಿಎ) ಸರಬರಾಜು ಮಾಡಿದ ವಿದ್ಯುತ್ ಮೇಲೆ ಶುಲ್ಕ ವಿಧಿಸುವ ಪ್ರಯತ್ನ ನಡೆದಿದ್ದು, ವಿದೇಶಗಳಿಂದ ಆಮದು ಮಾಡಲಾದ ವಿದ್ಯುತ್ ಮೇಲೆ ಅಂತಹ ಶುಲ್ಕ ಇರಲಿಲ್ಲ ಎಂಬ ಕಾರಣದಿಂದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು.

Also Read
ಅದಾನಿ ಸಮೂಹಕ್ಕೆ ಆಸ್ತಿ ಮಾರಾಟ, ತನಿಖೆಗೆ ತಡೆ: ಸುಪ್ರೀಂ ಕೋರ್ಟ್‌ಗೆ ಎರಡು ಅರ್ಜಿ ಸಲ್ಲಿಸಿದ ಸಹಾರಾ ಸಮೂಹ

2015ರಲ್ಲಿ ಗುಜರಾತ್ ಹೈಕೋರ್ಟ್, ನಿರ್ದಿಷ್ಟ ಅವಧಿಗೆ ಮಾತ್ರ ಅದಾನಿ ಪವರ್‌ಗೆ ಶುಲ್ಕ ವಿನಾಯಿತಿ ನೀಡಿತ್ತು. ಆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿರಲಿಲ್ಲ. ಆದರೆ ನಂತರದ ವರ್ಷಗಳಿಗೂ ವಿನಾಯಿತಿ ಅನ್ವಯಿಸಬೇಕು ಎಂಬ ಅದಾನಿ ಪವರ್‌ ಪವರ್‌ ಬೇಡಿಕೆಯನ್ನು ಗುಜರಾತ್ ಹೈಕೋರ್ಟ್ 2019ರಲ್ಲಿ ತಿರಸ್ಕರಿತು. ದುಪ್ಪಟ್ಟು ಲಾಭ ಆಗುವ ಸಾಧ್ಯತೆ ಇದೆ ಎಂದು ಆಗ ಅದು ಹೇಳಿತ್ತು.

ಅದಾನಿ ಪವರ್‌ ಪರವಾಗಿ ಹಿರಿಯ ವಕೀಲ (ಕೇಂದ್ರದ ಮಾಜಿ ಸಚಿವ) ಪಿ. ಚಿದಂಬರಂ ಹಾಗೂ ಇತರ ವಕೀಲರು ಹಾಜರಾಗಿದ್ದರು. ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್‌ ಜನರಲ್ ರಾಘವೇಂದ್ರ ಪಿ. ಶಂಕರ್ ಮತ್ತಿತರ ವಕೀಲರು ವಾದ ಮಂಡಿಸಿದರು.

Kannada Bar & Bench
kannada.barandbench.com