ಹದಿಹರೆಯದ ಹುಡುಗಿಯರು ಲೈಂಗಿಕ ಕಾಮನೆ ಅದುಮಿಡಲು ಹೇಳಿದ್ದ ಹೈಕೋರ್ಟ್‌ಗೆ ಸುಪ್ರೀಂ ತಪರಾಕಿ

"ಆದೇಶ ಸಂಪೂರ್ಣ ತಪ್ಪು ಸಂದೇಶ ನೀಡಲಿದೆ. ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ನ್ಯಾಯಮೂರ್ತಿಗಳು ಅದು ಯಾವ ತತ್ವ ಅನ್ವಯಿಸುತ್ತಿದ್ದಾರೆ" ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.
ಕಲ್ಕತ್ತಾ ಹೈಕೋರ್ಟ್, ಸುಪ್ರೀಂ ಕೋರ್ಟ್
ಕಲ್ಕತ್ತಾ ಹೈಕೋರ್ಟ್, ಸುಪ್ರೀಂ ಕೋರ್ಟ್
Published on

ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕಕಾಮನೆಗಳನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಹೇಳಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶವು ತಪ್ಪು ಸಂದೇಶಗಳನ್ನು ಕಳುಹಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ.

ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ನ್ಯಾಯಮೂರ್ತಿಗಳು ತಮ್ಮ ಅಧಿಕಾರ ಬಳಸಿ ಇಂತಹ ಅವಲೋಕನ ಮಾಡುವ ರೀತಿ ಕುರಿತು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಸಂಕ್ಷಿಪ್ತವಾಗಿ ಕಳವಳ ವ್ಯಕ್ತಪಡಿಸಿತು.

"ಆದೇಶ ಸಂಪೂರ್ಣ ತಪ್ಪು ಸಂದೇಶ ನೀಡಲಿದೆ. ಸಿಆರ್‌ಪಿಸಿ ಸೆಕ್ಷನ್ 482ರ ಅಡಿಯಲ್ಲಿ ಅದು ಯಾವ ತತ್ವವನ್ನು ನ್ಯಾಯಮೂರ್ತಿಗಳು ಅನ್ವಯಿಸಿದ್ದಾರೆ" ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಹದಿಹರೆಯದ ಹುಡುಗಿಯರು "ಕ್ಷಣಿಕ ಖುಷಿಗೆ ಶರಣಾಗುವ ಬದಲು" ತಮ್ಮ ಲೈಂಗಿಕ ಕಾಮನೆಗಳನ್ನು "ನಿಯಂತ್ರಿಸಬೇಕು" ಎಂದು ಕಲ್ಕತ್ತಾ ಹೈಕೋರ್ಟ್ ನೀಡಿದ್ದ ತೀರ್ಪಿನ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯಿದೆ (ಪೋಕ್ಸೊ ಕಾಯಿದೆ) ಹದಿಹರೆಯದವರಲ್ಲಿ ಸಮ್ಮತಿಯ ಲೈಂಗಿಕ ಚಟುವಟಿಕೆಯನ್ನು ಲೈಂಗಿಕ ದೌರ್ಜನ್ಯದೊಂದಿಗೆ ಬೆರೆಸುವ ಬಗ್ಗೆ ಹೈಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಜೊತೆಗೆ 16 ವರ್ಷಕ್ಕಿಂತ ಮೇಲ್ಪಟ್ಟ ಹದಿಹರೆಯದವರನ್ನು ಒಳಗೊಳ್ಳುವ ಸಮ್ಮತಿಯ ಲೈಂಗಿಕ ಕ್ರಿಯೆಗಳನ್ನು ಅಪರಾಧಮುಕ್ತಗೊಳಿಸುವಂತೆ ಸಲಹೆ ನೀಡಿತ್ತು.

Also Read
ಲೈಂಗಿಕ ಕಾಮನೆ ನಿಯಂತ್ರಣಕ್ಕೆ ಹುಡುಗಿಯರಿಗೆ ಕಲ್ಕತ್ತಾ ಹೈಕೋರ್ಟ್ ಆದೇಶ: ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಸುಪ್ರೀಂ

ಚಿಕ್ಕ ವಯಸ್ಸಿನಲ್ಲಿ ಲೈಂಗಿಕ ಸಂಬಂಧಗಳಿಂದ ಉಂಟಾಗುವ ಕಾನೂನು ತೊಡಕುಗಳನ್ನು ತಪ್ಪಿಸಲು ಹದಿಹರೆಯದವರಿಗೆ ಸಮಗ್ರ ಹಕ್ಕು ಆಧಾರಿತ ಲೈಂಗಿಕ ಶಿಕ್ಷಣ ನೀಡುವಂತೆಯೂ ಹೈಕೋರ್ಟ್ ಆ ಸಂದರ್ಭದಲ್ಲಿ ಕಿವಿಮಾತು ಹೇಳಿತ್ತು.

ಆದರೆ ಹದಿಹರೆಯದವರು ಕರ್ತವ್ಯ ಅಥವಾ ಬಾಧ್ಯತೆಗಳನ್ನು ನಿರ್ವಹಿಸಬೇಕಿದ್ದು ಹದಿಹರೆಯದ ಹುಡುಗಿಯರು ಮತ್ತು ಹುಡುಗರ ಕರ್ತವ್ಯಗಳು ಬೇರೆ ಬೇರೆಯಾಗಿವೆ ಎಂದು ಹೈಕೋರ್ಟ್‌ ಪ್ರಸ್ತಾಪಿಸುವ ಮೂಲಕ ತೀರ್ಪು ವಿವಾದದ ಸ್ವರೂಪ ಪಡೆದಿತ್ತು.

Kannada Bar & Bench
kannada.barandbench.com