ವಕೀಲರು ಮತ್ತು ದಾವೆದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸುವುದಕ್ಕಾಗಿ 27 ಹೆಚ್ಚುವರಿ ನ್ಯಾಯಾಲಯ ಕೊಠಡಿಗಳು, 4 ರಿಜಿಸ್ಟ್ರಾರ್ ಕೊಠಡಿಗಳನ್ನು ಒಳಗೊಂಡ ಮೂಲಸೌಕರ್ಯ ವಿಸ್ತರಿಸಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮಂಗಳವಾರ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆವರಣದಲ್ಲಿ ಎಸ್‌ಸಿಬಿಎ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನ್ಯಾಯಾಂಗ ಮೂಲಸೌಕರ್ಯ ಕೊರತೆಯನ್ನು ಆದಷ್ಟು ಬೇಗನೆ ಪರಿಶೀಲಿಸುವ ನಿಟ್ಟಿನಲ್ಲಿ ಹೆಚ್ಚುವರಿ ನ್ಯಾಯಾಲಯ ಕೊಠಡಿಗಳು ಮತ್ತು ಇತರ ಸೌಲಭ್ಯಗಳಿಗಾಗಿ ಹೊಸ ಕಟ್ಟಡ ನಿರ್ಮಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ ಎಂದು ಸಿಜೆಐ ವಿವರಿಸಿದರು.
ಸುಪ್ರೀಂ ಕೋರ್ಟ್ ವಕೀಲರ ಸಂಘ (ಎಸ್‌ಸಿಬಿಎ), ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಸಂಘ (ಎಸ್‌ಸಿಎಒಆರ್‌ಎ) ಮತ್ತು ಮಹಿಳಾ ವಕೀಲರ ಕೊಠಡಿ ಹಾಗೂ ಹೆಚ್ಚುವರಿ ನ್ಯಾಯಾಲಯ ಕೊಠಡಿ ನಿರ್ಮಿಸುವುದಕ್ಕಾಗಿ ಈಗಿರುವ ವಸ್ತುಸಂಗ್ರಹಾಲಯ ಮತ್ತು ಅನೆಕ್ಸ್ ಕಟ್ಟಡವನ್ನು ಕೆಡವಲಾಗುವುದು ಎಂದು ಅವರು ಬಹಿರಂಗಪಡಿಸಿದರು.