ಗೌತಮ್ ನವಲಾಖಾ ಗೃಹ ಬಂಧನ ಅವಧಿ ಒಂದು ತಿಂಗಳು ವಿಸ್ತರಿಸಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ಪೀಠವು ಗೃಹಬಂಧನದ ಮಧ್ಯಂತರ ಆದೇಶವನ್ನು 2023ರ ಜನವರಿ ಎರಡನೇ ವಾರದವರೆಗೆ ವಿಸ್ತರಿಸಿತು. ಅಂದಿನಿಂದ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.
Gautam Navlakha, Supreme Court
Gautam Navlakha, Supreme Court

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ, ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಾಖಾ ಅವರಿಗೆ ವಿಧಿಸಲಾಗಿದ್ದ ಗೃಹ ಬಂಧನ ಅವಧಿಯನ್ನು ಒಂದು ತಿಂಗಳ ಕಾಲ ವಿಸ್ತರಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ [ಗೌತಮ್‌ ನವಲಖಾ ಮತ್ತು ಎನ್‌ಐಎ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠವು ಗೃಹಬಂಧನದ ಮಧ್ಯಂತರ ಆದೇಶವನ್ನು 2023 ರ ಜನವರಿ ಎರಡನೇ ವಾರದವರೆಗೆ ವಿಸ್ತರಿಸಿತು. ಅಂದಿನಿಂದ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

Also Read
ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ಹಿಜಾಬ್ ಪ್ರಕರಣ, ಕಪ್ಪನ್ ಜಾಮೀನು ಅರ್ಜಿ, ನವಲಖಾ ಮೇಲ್ಮನವಿಗಳ ವಿಚಾರಣೆ

ನವಲಾಖಾ ಅವರಿಗೆ ಜೈಲಿನ ಬದಲಿಗೆ ಒಂದು ತಿಂಗಳ ಕಾಲ ಗೃಹಬಂಧನ ವಿಧಿಸುವಂತೆ ಕೋರಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಪುರಸ್ಕರಿಸಿತ್ತು. ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ನ ಮಾಜಿ ಕಾರ್ಯದರ್ಶಿ ನವಲಾಖಾ ಅವರನ್ನು ಆಗಸ್ಟ್ 2018 ರಲ್ಲಿ ಬಂಧಿಸಿ ಆರಂಭದಲ್ಲಿ ಗೃಹ ಬಂಧನದಲ್ಲಿರಿಸಲಾಗಿತ್ತು. ಸುಪ್ರೀಂ ಕೋರ್ಟ್ ಆದೇಶದ ನಂತರ ಅವರನ್ನು ಏಪ್ರಿಲ್ 2020 ರಲ್ಲಿ ಮಹಾರಾಷ್ಟ್ರದ ತಲೋಜಾ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

Also Read
ದೇಶದ್ರೋಹ, ಯುಎಪಿಎ ಅಡಿ ಬಂಧಿತರಾದವರು ದೂರವಾಣಿ ಸೌಲಭ್ಯ ಪಡೆಯಲು ಅರ್ಹರಲ್ಲ: ನವಲಖಾ ಮನವಿ ಕುರಿತು ಮಹಾರಾಷ್ಟ್ರ ಸರ್ಕಾರ

ಆದರೆ ತಲೋಜಾ ಜೈಲಿನಲ್ಲಿ ಮೂಲಭೂತ ವೈದ್ಯಕೀಯ ನೆರವು ಮತ್ತಿತರ ಸೌಲಭ್ಯಗಳನ್ನು ನಿರಾಕರಿಸುತ್ತಿದ್ದು ತಮಗೆ ವಯಸ್ಸಾದ ಕಾರಣ ಸಂಕಷ್ಟ ಅನುಭವಿಸುತ್ತಿರುವುದಾಗಿ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು.

ಆದರೆ ಹೈಕೋರ್ಟ್‌ ಮನವಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ನವಲಾಖಾ ಅವರು ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಅರ್ಜಿ ಸಲ್ಲಿಸಿದರು. ಅವರ ಮನವಿಯನ್ನು ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್‌ ಹಲವು ನಿಬಂಧನೆಗಳನ್ನು ವಿಧಿಸಿ ಜೈಲಿನ ಬದಲು ಗೃಹಬಂಧನದಲ್ಲಿರುವಂತೆ ಸೂಚಿಸಿತ್ತು.

Kannada Bar & Bench
kannada.barandbench.com