ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು

ತೀಸ್ತಾ ಅವರು ತಮ್ಮ ವಿರುದ್ಧದ ಆರೋಪಪಟ್ಟಿಯನ್ನು ಪ್ರಶ್ನಿಸದಿರುವುದು ಮೇಲ್ನೋಟಕ್ಕೆ ಪ್ರಕರಣವಿದೆ ಎನ್ನುವುದರ ಸೂಚನೆ ಎಂಬ ಗುಜರಾತ್ ಹೈಕೋರ್ಟ್ ಅವಲೋಕನ ವಿಕೃತವಾದುದು ಎಂದು ನ್ಯಾಯಾಲಯ ಟೀಕಿಸಿದೆ.
Teesta setalvad and Supreme Court
Teesta setalvad and Supreme Court
Published on

ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ಅಂದಿನ ಗುಜರಾತ್‌ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರ ವಿರುದ್ಧ ಸಂಚು ರೂಪಿಸಿದ್ದರು ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್‌ ಅವರಿಗೆ ಸುಪ್ರೀಂ ಕೋರ್ಟ್‌ ಬುಧವಾರ ಜಾಮೀನು ನೀಡಿದೆ [ತೀಸ್ತಾ ಅತುಲ್‌ ಸೆಟಲ್‌ವಾಡ್‌ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ಸೆಟಲ್‌ವಾಡ್ ಅವರು ಎಫ್‌ಐಆರ್ ಮತ್ತು ಆರೋಪಪಟ್ಟಿಯನ್ನು ಸಿಆರ್‌ಪಿಸಿ ಸೆಕ್ಷನ್ 482 ಅಥವಾ ಸಂವಿಧಾನದ  226 ಇಲ್ಲವೇ 32ನೇ ವಿಧಿಯಡಿ ಪ್ರಶ್ನಿಸದ ಕಾರಣ ಆಕೆ ತಮ್ಮ ವಿರುದ್ಧ ಮೇಲ್ನೋಟಕ್ಕೆ ಪ್ರಕರಣವಿಲ್ಲ ಎಂದು ಹೇಳಲು ಸಾಧ್ಯವಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ಹೇಳಿರುವುದನ್ನು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ ಮತ್ತು ದೀಪಂಕರ್ ದತ್ತಾ ಅವರಿದ್ದ ಪೀಠ ಗಮನಿಸಿತು. ಹೈಕೋರ್ಟ್‌ನ ಅಂತಹ ಶೋಧನೆಯು 'ಚುಟುಕಾಗಿ ಹೇಳಬೇಕೆಂದರೆ ವಿಕೃತವಾದುದು' ಎಂದು ಅದು ಕಿವಿ ಹಿಂಡಿತು.

Also Read
ತೀಸ್ತಾ ಅವರನ್ನು ಜು.19ರವರೆಗೆ ಬಂಧಿಸದಂತೆ ಮಧ್ಯಂತರ ರಕ್ಷಣೆ ವಿಸ್ತರಿಸಿದ ಸುಪ್ರೀಂ ಕೋರ್ಟ್

ಹೈಕೋರ್ಟ್‌ನ ಈ ಅವಲೋಕನವನ್ನು ಒಪ್ಪಿದರೆ ಸಂವಿಧಾನದ 226 ಅಥವಾ 32 ನೇ ವಿಧಿ ಅಥವಾ ಸಿಆರ್‌ಪಿಸಿ ಸೆಕ್ಷನ್‌  482ರ ಅಡಿ ಆರೋಪಪಟ್ಟಿಯನ್ನು ಪ್ರಶ್ನಿಸದೇ ಯಾವುದೇ ಜಾಮೀನು ಅಜಿಯನ್ನು ವಿಚಾರಣಾ ಪೂರ್ವದಲ್ಲಿ ನಿರ್ಧರಿಸಲು ಸಾಧ್ಯವಾಗುವುದಿಲ್ಲ ಎಂದು ನ್ಯಾಯಾಲಯ ಚಾಟಿ ಬೀಸಿತು.

ತೀಸ್ತಾ ಅವರು ತಮ್ಮ ವಿರುದ್ಧದ ಆರೋಪಪಟ್ಟಿಯನ್ನು ಪ್ರಶ್ನಿಸದಿರುವುದು ಮೇಲ್ನೋಟಕ್ಕೆ ಪ್ರಕರಣವಿದೆ ಎನ್ನುವುದರ ಸೂಚನೆ ಎಂಬ ಗುಜರಾತ್ ಹೈಕೋರ್ಟ್ ಅವಲೋಕನ ವಿಕೃತವಾದುದು ಎಂದು ನ್ಯಾಯಾಲಯ ಹೇಳಿತು.

ಹಾಗಾಗಿ ಸೆಟಲ್ವಾಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ಸರ್ವೋಚ್ಚ ನ್ಯಾಯಾಲಯ, ಹೈಕೋರ್ಟ್ ಆದೇಶವನ್ನು ತಳ್ಳಿ ಹಾಕಿತು. ಸೆಟಲ್ವಾಡ್ ಅವರಿಗೆ ಸುಪ್ರೀಂ ಕೋರ್ಟ್ ಜುಲೈ 1 ರಂದು ಮಧ್ಯಂತರ ರಕ್ಷಣೆ ನೀಡಿತ್ತು.

Kannada Bar & Bench
kannada.barandbench.com