ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ನ್ಯಾಯಮೂರ್ತಿಗಳ ಸಿಬ್ಬಂದಿ ವರ್ಗದವರಿಗೆ ಕೂಡ ಕೋವಿಡ್ ದೃಢಪಟ್ಟಿತ್ತು. ಸುಪ್ರೀಂಕೋರ್ಟ್ ಇ ಸಮಿತಿ ಅಧ್ಯಕ್ಷರೂ ಆಗಿರುವ ನ್ಯಾ. ಚಂದ್ರಚೂಡ್ ಕೋವಿಡ್ ಬಿಕ್ಕಟ್ಟಿನ ವೇಳೆ ದೇಶದ ನ್ಯಾಯಾಲಯಗಳು ವರ್ಚುವಲ್ ವಿಧಾನದ ಮೂಲಕ ಕಾರ್ಯ ನಿರ್ವಹಿಸುವಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾರೆ.
ನ್ಯಾ. ಚಂದ್ರಚೂಡ್ ಅವರು ಕೋವಿಡ್ ಸಮಸ್ಯೆಗಳಿಗೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ಅರ್ಜಿಗಳ ವಿಚಾರಣೆ ನಡೆಸುತ್ತಿರುವ ನ್ಯಾಯಪೀಠದ ಮುಖ್ಯಸ್ಥರೂ ಕೂಡ. ತಾಂತ್ರಿಕ ತೊಂದರೆಗಳಿಂದ ಸೋಮವಾರ ನಡೆಯಬೇಕಿದ್ದ ಕೋವಿಡ್ ಸಂಬಂಧಿತ ಪ್ರಕರಣಗಳ ವಿಚಾರಣೆ ಗುರುವಾರಕ್ಕೆ ಮುಂದೂಡಲಾಗಿತ್ತು. ಅಫಿಡವಿಟ್‌ಗಳನ್ನು ಅಧ್ಯಯನ ಮಾಡಿ ಗುರುವಾರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾ. ಚಂದ್ರಚೂಡ್ ಅವರಿದ್ದ ಪೀಠ ತಿಳಿಸಿತ್ತು.
ಈಗ ಆ ಪ್ರಕರಣಗಳನ್ನು ಗುರುವಾರ ವಿಚಾರಣೆ ನಡೆಸುವುದಿಲ್ಲ. ಕಳೆದ ಏಪ್ರಿಲ್‌ನಲ್ಲಿ ಸುಪ್ರೀಂಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳಿಗೆ ಕೋವಿಡ್ ದೃಢಪಟ್ಟಿತ್ತು. ಅವರಲ್ಲಿ ನ್ಯಾಯಮೂರ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು.