ಅಪ್‌ಡೇಟ್‌ ಆದ ಸರ್ವೋಚ್ಚ ನ್ಯಾಯಾಲಯದ ಮೊಬೈಲ್ ಆ್ಯಪ್: ಸರ್ಕಾರಿ ಇಲಾಖೆಗಳ ಪ್ರಕರಣ ಬಾಕಿ ಪರಿಶೀಲನೆಗೆ ಅನುವು

ಆ್ಯಪ್ ಈಗಾಗಲೇ ಆಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿದ್ದು, ಇನ್ನೊಂದು ವಾರದಲ್ಲಿ ಆಪಲ್/ಐಒಎಸ್ ಬಳಕೆದಾರರಿಗೆ ದೊರೆಯಲಿದೆ ಎಂದು ಸಿಜೆಐ ಚಂದ್ರಚೂಡ್ ತಿಳಿಸಿದ್ದಾರೆ.
Supreme Court and SC App
Supreme Court and SC App A1

ಆಂಡ್ರಾಯ್ಡ್ ಬಳಕೆದಾರರಿಗೆ ತನ್ನ ಮೊಬೈಲ್ ಅಪ್ಲಿಕೇಶನ್‌ನ ನವೀಕೃತ ಆವೃತ್ತಿಯನ್ನು ಸುಪ್ರೀಂ ಕೋರ್ಟ್ ಬುಧವಾರ ಬಿಡುಗಡೆ ಮಾಡಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರು ತೆರೆದ ನ್ಯಾಯಾಲಯದಲ್ಲಿ ಈ ವಿಚಾರ ಪ್ರಕಟಿಸಿದರು.

ನವೀಕರಿಸಿದ ಅಪ್ಲಿಕೇಶನ್‌ನಿಂದಾಗಿ ಕಾನೂನು ಅಧಿಕಾರಿಗಳು ತಾವು ಹಾಜರಾಗಬೇಕಿರುವ ಪ್ರಕರಣಗಳಿಗೆ ನೈಜ ಸಮಯದಲ್ಲಿ ಪ್ರವೇಶ  ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು. ಜೊತೆಗೆ ಎಲ್ಲಾ ಸರ್ಕಾರಿ ಇಲಾಖೆಗಳು ತಮ್ಮ ಪ್ರಕರಣಗಳ ಬಾಕಿ ಕುರಿತಂತೆ ಪರಿಶೀಲಿಸಬಹುದು ಎಂದು ವಿವರಿಸಿದರು.

Also Read
ಟ್ರೂಕಾಲರ್ ಆ್ಯಪ್ ವಿರುದ್ಧದ ಮನವಿ ಪುರಸ್ಕರಿಸಲು ಸುಪ್ರೀಂ ನಕಾರ; ಆ್ಯಪ್‌ಗಳ ನಿಷೇಧ ತನ್ನ ಕೆಲಸವಲ್ಲ ಎಂದ ನ್ಯಾಯಾಲಯ

ಸಂಬಂಧಿತವಾಗಿ, ಎಲ್ಲಾ ಸರ್ಕಾರಿ ಇಲಾಖೆಗಳು ತಮ್ಮ ಪ್ರಕರಣಗಳ ಬಾಕಿಯನ್ನು ಪರಿಶೀಲಿಸಬಹುದು ಎಂದು ಅವರು ಹೇಳಿದರು.

"ಸುಪ್ರೀಂ ಕೋರ್ಟ್‌ನ ಮೊಬೈಲ್ ಅಪ್ಲಿಕೇಶನ್ 2.0 ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ಸಿದ್ಧವಾಗಿದೆ. ಇನ್ನುಒಂದು ಗಂಟೆಯಲ್ಲಿ ಇದು ಲಭ್ಯ. ದಯವಿಟ್ಟು ಅದನ್ನು ಬಳಸಲು ಪ್ರಾರಂಭಿಸಿ. ಈ ಬಾರಿ ನಾವು ಹೊಸ ವೈಶಿಷ್ಟ್ಯಗಳನ್ನು ನೀಡಿದ್ದೇವೆ, ಎಲ್ಲಾ ಕಾನೂನು ಅಧಿಕಾರಿಗಳು ಖುದ್ದು ಪ್ರವೇಶ ಪಡೆಯಬಹುದು ಎಲ್ಲಾ ಸರ್ಕಾರಿ ಇಲಾಖೆಗಳು ಅವರ ಪ್ರಕರಣಗಳ ಬಾಕಿ ಪರಿಶೀಲಿಸಬಹುದು. ದಯವಿಟ್ಟು ಅದನ್ನು ಬಳಸಿ,” ಎಂದರು.

ಇನ್ನೊಂದು ವಾರದಲ್ಲಿ ಆಪಲ್/ಐಒಎಸ್ ಬಳಕೆದಾರರಿಗೂ ನವೀಕೃತ ಅಪ್ಲಿಕೇಷನ್‌ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Related Stories

No stories found.
Kannada Bar & Bench
kannada.barandbench.com