“ನನ್ನ ಸಮಾವೇಶ ಮುಗಿದ ಬಳಿಕ ಮುಸ್ಲಿಂ ವಿರೋಧಿ ಘೋಷಣೆ ಹಾಕಲಾಗಿದೆ:” ಸುಪ್ರೀಂ ಕೋರ್ಟ್‌ ವಕೀಲ ಅಶ್ವಿನಿ ಉಪಾಧ್ಯಾಯ

ಉಪಾಧ್ಯಾಯ ಅವರು ಸಂಘಟಿಸಿದ್ದ ಸಮಾವೇಶದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಭಾರತ್‌ ಜೋಡೊ ಅಭಿಯಾನದಡಿ ಮಾರ್ಚ್‌ಗೆ ಕರೆ ನೀಡಲಾಗಿತ್ತು.
Jantar Mantar protest and ashwini upadhyay
Jantar Mantar protest and ashwini upadhyay

ದೇಶದಲ್ಲಿ ವಸಹಾತುಶಾಹಿ ಕಾಲದ ಕಾನೂನುಗಳನ್ನು ಕೊನೆಗೊಳಿಸಬೇಕು ಎಂದು ಆಗ್ರಹಿಸಿ ಭಾನುವಾರ ದೆಹಲಿಯಲ್ಲಿ ಸುಪ್ರೀಂ ಕೋರ್ಟ್‌ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಸಂಘಟಿಸಿದ್ದ ಸಮಾವೇಶದ ಬಳಿಕ ಮುಸ್ಲಿಂ ವಿರೋಧಿ ಘೋಷಣೆ ಯಾರು ಹಾಕಿದ್ದಾರೆ ಎಂಬುದರ ಬಗ್ಗೆ ತಮಗೆ ಅರಿವಿಲ್ಲ ಎಂದು ಹೇಳಿದ್ದಾರೆ.

ಉಪಾಧ್ಯಾಯ ಅವರು ಸಂಘಟಿಸಿದ್ದ ಸಮಾವೇಶದಲ್ಲಿ ನೂರಾರು ಜನರು ಭಾಗಿಯಾಗಿದ್ದು, ಭಾರತ್‌ ಜೋಡೊ ಅಭಿಯಾನದಡಿ ಮಾರ್ಚ್‌ಗೆ ಕರೆ ನೀಡಲಾಗಿತ್ತು. ವಸಹಾತುಶಾಹಿ ಕಾಲದ ಕಾನೂನುಗಳನ್ನು ರದ್ದುಗೊಳಿಸಿ, ದೇಶದ ಎಲ್ಲಾ ಜನರಿಗೂ ಏಕೃಕೀತ ಕಾನೂನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಸಮಾವೇಶ ಆಯೋಜಿಸಲಾಗಿತ್ತು.

ಕಳೆದ ತಿಂಗಳು ಭಾರತೀಯ ದಂಡ ಸಂಹಿತೆಯನ್ನು ವಿರೋಧಿಸಿ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದು, ಕಾನೂನು ಪರಿಪಾಲನೆ ಮತ್ತು ಸಮಾನತೆಯ ದೃಷ್ಟಿಯಿಂದ ಸಮಗ್ರ ಮತ್ತು ಕಠಿಣವಾದ ದಂಡ ಸಂಹಿತೆ ಕಾನೂನು ರೂಪಿಸಲು ತಜ್ಞರನ್ನು ಒಳಗೊಂಡ ನ್ಯಾಯಿಕ ಸಮಿತಿ ರಚಿಸುವಂತೆ ಕೋರಿದ್ದಾರೆ. ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುವಂತೆ ಕೋರಿಯೂ ಸುಪ್ರೀಂ ಕೋರ್ಟ್‌ನಲ್ಲಿ ಉಪಾಧ್ಯಾಯ ಅರ್ಜಿ ಸಲ್ಲಿಸಿದ್ದಾರೆ.

Also Read
ಸಿಎಎ ವಿರೋಧಿ ಪ್ರತಿಭಟನೆ: ಅಸ್ಸಾಂ ಶಾಸಕ ಅಖಿಲ್ ಗೊಗೋಯಿ ಅವರನ್ನು ಖುಲಾಸೆಗೊಳಿಸಿದ ಎನ್ಐಎ ನ್ಯಾಯಾಲಯ

“ಕೋಮುದ್ವೇಷದ ಘೋಷಣೆಗಳನ್ನು ನನ್ನ ಸಮಾವೇಶ ಮುಗಿದ ಬಳಿಕ ಹಾಕಲಾಗಿದೆ” ಎಂದು ಉಪಾಧ್ಯಾಯ ಹೇಳಿದ್ದಾರೆ. “ಬೆಳಿಗ್ಗೆ 10 ರಿಂದ 12 ಗಂಟೆ ಆಸುಪಾಸಿನಲ್ಲಿ ಸಮಾವೇಶ ನಡೆದಿದ್ದು, ಸಂಜೆ 5 ಗಂಟೆಗೆ ಘೋಷಣೆ ಹಾಕಲಾಗಿದೆ. ಪಾರ್ಕ್‌ ಹೋಟೆಲ್‌ ಹೊರಗೆ ನಮ್ಮ ಸಮಾವೇಶ ನಡೆದಿದೆ. ಆದರೆ, ಸಂಸತ್‌ ಕಟ್ಟಡ ಪೊಲೀಸ್‌ ಠಾಣೆಯ ಸಮೀಪ ಘೋಷಣೆ ಹಾಕಲಾಗಿದೆ. ಘೋಷಣೆ ಹಾಕಿದವರು ಯಾರು ಎಂಬುದು ನನಗೆ ತಿಳಿದಿಲ್ಲ” ಎಂದು ಉಪಾಧ್ಯಾಯ ಅವರು ಬಾರ್‌ ಅಂಡ್‌ ಬೆಂಚ್‌ಗೆ ತಿಳಿಸಿದ್ದಾರೆ.

ರಾಜಕಾರಣಿ, ಬಿಜೆಪಿ ವಕ್ತಾರ, ವಕೀಲರಾದ ಉಪಾಧ್ಯಾಯ ಅವರು ಸುಪ್ರೀಂ ಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಹಲವಾರು ಸಾರ್ವಜನಿಕ ಹಿತಾಸಕ್ತಿ ಮನವಿಗಳನ್ನು ಸಲ್ಲಿಸುವ ಮೂಲಕ ಗಮನಸೆಳೆದಿರುತ್ತಾರೆ.

Related Stories

No stories found.
Kannada Bar & Bench
kannada.barandbench.com