ಹಳೆಯದಾದ ಮೋಟಾರು ಅಪಘಾತ ಪ್ರಕರಣಗಳು, ಕ್ರಿಮಿನಲ್ ಮೇಲ್ಮನವಿಗಳ ವಿಚಾರಣೆಗೆ ವಿಶೇಷ ಪೀಠ ಸ್ಥಾಪಿಸಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಕೆ.ವಿನೋದ್ ಚಂದ್ರನ್ ಮತ್ತು ಎನ್ ವಿ ಅಂಜಾರಿಯಾ ಅವರನ್ನು ಒಳಗೊಂಡ ಪೀಠ ಪ್ರತಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸಲಿದೆ.
Motor vehicle accident (For representation only).
Motor vehicle accident (For representation only).
Published on

ಹಳೆಯದಾದ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿಯ ಪ್ರಕರಣಗಳು ಮತ್ತು ಕ್ರಿಮಿನಲ್ ಮೇಲ್ಮನವಿಗಳನ್ನು ಆಲಿಸಲು  ಸುಪ್ರೀಂ ಕೋರ್ಟ್ ವಿಶೇಷ ಪೀಠ ರಚಿಸಿದೆ.

ನ್ಯಾಯಮೂರ್ತಿಗಳಾದ ಕೆ ವಿನೋದ್ ಚಂದ್ರನ್ ಮತ್ತು ಎನ್ ವಿ ಅಂಜಾರಿಯಾ ಅವರನ್ನು ಒಳಗೊಂಡ ಪೀಠ ಪ್ರತಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿಚಾರಣೆ ನಡೆಸಲಿದೆ. ಪೀಠ ರಚಿಸುವ ಕುರಿತು ಜುಲೈ 29ರಂದು ಸುಪ್ರೀಂ ಕೋರ್ಟ್ ಹೊರಡಿಸಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

Justice K Vinod Chandran and Justice NV Anjaria
Justice K Vinod Chandran and Justice NV Anjaria

ಆಗಸ್ಟ್ 1, ಶುಕ್ರವಾರದಿಂದ ಪೀಠವು ಪ್ರಕರಣಗಳ ವಿಚಾರಣೆ ಪ್ರಾರಂಭಿಸಲಿದೆ.

ವಕೀಲ ವರ್ಗ ಕಕ್ಷಿದಾರರು ಹಾಗೂ ಸಂಬಂಧಪಟ್ಟವರು ಪ್ರಕರಣಗಳ ಮುಂದೂಡಿಕೆಗೆ ಯತ್ನಿಸದೆ  ಸಹಕಾರ ನೀಡುವಂತೆ ನೋಟಿಸ್‌ ತಿಳಿಸಿದೆ.

[ನೋಟಿಸ್‌ ಪ್ರತಿ]

Attachment
PDF
Special_Bench
Preview
Kannada Bar & Bench
kannada.barandbench.com