![ಕಾರಿನಲ್ಲಿ ಏರ್‌ಬ್ಯಾಗ್ ಅಳವಡಿಸದ ಕಂಪೆನಿ: ಗ್ರಾಹಕರ ಆಯೋಗ ವಿಧಿಸಿದ್ದ ಪರಿಹಾರ ಪಾವತಿಸಲು ಸುಪ್ರೀಂ ಆದೇಶ [ಚುಟುಕು]](http://media.assettype.com/barandbench-kannada%2F2022-04%2Fed154c0d-1aa5-4088-994c-b40a203ecc1b%2Fe0a2b95e_aec2_4149_ae3e_cbcd32f39325.jpg?w=480&auto=format%2Ccompress&fit=max)
ಹ್ಯೂಂಡೈ ಕ್ರೆಟಾ ಕಾರ್‌ಗೆ ಏರ್ ಬ್ಯಾಗ್ ಅಳವಡಿಸದಿದ್ದರಿಂದ ಡಿಕ್ಕಿಯಾದಾಗ ಕಾರಿನ ಮಾಲೀಕರಿಗೆ ತಲೆ, ಎದೆ ಹಾಗೂ ಹಲ್ಲುಗಳಿಗೆ ಹಾನಿಯಾಗಿರುವುದಕ್ಕೆ ಪರಿಹಾರ ನೀಡಿರುವುದನ್ನು ಸುಪ್ರೀಂ ಕೋರ್ಟ್ ಗುರುವಾರ ಎತ್ತಿ ಹಿಡಿದಿದೆ.
ದೂರುದಾರ ಗ್ರಾಹಕರಿಗೆ ₹3 ಲಕ್ಷ ಪರಿಹಾರ ನೀಡುವಂತೆ ದೆಹಲಿ ರಾಜ್ಯ ಗ್ರಾಹಕ ಪರಿಹಾರ ಆಯೋಗ ಆದೇಶ ಮಾಡಿದ್ದನ್ನು ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗ ಎತ್ತಿ ಹಿಡಿದಿತ್ತು. ಇದನ್ನು ಪ್ರಶ್ನಿಸಿ ಹ್ಯೂಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ವಿನೀತ್ ಶರಣ್ ಮತ್ತು ಅನಿರುದ್ಧ ಬೋಸ್ ಅವರ ಪೀಠ ವಜಾ ಮಾಡಿದೆ. ಅಲ್ಲದೇ, ವಸ್ತುವಿನ ರಕ್ಷಣಾ ಗುಣಮಟ್ಟದ ಅರ್ಹತೆಯು ಅಗತ್ಯಕ್ಕಿಂತ ಕಡಿಮೆಯಾಗಿರುವುದರಿಂದ ಗ್ರಾಹಕರಿಗೆ ಕಂಪೆನಿ ಪರಿಹಾರ ನೀಡುವ ಬಾಧ್ಯತೆ ಹೊಂದಿರುತ್ತದೆ ಎಂದು ಹೇಳಿದೆ.
ಹೆಚ್ಚಿನ ಮಾಹಿತಿಗೆ ʼಬಾರ್ ಅಂಡ್ ಬೆಂಚ್ʼ ಇಂಗ್ಲಿಷ್ ತಾಣದ ಲಿಂಕ್ ಗಮನಿಸಿ.