ಸಂದೇಹ, ಕಾನೂನಾತ್ಮಕ ಪುರಾವೆಯಾಗದು: ಕೊಲೆ ಆರೋಪಿಯನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ [ಚುಟುಕು]

ಸಂದೇಹ, ಕಾನೂನಾತ್ಮಕ ಪುರಾವೆಯಾಗದು: ಕೊಲೆ ಆರೋಪಿಯನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ [ಚುಟುಕು]

ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ವ್ಯಕ್ತಿಯನ್ನು ಇತ್ತೀಚೆಗೆ ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್‌ನ ಔರಂಗಾಬಾದ್‌ ಪೀಠ ಸಂದೇಹ, ಎಷ್ಟೇ ಬಲವಾದರೂ ಅದನ್ನು ಕಾನೂನು ಪುರಾವೆ ಎಂದು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ತಿಳಿಸಿದೆ. ಪ್ರಾಸಿಕ್ಯೂಷನ್‌ ಸನ್ನಿವೇಶಗಳ ಸರಣಿ ರೂಪಿಸಲು ವಿಫಲವಾಗಿದ್ದು ಆರೋಪಿ ವಿರುದ್ಧ ಕೇವಲ ಅನುಮಾನ ವ್ಯಕ್ತಪಡಿಸಲಾಗಿದೆ ಎಂದು ನ್ಯಾಯಮೂರ್ತಿಗಳಾದ ವಿ ಕೆ ಜಾಧವ್ ಮತ್ತು ಎಸ್‌ ಕೆ ಮೋರ್ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಆ ಮೂಲಕ ಜಲಗಾಂವ್‌ನ ಅವಧೂತ್‌ ಘಾಟೆ ಎಂಬ ಕಾರ್ಮಿಕನಿಗೆ ಅಹಮದ್‌ನಗರ ಸೆಷನ್ಸ್‌ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅದು ರದ್ದುಪಡಿಸಿತು.

ಹೆಚ್ಚಿನ ಮಾಹಿತಿಗೆ ʼಬಾರ್‌ ಅಂಡ್‌ ಬೆಂಚ್‌ʼ ಇಂಗ್ಲಿಷ್‌ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com