ತಂತ್ರಜ್ಞಾನ ಕೇವಲ ಆಡಳಿತಾತ್ಮಕ ಉಪಕರಣವಾಗದೆ, ಸಾಂವಿಧಾನಿಕ ಸಾಧನವಾಗಬೇಕು: ಸಿಜೆಐ ಸೂರ್ಯ ಕಾಂತ್

ಜೈಸಲ್ಮೇರ್‌ನಲ್ಲಿ ಈಚೆಗೆ ನಡೆದ ನ್ಯಾಯಾಂಗ ಸಮ್ಮೇಳನದಲ್ಲಿ ಅವರು ಮಾತನಾಡಿದರು.
Chief Justice of India Surya Kant
Chief Justice of India Surya Kant
Published on

ತಂತ್ರಜ್ಞಾನ ಸೌಕರ್ಯದ ಸಾಧನವಾಗುವ ಹಂತವನ್ನು ಮೀರಿ ಸಮಾನತೆ, ಅಸ್ಮಿತೆ ಮತ್ತು ನ್ಯಾಯದೊರಕಿಸಿಕೊಡುವ ಸಾಂವಿಧಾನಿಕ ಸಾಧನವಾಗಿ ವಿಕಸನಗೊಂಡಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್‌ ಹೇಳಿದರು.

ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಈಚೆಗೆ ನಡೆದ ನ್ಯಾಯಾಂಗ ಸಮ್ಮೇಳನದಲ್ಲಿ ಮಾತನಾಡಿದ ಅವರು, ತಂತ್ರಜ್ಞಾನ ಎಂಬುದು ನ್ಯಾಯಾಲಯ ಪ್ರಕ್ರಿಯೆಗಳನ್ನು ಡಿಜಿಟಲೀಕರಣಗೊಳಿಸುವುದಕ್ಕೆ ಮಾತ್ರ ಸೀಮಿತವಾಗದೇ, ನ್ಯಾಯಾಲಯಗಳಲ್ಲಿ ಸಮಾನತೆ ಮತ್ತು ಅಸ್ಮಿತೆಯನ್ನು ಬಲಪಡಿಸಬೇಕು ಎಂದರು.

Also Read
ಸ್ವದೇಶಿ ನ್ಯಾಯಶಾಸ್ತ್ರದ ಪರ ಧ್ವನಿ ಎತ್ತಿದ ಭಾವಿ ಸಿಜೆಐ ಸೂರ್ಯ ಕಾಂತ್

ನ್ಯಾಯಾಲಯಗಳ ಕಾರ್ಯ ನಿರ್ವಹಣೆಯನ್ನಷ್ಟೇ ತಂತ್ರಜ್ಞಾನ ಬದಲಿಸಬಾರದು. ಬದಲಿಗೆ ಜನ ನ್ಯಾಯ ಪಡೆಯುವಂತೆ ಮಾಡಬೇಕು ಎಂದು ಅವರು ಹೇಳಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ತಂತ್ರಜ್ಞಾನ ಇನ್ನೀಗ ಕೇವಲ ಆಡಳಿತಾತ್ಮಕ ಸೌಕರ್ಯವಲ್ಲ. ಇದು ಕಾನೂನಿನೆದುರು ಸಮಾನತೆಯನ್ನು ಬಲಪಡಿಸುವ, ನ್ಯಾಯದ ಪ್ರವೇಶ ವಿಸ್ತರಿಸುವ ಮತ್ತು ಸಾಂಸ್ಥಿಕ ದಕ್ಷತೆ ಹೆಚ್ಚಿಸುವ ಸಾಂವಿಧಾನಿಕ ಸಾಧನವಾಗಿ ವಿಕಸನಗೊಂಡಿದೆ

  • ನ್ಯಾಯಾಂಗ ಒಕ್ಕೂಟ ಸ್ವರೂ ಭೌಗೋಳಿಕ ಅಡೆತಡೆಗಳು, ಮೂಲಸೌಕರ್ಯ ಕೊರತೆ ಮತ್ತು ಪ್ರಕ್ರಿಯಾತ್ಮಕ ವಿಳಂಬಗಳನ್ನು ತಂತ್ರಜ್ಞಾನದಿಂದ ಕಡಿಮೆ ಮಾಡಬಹುದು.

  • ಪವನ್ನು ಅಳಿಸದೆ ಒಂದೇ ರೀತಿಯ ಮಾನದಂಡಗಳು ಮತ್ತು ಪ್ರಕ್ರಿಯೆಗಳೊಂದಿಗೆ ಏಕೀಕೃತ ರಾಷ್ಟ್ರೀಯ ನ್ಯಾಯಾಂಗ ವ್ಯವಸ್ಥೆ ರೂಪಿಸಲು ತಂತ್ರಜ್ಞಾನ ನೆರವಾಗಬೇಕು.

  •  ನ್ಯಾಯಾಲಯ ಪ್ರಕ್ರಿಯೆಗಳಲ್ಲಿ ಪಾರದರ್ಶಕತೆ, ನಿಶ್ಚಿತತೆ ಹಾಗೂ ಸಾಂಸ್ಥಿಕ ನಂಬಿಕೆಯನ್ನು ತಂತ್ರಜ್ಞಾನ ಹೆಚ್ಚಿಸಬೇಕು.

  • ಜೀವ, ಸ್ವಾತಂತ್ರ್ಯ ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದಂತಹ ಆಳವಾದ ಹಾನಿಯನ್ನುಂಟುಮಾಡುವ ಪ್ರಕರಣಗಳಲ್ಲಿ ತ್ವರಿತ ನ್ಯಾಯ ಒದಗಿಸಲು ಡಿಜಿಟಲ್ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಬಳಕೆಯಾಗಬೇಕು.

  • ತೀರ್ಪುಗಳನ್ನು ಸ್ಪಷ್ಟ, ಸುಲಭವಾಗಿ ತಲುಪಬಹುದಾದ ಭಾಷೆಯಲ್ಲಿ ಬರೆಯಬೇಕು. ನ್ಯಾಯಾಂಗ ತೀರ್ಪು, ಆದೇಶಗಳಲ್ಲಿ ಏಕರೂಪತೆಯು ಸಾರ್ವಜನಿಕ ನಂಬಿಕೆಗೆ ಅತ್ಯಗತ್ಯ.

Kannada Bar & Bench
kannada.barandbench.com