ಸ್ವದೇಶಿ ನ್ಯಾಯಶಾಸ್ತ್ರದ ಪರ ಧ್ವನಿ ಎತ್ತಿದ ಭಾವಿ ಸಿಜೆಐ ಸೂರ್ಯ ಕಾಂತ್

ನ್ಯಾಯಮೂರ್ತಿ ಸೂರ್ಯ ಕಾಂತ್ ಶನಿವಾರ ಸಂಜೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು.
Justice Surya Kant with Supreme Court
Justice Surya Kant with Supreme Court
Published on

ಕಳೆದ 75 ವರ್ಷಗಳಲ್ಲಿ ಮಹತ್ವದ ತೀರ್ಪುಗಳನ್ನು ನೀಡಿರುವ ಸುಪ್ರೀಂ ಕೋರ್ಟ್‌ ಸ್ವದೇಶಿ ನ್ಯಾಯಶಾಸ್ತ್ರದತ್ತ ಹೆಜ್ಜೆ ಇರಿಸುವುದು ಸಹಜ ಎಂದು ಸುಪ್ರೀಂ ಕೋರ್ಟ್‌ ನಿಯೋಜಿತ ಮುಖ್ಯ ನ್ಯಾಐಮೂರ್ತಿ ಸೂರ್ಯ ಕಾಂತ್‌ ತಿಳಿಸಿದರು.

ಶನಿವಾರ ಸಂಜೆ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ನಡೆಸಿದ ಸಂವಾದದ ವೇಳೆ ಅವರು ಸುಪ್ರೀಂ ಕೋರ್ಟ್ ತನ್ನದೇ ಆದ ನ್ಯಾಯಶಾಸ್ತ್ರವನ್ನು ಹಿಗ್ಗಿಸಿಕೊಳ್ಳುವುದು ಅದರ ಮುಂದಿನ ಹಾದಿಯಾಗಿದೆ ಎಂದರು.

Also Read
ಮಹಿಳಾ ನ್ಯಾಯಮೂರ್ತಿಗಳನ್ನು ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ನೀಡಲಾಗಲಿಲ್ಲ ಎಂಬ ವಿಷಾದವಿದೆ: ಸಿಜೆಐ ಗವಾಯಿ

ಕಳೆದ 75 ವರ್ಷಗಳಲ್ಲಿ ಸಾವಿರಾರು ಐತಿಹಾಸಿಕ ತೀರ್ಪುಗಳನ್ನು ಸುಪ್ರೀಂ ಕೋರ್ಟ್‌ ನೀಡಿರುವಾಗ, ಆ ತೀರ್ಪುಗಳನ್ನು ಬೇರೆ ದೇಶಗಳ ನ್ಯಾಯಾಲಯಗಳೂ ಪ್ರಸ್ತಾಪಿಸುತ್ತಿರುವಾಗ, ನಮ್ಮ ಹಕ್ಕುಗಳ ಬಗ್ಗೆ ನಾವು ನಮ್ಮದೇ ಅರಿವನ್ನು ಗಳಿಸಿರುವಾಗ, ನಮ್ಮ ರಾಷ್ಟ್ರಕ್ಕೆ ಸಂಬಂಧಿಸಿದ ಯಾವುದೇ ವಿಚಾರದ ಬಗ್ಗೆ ಅವಲೋಕನಗಳನ್ನು ನೀಡುತ್ತಿರುವಾಗ ನಾವು ಬೇರೆ ದೇಶದ ತೀರ್ಪುಗಳತ್ತ ಏಕೆ ನೋಡಬೇಕು. ಹೀಗಾಗಿಯೇ ನಮ್ಮದೇ ಆದ ನ್ಯಾಯಶಾಸ್ತ್ರ ಹೊಂದುವ ಅವಶ್ಯಕತೆ ಸದಾ ಇರುತ್ತದೆ ಎಂದು ಅವರು ಹೇಳಿದರು.

ನ್ಯಾಯಾಂಗದಲ್ಲಿ ಖಾಲಿ ಇರುವ ಹುದ್ದೆಗಳು,  ಮಾಧ್ಯಮ ಟೀಕೆ ಹಾಗೂ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಗೆ ಇರುವ ಒತ್ತಡದಂತಹ ಹಲವು ಸಂಗತಿಗಳ ಬಗ್ಗೆ ನ್ಯಾ. ಕಾಂತ್‌ ಪ್ರತಿಕ್ರಿಯಿಸಿದರು.

ಮಹಿಳಾ ನ್ಯಾಯಮೂರ್ತಿಗಳ ಹುದ್ದೆಗಳನ್ನಷ್ಟೇ ಅಲ್ಲದೆ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಅವರು ಇದೇ ವೇಳೆ ತಿಳಿಸಿದರು.

ಪ್ರಚಾರಕ್ಕಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ಸಲ್ಲಿಸಿದರೂ ಕೂಡ ಅಖಿಲ ಭಾರತ ಮಟ್ಟದಲ್ಲಿ ಪರಿಣಾಮ ಬೀರುವಂತಿದ್ದರೆ ಮಾತ್ರ ಅವುಗಳನ್ನು ಆಲಿಸಲಾಗುವುದು ಎಂದ ಅವರು ತೆರಿಗೆ ಇಲ್ಲವೇ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸರ್ಕಾರ ಸಂವೇದನಶೀಲವಾಗಿ ನಡೆದುಕೊಳ್ಳುತ್ತಿದ್ದು ಅವುಗಳನ್ನು ಬೇಗ ಇತ್ಯರ್ಥಪಡಿಸುವ ವ್ಯವಸ್ಥೆ ಅಗತ್ಯವಿದೆ ಎಂದರು.

ಪ್ರಕರಣಗಳ ತ್ವರಿತ ವಿಲೇವಾರಿಗಾಗಿ ಅದಕ್ಕಾಗಿ 7 ಮತ್ತು 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಗಳನ್ನು ರಚಿಸುವುದಕ್ಕೆ ನನ್ನ ಆದ್ಯತೆ.

ನ್ಯಾ. ಸೂರ್ಯ ಕಾಂತ್‌

ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣಗಳು ಬಾಕಿ ಉಳಿಯುವುದನ್ನು ಕಡಿಮೆ ಮಾಡುವುದು ತಮ್ಮ ಪ್ರಮುಖ ಗುರಿ ಎಂದ ಅವರು ಅದಕ್ಕಾಗಿ 7 ಮತ್ತು 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠಗಳನ್ನು ರಚಿಸುವುದಾಗಿ ತಿಳಿಸಿದರು. 90,000ದಷ್ಟಿರುವ ಪ್ರಕರಣಗಳನ್ನು ಆದಷ್ಟೂ ಕಡಿಮೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದರು.

ಇದೇ ವೇಳೆ ಎರಡು ವಿಧವಾದ ಮಾಧ್ಯಮಗಳಿವೆ. ಒಂದು ಮಾಧ್ಯಮ ಜವಾಬ್ದಾರಿಯುತವಾದುದು. ಸಿಜೆಐ ಹುದ್ದೆಯಲ್ಲಿರುವವರು ಸಾಮಾಜಿಕ ಮಾಧ್ಯಮಗಳ ಒತ್ತಡದಲ್ಲಿ ಸಿಲುಕುವುದಿಲ್ಲ, ಸಿಲುಕಲೂ ಬಾರದು. ಅವುಗಳನ್ನು ನಿರ್ಲಕ್ಷಿಸುವುದೊಂದೇ ಮಾರ್ಗ ಎಂದು ಅವರು ಇದೇ ವೇಳೆ ಹೇಳಿದರು.

Kannada Bar & Bench
kannada.barandbench.com