ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ: ಸುಳ್ಯ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಡಿ ಕೆ ಶಿವಕುಮಾರ್

ಶಿವಕುಮಾರ್ ಮೆಸ್ಕಾಂ ಅಧಿಕಾರಿಗಳ ಮೂಲಕ ರೈ ಅವರ ವಿರುದ್ಙ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ರೈ ಅವರನ್ನು ಬಂಧಿಸಿದ್ದರು.
ವ್ಯಕ್ತಿಯೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣ: ಸುಳ್ಯ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಡಿ ಕೆ ಶಿವಕುಮಾರ್

ವ್ಯಕ್ತಿಯೊಬ್ಬರು ಅವಾಚ್ಯ ಪದಗಳಿಂದ ತಮ್ಮನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಸುಳ್ಯ ನ್ಯಾಯಾಲಯದಲ್ಲಿ ಇಂದು ಸಾಕ್ಷ್ಯ ನುಡಿದರು.

ಶಿವಕುಮಾರ್‌ ಇಂಧನ ಸಚಿವರಾಗಿದ್ದ ಸಂದರ್ಭದಲ್ಲಿ ಸುಳ್ಯ ತಾಲೂಕು ಬೆಳ್ಳಾರೆಯ ಸಾಯಿ ಗಿರಿಧರ್‌ ರೈ ಎಂಬುವವರು ಕರೆ ಮಾಡಿ ಡಿಕೆಶಿ ಹಾಗೂ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಹಿಂದೆ ವಾರೆಂಟ್‌ ಹೊರಡಿಸಿ ಸಾಕ್ಷ್ಯ ನುಡಿಯಲು ಶಿವಕುಮಾರ್‌ ಅವರಿಗೆ ಸೂಚಿಸಿತ್ತು.

ಬೆಳ್ಳಾರೆಯ ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ರೈ 2016ರ ಫೆಬ್ರವರಿ 28ರಂದು ಡಿ ಕೆ ಶಿವಕುಮಾರ್‌ ಅವರಿಗೆ ಫೋನ್‌ ಕರೆ ಮಾಡಿ ತಮ್ಮ ಊರಿನ ಸುತ್ತಮುತ್ತ ಸತತವಾಗಿ ಕಾಡುತ್ತಿದ್ದ ವಿದ್ಯುತ್‌ ಸಮಸ್ಯೆ ಬಗ್ಗೆ ತಿಳಿಸಿದ್ದರು. ಈ ವೇಳೆ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಅವಾಚ್ಯ ಶಬ್ದಗಳನ್ನು ಬಳಸಲಾಗಿತ್ತು.

Also Read
ತೆರಿಗೆ ವಂಚನೆ: ಡಿ ಕೆ ಶಿವಕುಮಾರ್‌ ವಿರುದ್ಧ ಐಟಿ ಇಲಾಖೆ ಹೂಡಿದ್ದ ಮೂರು ಕ್ರಿಮಿನಲ್‌ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌

ಈ ಹಿನ್ನೆಲೆಯಲ್ಲಿ ಶಿವಕುಮಾರ್‌ ಮೆಸ್ಕಾಂ ಅಧಿಕಾರಿಗಳ ಮೂಲಕ ರೈ ವಿರುದ್ಙ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಂದು ರಾತ್ರಿ ರೈ ಅವರನ್ನು ಬಂಧಿಸಿದ್ದರು. ಬಂಧನಕ್ಕೆ ರೈ ಹಾಗೂ ಅವರ ಕುಟುಂಬ ಪ್ರತಿರೋಧ ಒಡ್ಡಿದ್ದರಿಂದ ಪೊಲೀಸರು ಅವರ ಮನೆ ಛಾವಣಿ ಹತ್ತಿ ಹೆಂಚುಗಳನ್ನು ಒಡೆದು ಬಂಧಿಸಿದ್ದರು. ಈ ಘಟನೆ ಸುದ್ದಿಗೆ ಗ್ರಾಸವಾಗಿತ್ತು.

ಪ್ರಕರಣದಲ್ಲಿ ಸಾಕ್ಷ್ಯ ನುಡಿಯುವಂತೆ ಸುಳ್ಯ ನ್ಯಾಯಾಲಯ ಮೂರು ಬಾರಿ ಡಿಕೆಶಿ ಅವರಿಗೆ ಸಮನ್ಸ್‌ ನೀಡಿತ್ತು. ಅಲ್ಲದೆ ಒಂದು ಬಾರಿ ವಾರೆಂಟ್‌ ಕೂಡ ಜಾರಿ ಮಾಡಿತ್ತು. ಆದರೂ ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಾಕ್ಷ್ಯ ನುಡಿಯುವಂತೆ ಈ ಹಿಂದಿನ ವಿಚಾರಣೆ ವೇಳೆ ಮತ್ತೊಮ್ಮೆ ನ್ಯಾಯಾಧೀಶರು ಆದೇಶ ಹೊರಡಿಸಿದ್ದರು.

ಕೋರ್ಟ್‌ಗೆ ಹಾಜರಾಗುವ ಮೊದಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್‌, ಸಾಕ್ಷಿಯಾಗಿ ಬರಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಮೊದಲ ಬಾರಿಗೆ ಇದು ನನಗೆ ತಿಳಿದಿರಲಿಲ್ಲ. ಹೀಗಾಗಿ ಬಂದಿರಲಿಲ್ಲ. ನ್ಯಾಯಾಲಯದ ಆದೇಶಕ್ಕೆ ತಲೆಬಾಗಿ ಈಗ ಆಗಮಿಸಿದ್ದೇನೆ ಎಂದು ಹೇಳಿದರು.

Related Stories

No stories found.