ದೇಗುಲಗಳು ಶಾಂತಿಧಾಮಗಳು; ದುರದೃಷ್ಟವಶಾತ್ ಅವು ಹಲವು ಬಾರಿ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತವೆ: ಮದ್ರಾಸ್ ಹೈಕೋರ್ಟ್

"ಅಂತಹ ಸಂದರ್ಭಗಳಲ್ಲಿ, ಆ ರೀತಿಯ ದೇವಾಲಯ ಮುಚ್ಚುವುದು ಉತ್ತಮ. ಇದರಿಂದಾಗಿ ಅಂತಹ ಪ್ರದೇಶದಲ್ಲಿ ಶಾಂತಿ ಮತ್ತೆ ನೆಲೆಸುತ್ತದೆ” ಎಂದ ನ್ಯಾಯಾಲಯ “ದೇವಾಲಯ ಮುಚ್ಚುವುದರಿಂದ ಶಾಂತಿ ನೆಲೆಸುತ್ತದೆ ಎಂಬುದು ವೈರುಧ್ಯದ ಸಂಗತಿ” ಎಂದು ಬೇಸರಿಸಿತು.
Madras High Court
Madras High Court
Published on

ದೇವಸ್ಥಾನಗಳಿಗೆ ಸಂಬಂಧಿಸಿದ ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗುತ್ತಿರುವ ಪ್ರಕರಣಗಳಿಂದಲೇ ನ್ಯಾಯಾಲಯಗಳು ತುಂಬಿ ಹೋಗುತ್ತಿರುವುದಕ್ಕೆ ಮದ್ರಾಸ್ ಹೈಕೋರ್ಟ್ ಶುಕ್ರವಾರ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿತು [ಎಂ ಶೇಖರ್ ಮತ್ತು ಜಿಲ್ಲಾಧಿಕಾರಿ ನಡುವಣ ಪ್ರಕರಣ].

ದೇವಸ್ಥಾನಗಳು ಭಕ್ತರ ಪಾಲಿಗೆ ಶಾಂತಿ ಅರಸುವ ತಾಣಗಳಾಗಿದ್ದು, ದುರದೃಷ್ಟವಶಾತ್ ಅನೇಕ ಸಂದರ್ಭಗಳಲ್ಲಿ, ಅವು ಕಾನೂನು ಸುವ್ಯವಸ್ಥೆ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಪರಿಣಾಮ, ದೇಗುಲಗಳ ಸಂಪೂರ್ಣ ಉದ್ದೇಶ ಕಾಣೆಯಾಗಿದೆ ಎಂದು ನ್ಯಾ. ಎನ್ ಆನಂದ ವೆಂಕಟೇಶ್ ಅಭಿಪ್ರಾಯಪಟ್ಟರು.

Also Read
ಬುದ್ಧ ಪ್ರತಿಮೆ ಪತ್ತೆ: ಹಿಂದೂ ದೇವಾಲಯ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸೂಚಿಸಿದ ಮದ್ರಾಸ್ ಹೈಕೋರ್ಟ್, ಪೂಜೆಗೆ ತಡೆ

"ಅಂತಹ ಸಂದರ್ಭಗಳಲ್ಲಿ, ಆ ರೀತಿಯ ದೇವಾಲಯ ಮುಚ್ಚುವುದು ಉತ್ತಮ . ಇದರಿಂದಾಗಿ ಅಂತಹ ಪ್ರದೇಶದಲ್ಲಿ ಶಾಂತಿ, ಸಹಜ ಸ್ಥಿತಿ ಮತ್ತೆ ನೆಲೆಸುತ್ತದೆ” ಎಂದ ನ್ಯಾಯಾಲಯ “ದೇವಾಲಯ ಮುಚ್ಚುವುದರಿಂದ ಶಾಂತಿ ನೆಲೆಸುತ್ತದೆ ಎಂಬುದು ವೈರುಧ್ಯದ ಸಂಗತಿ” ಎಂದು ನ್ಯಾಯಾಲಯ ಬೇಸರ ವ್ಯಕ್ತಪಡಿಸಿತು.

Also Read
ಹಿಂದೂ ದೇವರಲ್ಲಿ ನಂಬಿಕೆ ಇರುವ ಅನ್ಯಧರ್ಮೀಯರು ದೇಗುಲ ಪ್ರವೇಶಿಸುವುದನ್ನು ತಡೆಯುವಂತಿಲ್ಲ: ಮದ್ರಾಸ್ ಹೈಕೋರ್ಟ್

ತಮ್ಮ ಕುಲದೇವತೆಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲು ತೆರಳಲಿರುವ ಅರ್ಜಿದಾರರು ಹಾಗೂ ಇತರರಿಗೆ ರಕ್ಷಣೆ ನೀಡುವಂತೆ ಕೋರಿ ಸಲ್ಲಿಸಲಾದ ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ವ್ಯಕ್ತಿಗಳು ಪ್ರತಿಪಾದಿಸುವ ಪೂಜಾ ಹಕ್ಕಿನಿಂದಾಗಿ ದೇವಸ್ಥಾನದಲ್ಲಿ ಘರ್ಷಣೆಗಳು ಏರ್ಪಡುತ್ತವೆ.

ದೇಗುಲದ ಆಡಳಿತವನ್ನು ಸೂಕ್ತ ವ್ಯಕ್ತಿಗೆ ವಹಿಸಿದರೆ ಅಹಮಿನ ಘರ್ಷಣೆ ನಿಯಂತ್ರಣಕ್ಕೆ ಬರುತ್ತದೆ. ಅಲ್ಲದೆ ಯಾರಲ್ಲೂ ಮೇಲರಿಮೆ ಬೆಳೆಯುವುದಿಲ್ಲ ಎಂದು ನ್ಯಾಯಾಲಯ ಹೇಳಿತು. ಅಂತಹ ವ್ಯಕ್ತಿಯ ನೇಮಕಾತಿ ಹತ್ತು ದಿನಗಳಲ್ಲಿ ಪೂರ್ಣಗೊಳ್ಳಬೇಕು ಮತ್ತು ನೇಮಕಾತಿ ಬಳಿಕವೇ ದೇಗುಲದ ಬಾಗಿಲು ತೆರೆಯಬೇಕು ಎಂದು ಪೀಠ ಸೂಚಿಸಿತು.

Kannada Bar & Bench
kannada.barandbench.com