ಮೆಗಾ ಲೋಕ್ ಅದಾಲತ್: ರಾಜ್ಯಾದ್ಯಂತ ಒಟ್ಟು 2,63,186 ಪ್ರಕರಣಗಳು ಇತ್ಯರ್ಥ

ಕರ್ನಾಟಕ ಹೈಕೋರ್ಟ್‌ನಲ್ಲಿ 8, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ತಲಾ 5, ಹಾಗೂ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ 938 ಲೋಕ್ ಅದಾಲತ್ ಬೈಠಕ್‌ಗಳನ್ನು ಡಿ.19ರಂದು ಹಮ್ಮಿಕೊಳ್ಳಲಾಗಿದ್ದ 'ಮೆಗಾ ಲೋಕ್ ಅದಾಲತ್'ನಲ್ಲಿ ನಡೆಸಲಾಗಿತ್ತು.
ಮೆಗಾ ಲೋಕ್ ಅದಾಲತ್: ರಾಜ್ಯಾದ್ಯಂತ ಒಟ್ಟು 2,63,186 ಪ್ರಕರಣಗಳು ಇತ್ಯರ್ಥ
Published on

ಡಿಸೆಂಬರ್‌ 19 ರಂದು ರಾಜ್ಯದೆಲ್ಲೆಡೆ ಹಮ್ಮಿಕೊಳ್ಳಲಾಗಿದ್ದ ʼಮೆಗಾ ಲೋಕ್ ಅದಾಲತ್ʼನಲ್ಲಿ ಒಟ್ಟು 2,63,186 ಪ್ರಕರಣಗಳು ಇತ್ಯರ್ಥಗೊಂಡಿವೆ. ಇವುಗಳಲ್ಲಿ 16,315 ವ್ಯಾಜ್ಯ ಪೂರ್ವ ಪ್ರಕರಣಗಳು, 2,46,871 ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಸೇರಿವೆ.

ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ಒಟ್ಟು 42, 803 ವ್ಯಾಜ್ಯ ಪೂರ್ವ ಪ್ರಕರಣಗಳು ಹಾಗೂ 4,20,394ರಷ್ಟು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಸೇರಿದಂತೆ ಒಟ್ಟು 4,63,197 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಗುರುತಿಸಲಾಗಿತ್ತು.

Also Read
ಉಡುಪಿ ಜಿಲ್ಲೆಯಲ್ಲಿ ಮೆಗಾ ಲೋಕ ಅದಾಲತ್: ಒಂದೇ ದಿನ 2546 ಪ್ರಕರಣಗಳು ಇತ್ಯರ್ಥ

ಕರ್ನಾಟಕ ಹೈಕೋರ್ಟ್‌ನಲ್ಲಿ 8, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ತಲಾ 5, ಹಾಗೂ ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ 938 ಲೋಕ್ ಅದಾಲತ್ ಬೈಠಕ್‍ಗಳನ್ನು ನಡೆಸಲಾಗಿತ್ತು. ಲೋಕ್ ಅದಾಲತ್‍ ವೇಳೆ ರಾಜಿಯಾದ ಪ್ರಕರಣಗಳಿಂದ ಸಂಗ್ರಹಿಸಲಾದ ಸುಮಾರು ರೂ.41,45,37,010 ಮೊತ್ತವನ್ನು ಸರ್ಕಾರದ ಖಾತೆಗೆ ಜಮಾ ಮಾಡಲಾಗಿದೆ.

ರಾಜ್ಯದ ಎಲ್ಲಾ ನ್ಯಾಯಾಲಯಗಳಲ್ಲಿ ಮೋಟಾರು ಅಪಘಾತ ಪರಿಹಾರ ನ್ಯಾಯಾಕಧಿಕರಣ ಪ್ರಕರಣಗಳು, ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದ ಪ್ರಕರಣಗಳು, ನೆಗೋಷಿಯಬಲ್ ಇನ್‌ಸ್ಟ್ರುಮೆಂಟ್ಸ್ ಅಧಿನಿಯಮ ಪ್ರಕರಣಗಳು ಸೇರಿದಂತೆ ರಾಜಿಯಾಗಬಹುದಾದ ಅಪರಾಧಿಕ ಪ್ರಕರಣಗಳು, ಕೌಟುಂಬಿಕ ನ್ಯಾಯಾಲಯ (ವಿವಾಹ ವಿಚ್ಛೇದನ ಕೇಸ್‌ಗಳನ್ನು ಹೊರತುಪಡಿಸಿ) ಪ್ರಕರಣಗಳು ಮತ್ತಿತರ ಮೊಕದ್ದಮೆಗಳಿಗೆ ಸಂಬಂಧಿಸಿದಂತೆ ಡಿ 19ರಂದು ಲೋಕ ಅದಾಲತ್‌ ನಡೆಸಲಾಗಿತ್ತು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯ ನಿರ್ವಾಹಕ ಅಧ್ಯಕ್ಷರಾದ ನ್ಯಾ. ಅರವಿಂದ ಕುಮಾರ್ ಅವರ ನಿರ್ದೇಶನದಂತೆ ಈ ಕಾರ್ಯ ಕೈಗೊಳ್ಳಲಾಗಿತ್ತು.

Also Read
ಕೋವಿಡ್ ಅವಧಿಯಲ್ಲಿ ನಡೆದ ಲೋಕ ಅದಾಲತ್‌ಗೆ ವಿಶೇಷ ಮಹತ್ವವಿದೆ: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ

ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರಾದ ಅಭಯ ಶ್ರೀನಿವಾಸ ಓಕಾ, ಹೈಕೋರ್ಟ್‌ ಕಾನೂನು ಸೇವೆಗಳ ಸಮಿತಿ ಅಧ್ಯಕ್ಷರಾದ ನ್ಯಾ. ಅಲೋಕ್‌ ಅರಾಧೆ ಮೆಗಾ ಅದಾಲತ್‌ ಯಶಸ್ವಿಯಾದದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kannada Bar & Bench
kannada.barandbench.com