UU Lalit, Ravindra Bhat and Bela Trivedi

UU Lalit, Ravindra Bhat and Bela Trivedi

ಸ್ವಯಂ ಆಡಳಿತ ಹೊಂದಿರುವ ಸಾರ್ವಜನಿಕ ಟ್ರಸ್ಟ್‌ಗಳ ಮೇಲೆ ಸರ್ಕಾರದ ವ್ಯಾಪಕ ನಿಯಂತ್ರಣ ಇರುವಂತಿಲ್ಲ: ಸುಪ್ರೀಂ ಕೋರ್ಟ್

ಆಸ್ತಿಗಳ ಅನ್ಯೀಕರಣದ ನಿರ್ದಿಷ್ಟ ಸನ್ನಿವೇಶದಲ್ಲಿ, ಮೇಲ್ವಿಚಾರಣೆಯ ಸ್ವರೂಪವನ್ನು ಅವಲಂಬಿಸಿ, ಸಾರ್ವಜನಿಕ ಟ್ರಸ್ಟ್‌ಗಳ ಮೌಲ್ಯಯುತ ಆಸ್ತಿಗಳು ಕುಸಿಯದಂತೆ ನೋಡಿಕೊಳ್ಳುವುದು ಸರ್ಕಾರದ ಹೊಣೆ ಎಂದ ಪೀಠ.

ಸಾರ್ವಜನಿಕ ಟ್ರಸ್ಟ್‌ಗಳ ಮೇಲೆ ಸರ್ಕಾರದ ವ್ಯಾಪಕ ನಿಯಂತ್ರಣ ಇರುವಂತಿಲ್ಲ ಮತ್ತು ಅಂತಹ ಟ್ರಸ್ಟ್‌ಗಳ ವಿಷಯದಲ್ಲಿ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಮತ್ತು ತೆಗೆದುಕೊಳ್ಳಬಾರದು ಎಂಬುದನ್ನು ಸರ್ಕಾರಿ ಅಂಗಗಳು ನಿರ್ದೇಶಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಅಭಿಪ್ರಾಯಪಟ್ಟಿದೆ [ಪಾರ್ಸಿ ಜೋರಾಷ್ಟ್ರಿಯನ್‌ ಅಂಜುಮಾನ್, ಮೊವ್ ಮತ್ತು ಉಪ ವಿಭಾಗಾಧಿಕಾರಿ / ಸಾರ್ವಜನಿಕ ಟ್ರಸ್ಟ್‌ಗಳ ರಿಜಿಸ್ಟ್ರಾರ್].

ಸಾರ್ವಜನಿಕ ದತ್ತಿಗಳು ಮತ್ತು ಟ್ರಸ್ಟ್‌ಗಳ ಸಂದರ್ಭದಲ್ಲಿ, ಟ್ರಸ್ಟ್ ಅನ್ನು ಪರಿಣಾಮಕಾರಿಯಾಗಿ ಮತ್ತು ಸುಗಮವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು ಸಾರ್ವಜನಿಕ ನಿಯಂತ್ರಣದ ಗುರಿಯಾಗಿದೆ ಎಂದು ನ್ಯಾಯಮೂರ್ತಿಗಳಾದ ಯು ಯು ಲಲಿತ್, ಎಸ್ ರವೀಂದ್ರ ಭಟ್ ಮತ್ತು ಬೇಲಾ ಎಂ ತ್ರಿವೇದಿ ಅವರಿದ್ದ ಪೀಠ ತಿಳಿಸಿತು.

ಹಾಗಾಗಿ, "ಸರ್ಕಾರದ ಆಸಕ್ತಿಯು ಅಷ್ಟರ ಮಟ್ಟಿಗೆ ಮಾತ್ರವೇ ಸೀಮಿತವಾಗಿರಬೇಕು. ಇದರ ಅರ್ಥ (ಪರಿಣಾಮಕಾರಿಯಾಗಿ ಮತ್ತು ಸುಗಮವಾಗಿ ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳುವುದು), ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ತೆಗೆದುಕೊಳ್ಳಬಾರದು ಎಂಬುದಲ್ಲ... ಯಾವುದೇ ಸ್ವಯಂ ಆಡಳಿತ ಹೊಂದಿರುವ ಸಂಸ್ಥೆಯನ್ನು ರಾಜ್ಯದ ವ್ಯಾಪಕ ನಿಯಂತ್ರಣಕ್ಕೆ ಒಳಪಡಿಸುವಂತಿಲ್ಲ" ಎಂದು ಪೀಠವು ಸ್ಪಷ್ಟಪಡಿಸಿತು.

Also Read
ತಡೀಪಾರು ಆದೇಶವು ಮುಕ್ತವಾಗಿ ಸಂಚರಿಸುವ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದ ಸುಪ್ರೀಂ: ಮಿತ ಬಳಕೆಗೆ ಸೂಚನೆ

ಆಸ್ತಿಗಳ ಅನ್ಯೀಕರಣದ ನಿರ್ದಿಷ್ಟ ಸನ್ನಿವೇಶದಲ್ಲಿ, ಮೇಲ್ವಿಚಾರಣೆಯ ಸ್ವರೂಪವನ್ನು ಅವಲಂಬಿಸಿ, ಸಾರ್ವಜನಿಕ ಟ್ರಸ್ಟ್‌ಗಳ ಮೌಲ್ಯಯುತ ಆಸ್ತಿಗಳು ಪೋಲಾಗದ ಹಾಗೆ ನೋಡಿಕೊಳ್ಳುವುದು ರಾಜ್ಯದ ಹೊಣೆ ಎಂದು ಪೀಠ ಮೇಲ್ಮನವಿಯನ್ನು ಪುರಸ್ಕರಿಸಿ ಹೈಕೋರ್ಟ್‌ ಮತ್ತು ರಿಜಿಸ್ಟ್ರಾರ್‌ ನಿರ್ಧಾರಗಳನ್ನು ಬದಿಗೆ ಸರಿಸಿತು.

ತನ್ನ ಆಸ್ತಿಯ ವಿಲೇವಾರಿಗೆ ಅನುಮತಿ ಕೋರಿ ಸಲ್ಲಿಸಿದ್ದ ಪಾರ್ಸಿ ಜೋರಾಷ್ಟ್ರಿಯನ್‌ ಅಂಜುಮಾನ್, ಮೊವ್ ಸಂಘಟನೆಯ ಅರ್ಜಿಯನ್ನು ತಿರಸ್ಕರಿಸುವಂತೆ ಸಾರ್ವಜನಿಕ ಟ್ರಸ್ಟ್‌ಗಳ ರಿಜಿಸ್ಟ್ರಾರ್‌ ಕೋರಿದ್ದನ್ನು ಏಕಸದಸ್ಯ ಪೀಠ ಅಂಗೀಕರಿಸಿತ್ತು. ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್‌ ಪೀಠ ಈ ಆದೇಶವನ್ನು ಎತ್ತಿ ಹಿಡಿದಿತ್ತು. ಇದನ್ನು ಸಂಘಟನೆ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್‌ನಂತೆ ಮೇಲಿನಂತೆ ಅಭಿಪ್ರಾಯಪಟ್ಟು ಹೈಕೋರ್ಟ್‌ ಹಾಗೂ ರಿಜಿಸ್ಟ್ರಾರ್‌ ಆದೇಶಗಳನ್ನು ಬದಿಗೆ ಸರಿಸಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸಿತು.

ಹೆಚ್ಚಿನ ವಿವರಗಳಿಗೆ ಬಾರ್‌ ಅಂಡ್‌ ಬೆಂಚ್‌ ಇಂಗ್ಲಿಷ್ ತಾಣದ ಲಿಂಕ್‌ ಗಮನಿಸಿ.

Related Stories

No stories found.
Kannada Bar & Bench
kannada.barandbench.com