ಇತರರ ಮನೆ, ಸಾರ್ವಜನಿಕ ಸ್ಥಳದಲ್ಲಿ ಶ್ಲೋಕ ಪಠಿಸುವುದಾಗಿ ಬೆದರಿಸುವುದು ವೈಯಕ್ತಿಕ ಸ್ವಾತಂತ್ರ್ಯಹರಣ: ಬಾಂಬೆ ಹೈಕೋರ್ಟ್

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಖಾಸಗಿ ಬಂಗಲೆಯಲ್ಲಿ ಹನುಮಾನ್ ಚಾಲೀಸಾ ಪಠಿಸುವುದಾಗಿ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರಿಂದ ಬಂಧಿತರಾದ ರಾಣಾ ದಂಪತಿಯ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು.
Justices Prasanna Varale, SM Modak and Bombay High Court
Justices Prasanna Varale, SM Modak and Bombay High Court
Published on

ಬೇರೊಬ್ಬರ ಮನೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಶ್ಲೋಕ ಪಠಿಸುವುದಾಗಿ ಬೆದರಿಕೆ ಹಾಕುವುದು ಇತರರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ [ನವನೀತ್ ರಾಣಾ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಸಾರ್ವಜನಿಕ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಐಪಿಸಿ ಸೆಕ್ಷನ್ 353ರ ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ, ಮಹಾರಾಷ್ಟ್ರ ವಿಧಾನಸಭೆ ಸದಸ್ಯ ರವಿ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿಗಳಾದ ಪಿ ಬಿ ವರಾಳೆ ಮತ್ತು ಎಸ್‌ ಎಂ ಮೋದಕ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

Also Read
ಪಕ್ಷೇತರ ಲೋಕಸಭಾ ಸದಸ್ಯೆ ನವನೀತ್‌ ಕೌರ್‌ ರಾಣಾ ಜಾತಿ ಪ್ರಮಾಣ ಪತ್ರ ರದ್ದುಗೊಳಿಸಿದ ಬಾಂಬೆ ಹೈಕೋರ್ಟ್‌

“ನಾವು ಎಫ್‌ಐಆರ್‌ ಅವಲೋಕಿಸಿದ್ದೇವೆ. ಅದರಲ್ಲಿ ತಿಳಿಸಿರುವಂತೆ ಬೇರೆಯವರ ಮನೆ ಇಲ್ಲವೇ ಸಾರ್ವಜನಿಕ ಸ್ಥಳದಲ್ಲಿ ಧಾರ್ಮಿಕ ಶ್ಲೋಕ ಪಠಿಸುವುದಾಗಿ ಬೆದರಿಕೆ ಹಾಕುವುದಾಗಿ ಅರ್ಜಿದಾರರು ಘೋಷಿಸಿರುವುದು ಮೊದಲನೆಯದಾಗಿ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುವುದಷ್ಟೇ ಅಲ್ಲದೆ ಅದರ ಮೇಲಿನ ಅತಿಕ್ರಮಣ ಕೂಡ ಆಗುತ್ತದೆ. ಎರಡನೆಯದಾಗಿ ನಿರ್ದಿಷ್ಟ ಧಾರ್ಮಿಕ ಶ್ಲೋಕಗಳನ್ನು ಸಾರ್ವಜನಿಕ ರಸ್ತೆಯಲ್ಲಿ ಪಠಿಸುವುದು ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುತ್ತದೆ ಎನ್ನುವ ಭೀತಿಯನ್ನು ಸರ್ಕಾರ ಹೊಂದಿದ್ದರೆ ಅದು ಸಮರ್ಥನೀಯ” ಎಂದು ನ್ಯಾಯಾಲಯ ತಿಳಿಸಿದೆ.

Also Read
ಹನುಮಾನ್ ಚಾಲೀಸಾ ಪ್ರಕರಣ: ಎಫ್ಐಆರ್ ರದ್ದತಿ ಕೋರಿದ್ದ ರಾಣಾ ದಂಪತಿ ಮನವಿ ತಿರಸ್ಕರಿಸಿದ ಬಾಂಬೆ ಹೈಕೋರ್ಟ್

ತಮಗೆ ಕಿರುಕುಳ ನೀಡಲು ಹಾಗೂ ಜಾಮೀನು ದೊರೆಯದಂತೆ ಮಾಡಲೆಂದೇ ತಮ್ಮ ವಿರುದ್ಧ ಸಾರ್ವಜನಿಕ ಸಿಬ್ಬಂದಿ ಮೇಲಿನ ಹಲ್ಲೆ ನಡೆಸಲಾಗಿದೆ ಎನ್ನುವ ಪ್ರಕರಣವನ್ನು ಎರಡನೇ ಎಫ್‌ಐಆರ್ ಆಗಿ ದಾಖಲಿಸಲಾಗಿದೆ ಎಂದು ರಾಣಾ ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದಕ್ಕೂ ಮೊದಲು ದೇಶದ್ರೋಹ ಕೃತ್ಯಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಮೊದಲ ಎಫ್‌ಐಆರ್‌ ದಾಖಲಾಗಿದೆ.

Kannada Bar & Bench
kannada.barandbench.com