[ಟಿಆರ್‌ಪಿ ಹಗರಣ] ಪೂರಕ ಆರೋಪಪಟ್ಟಿ ಸಲ್ಲಿಸಿದ ಮುಂಬೈ ಪೊಲೀಸರು; ಆರೋಪಿ ಸ್ಥಾನದಲ್ಲಿ ಅರ್ನಾಬ್ ಗೋಸ್ವಾಮಿ

ಮೂಲಗಳ ಪ್ರಕಾರ, ಎರಡನೇ ಆರೋಪಪಟ್ಟಿ 1,600 ಪುಟಗಳಿಗಿಂತ ದೊಡ್ಡದಾಗಿದ್ದು ಇನ್ನೂ 7 ಜನರನ್ನು ಆರೋಪಿಗಳನ್ನಾಗಿ ಸೇರಿಸಲಾಗಿದೆ.
Arnab Goswami and Mumbai Police
Arnab Goswami and Mumbai Police

ಟೆಲಿವಿಷನ್ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ) ಹಗರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಪೂರಕ ಆರೋಪಪಟ್ಟಿ ಸಲ್ಲಿಸಿದ್ದಾರೆ. ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರನ್ನು ಕೂಡ ಈಗ ಪ್ರಕರಣದಲ್ಲಿ ಆರೋಪಿಯಾಗಿ ಹೆಸರಿಸಲಾಗಿದೆ.

ಮುಂಬೈನ ಎಸ್ಪ್ಲನೇಡ್‌ನಲ್ಲಿರುವ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮಂಗಳವಾರ ಆರೋಪಪಟ್ಟಿ ಸಲ್ಲಿಸಲಾಗಿದೆ. ಮೂಲಗಳ ಪ್ರಕಾರ, ಎರಡನೇ ಆರೋಪಪಟ್ಟಿ 1,600 ಪುಟಗಳಿಗಿಂತ ದೊಡ್ಡದಾಗಿದ್ದು ಇನ್ನೂ 7 ಜನರನ್ನು ಆರೋಪಿಗಳನ್ನಾಗಿ ಸೇರಿಸಲಾಗಿದೆ.

Also Read
[ಟಿಆರ್‌ಪಿ ಹಗರಣ] ರಿಪಬ್ಲಿಕ್ ಟಿವಿ ಮೇಲೆ ತೂಗುಕತ್ತಿ ಏಕೆ? ಪೊಲೀಸರಿಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಪ್ರಕರಣದಲ್ಲಿ 22 ಆರೋಪಿಗಳಿದ್ದಾರೆ ಎಂದು ಮುಂಬೈ ಪೊಲೀಸರು ತನ್ನ ಮೊದಲ ಚಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ 15 ಆರೋಪಿಗಳ ವಿರುದ್ಧ ಮಾತ್ರ ಆರೋಪಪಟ್ಟಿ ದಾಖಲಿಸಲಾಗಿತ್ತು. ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕರಾದ ಅರ್ನಾಬ್ ರಂಜನ್ ಗೋಸ್ವಾಮಿ, ಅಮಿತ್ ಮೋಹನ್ ದವೆ, ಸಂಜಯ್ ಸುಖದೇವ್ ವರ್ಮಾ, ವಾಹಿನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಒಒ) ಪ್ರಿಯಾ ಮುಖರ್ಜಿ, ಮುಖ್ಯ ಹಣಕಾಸು ಅಧಿಕಾರಿ ಶಿವ ಸುಬ್ರಮಣ್ಯಂ, ಉದ್ಯೋಗಿಗಳಾದ ಶಿವೇಂದ್ರ ಮುಂದೇರ್ಕರ್, ರಂಜಿತ್‌ ವಾಲ್ಟರ್‌ ಹೆಸರುಗಳು ಪೂರಕ ಆರೋಪಟ್ಟಿಯಲ್ಲಿ ಇವೆ.

ಐಪಿಸಿ ಸೆಕ್ಷನ್ 406, 409 (ಕ್ರಿಮಿನಲ್ ವಿಶ್ವಾಸದ್ರೋಹ) ಮತ್ತು 420 (ವಂಚನೆ) 465, 468 (ಫೋರ್ಜರಿ), 201, 204 (ಸಾಕ್ಷ್ಯ ನಾಶ), 212 (ಅಪರಾಧಿಗೆ ಆಶ್ರಯ), 120 ಬಿ (ಪಿತೂರಿ) ಅಡಿಯಲ್ಲಿ ಅಪರಾಧ ಎಸಗಿದ್ದಕ್ಕಾಗಿ ಆರೋಪಪಟ್ಟಿ ಸಲ್ಲಿಸಲಾಗಿದೆ.

ಹನ್ಸ್‌ ಸಮೂಹದ ಕೆಲ ಉದ್ಯೋಗಿಗಳು ನಿರ್ದಿಷ್ಟ ಟಿವಿ ವಾಹಿನಿಗಳನ್ನು ವೀಕ್ಷಿಸಲು ಜನರಿಗೆ ಹಣ ನೀಡಿದ್ದರು. ಸ್ಯಾಂಪಲಿಂಗ್‌ ಮೀಟರಿಂಗ್‌ ಸೇವೆಗಳನ್ನು ತಿರುಚಲಾಗಿತ್ತು ಎಂಬುದು ಪತ್ತೆಯಾದ ಬಳಿಕ ಟಿಆರ್‌ಪಿ ಹಗರಣದ ಕುರಿತು ಅಪರಾಧ ವಿಭಾಗದ ಪೊಲೀಸರು ತನಿಖೆ ಪ್ರಾರಂಭಿಸಿದ್ದರು.

Related Stories

No stories found.
Kannada Bar & Bench
kannada.barandbench.com