ಶಿವಸೇನಾ ಚಿಹ್ನೆ, ಹೆಸರು ಬಳಕೆಗೆ ತಡೆ: ಚುನಾವಣಾ ಆಯೋಗದ ನಿರ್ಧಾರದ ವಿರುದ್ಧ ದೆಹಲಿ ಹೈಕೋರ್ಟ್‌ಗೆ ಉದ್ಧವ್ ಅರ್ಜಿ

ಶಿವಸೇನಾ ಪಕ್ಷದ ಹೆಸರು ಮತ್ತು ಅದರ ಬಿಲ್ಲು-ಬಾಣದ ಚಿಹ್ನೆ ಯಾವ ಬಣಕ್ಕೆ ಸೇರಿದ್ದು ಎಂದು ನಿರ್ಧರಿಸುವವರೆಗೆ ಅದರ ಬಳಕೆ ಸ್ಥಗಿತಗೊಳಿಸಿ ಇಸಿಐ ಅಕ್ಟೋಬರ್ 8 ರಂದು ಆದೇಶಿಸಿತ್ತು.
Uddhav Thackeray
Uddhav Thackeray

ಶಿವಸೇನಾ ಪಕ್ಷದ ಹೆಸರು ಮತ್ತು ಅದರ ಬಿಲ್ಲು- ಬಾಣದ ಚಿಹ್ನೆಯ ಬಳಕೆ ನಿರ್ಬಂಧಿಸಿರುವ ಭಾರತದ ಚುನಾವಣಾ ಆಯೋಗದ (ಇಸಿಐ) ಆದೇಶಕ್ಕೆ ತಡೆ ನೀಡುವಂತೆ ಕೋರಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ [ಉದ್ಧವ್‌ ಠಾಕ್ರೆ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ]

ಮುಂಬರುವ ಉಪ ಚನಾವಣೆಗೆ ಬಳಸಲು ಭಾರತೀಯ ಚುನಾವಣಾ ಆಯೋಗ ನೀಡಿದ ಮೂರು ಆಯ್ಕೆಗೆ ಸೀಮಿತಗೊಳಿಸುವ ಬದಲು ತಮ್ಮ ಅಭ್ಯರ್ಥಿಗಳ ಆಯ್ಕೆ ಮಾಡಿದ ಚಿಹ್ನೆಯನ್ನೇ ನೀಡಬೇಕು ಎಂದು ಅವರು ಪ್ರಾರ್ಥಿಸಿದ್ದಾರೆ.

Also Read
ಶಿವಸೇನೆ ಹೆಸರು, ಚಿಹ್ನೆ ನಿರ್ಬಂಧಿಸಿದ ಇಸಿಐ: ಠಾಕ್ರೆ- ಶಿಂಧೆ ಬಣಗಳೆರಡೂ ಸದ್ಯಕ್ಕೆ ಅವುಗಳನ್ನು ಬಳಸುವಂತಿಲ್ಲ

ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಬಣಗಳೆರಡೂ ಶಿವಸೇನೆ ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದವು. ಆದರೆ ಇಸಿಐ ಅಕ್ಟೋಬರ್ 8 ರಂದು ಮಧ್ಯಂತರ ಆದೇಶ ನೀಡಿ ತಾನು ಶಿವಸೇನಾ ಪಕ್ಷದ ಹೆಸರು ಮತ್ತು ಅದರ ಬಿಲ್ಲು-ಬಾಣದ ಚಿಹ್ನೆ ಯಾವ ಬಣಕ್ಕೆ ಸೇರಿದ್ದು ಎಂದು ನಿರ್ಧರಿಸುವವರೆಗೆ ಅವುಗಳನ್ನು ಬಳಸದಂತೆ ತಡೆ ಹಿಡಿದಿತ್ತು.  ರಾಜ್ಯದಲ್ಲಿ ಮುಂಬರುವ ಉಪಚುನಾವಣೆಗಳಿಗೆ ಈ ನಿರ್ಬಂಧ ಅನ್ವಯಿಸುತ್ತದೆ.

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರು ಆದೇಶ ಹೊರಡಿಸಿದ್ದರು.

Kannada Bar & Bench
kannada.barandbench.com