‘ತೃಣಮೂಲ’ ಸಂಸದರ ಮಾನಹಾನಿ ಪ್ರಕರಣ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಮನ್ಸ್ ನೀಡಿದ ಪಶ್ಚಿಮ ಬಂಗಾಳ ನ್ಯಾಯಾಲಯ

‘ಸಂಸದರು ಮತ್ತು ಶಾಸಕರ ವಿರುದ್ಧ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿರುವ ಬಿಧಾನ್‌ನಗರ ವಿಶೇಷ ನ್ಯಾಯಾಲಯ ಫೆಬ್ರವರಿ 22 ರಂದು ಬೆಳಿಗ್ಗೆ 10 ಗಂಟೆಗೆ ಅಮಿತ್ ಶಾ ಅವರು ಕೋರ್ಟ್‌ಗೆ‌ ಹಾಜರಾಗುವಂತೆ ಆದೇಶಿಸಿದೆ.
‘ತೃಣಮೂಲ’ ಸಂಸದರ ಮಾನಹಾನಿ ಪ್ರಕರಣ: ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಸಮನ್ಸ್ ನೀಡಿದ ಪಶ್ಚಿಮ ಬಂಗಾಳ ನ್ಯಾಯಾಲಯ
Amit Shah and TMC MP Abhishek Banerjee

ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ಅವರು ದಾಖಲಿಸಿರುವ ಕ್ರಿಮಿನಲ್ ಮಾನಹಾನಿ ಮೊಕದ್ದಮೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪಶ್ಚಿಮ ಬಂಗಾಳದ ನ್ಯಾಯಾಲಯವೊಂದು ಸಮನ್ಸ್‌ ನೀಡಿದೆ.

“ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 500ರ ಅಡಿ ಉತ್ತರಿಸಲು ನಿಮ್ಮ ಹಾಜರಾತಿ ಅಗತ್ಯ. ಫೆಬ್ರವರಿ 22 ರಂದು ಬೆಳಿಗ್ಗೆ 10 ಗಂಟೆಗೆ ಬಿಧಾನ್‌ನಗರ ವಿಶೇಷ ನ್ಯಾಯಾಧೀಶರ (ಸಂಸದ / ಶಾಸಕ) ನ್ಯಾಯಾಲಯದ ಮುಂದೆ ನೀವು ಖುದ್ದಾಗಿ / ವಕೀಲರ ಮೂಲಕ ಹಾಜರಾಗಬೇಕು ”ಎಂದು ನ್ಯಾಯಾಲಯ ಆದೇಶಿಸಿದೆ.
Also Read
ಪಶ್ಚಿಮ ಬಂಗಾಳದ 5 ಬಿಜೆಪಿ ನಾಯಕ ವಿರುದ್ಧ ಬಲಾತ್ಕಾರದ ಕ್ರಮಕೈಕೊಳ್ಳದಂತೆ ರಾಜ್ಯ ಪೊಲೀಸ್‌ಗೆ ಸುಪ್ರೀಂ ಕೋರ್ಟ್ ಸೂಚನೆ

2018ರ ಆಗಸ್ಟ್ 11ರಂದು ಕೋಲ್ಕತ್ತಾದಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಶಾ ಮಾಡಿದ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ‌ ಮಾನನಷ್ಟ ಮೊಕದ್ದಮೆ ಹೂಡಿದ್ದರು. ದೂರಿನ ಪ್ರಕಾರ, ಶಾ ತಮ್ಮ ಭಾಷಣದ ವೇಳೆ, ಮುಖ್ಯಮಂತ್ರಿ ಭತೀಜಾ (ಸೋದರಳಿಯ) ಬಗ್ಗೆ ನಯವಾಗಿ, ಪರೋಕ್ಷವಾಗಿ ಹಲವು ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಶಾ ತಮ್ಮ ಭಾಷಣದ ವೇಳೆ, “ನಾರದ, ಶಾರದಾ, ರೋಸ್ ವ್ಯಾಲಿ ಕೂಟದ ಭ್ರಷ್ಟಾಚಾರ. ಸೋದರಳಿಯನ ಭ್ರಷ್ಟಾಚಾರ. ಭ್ರಷ್ಟಾಚಾರದ ಸರಣಿಯನ್ನೇ ಮಮತಾಜಿ ನಡೆಸಿದ್ದಾರೆ,” ಎಂದಿದ್ದರು. ಮುಂದುವರೆದು, “ಬಂಗಾಳದ ಗ್ರಾಮೀಣ ನಿವಾಸಿಗಳೇ, ಮೋದೀಜಿಯವರು ಕಳುಹಿಸಿದ ಹಣ ನಿಮ್ಮ ಗ್ರಾಮ ತಲುಪಿದೆಯೇ? ದಯವಿಟ್ಟು ಜೋರಾಗಿ ಹೇಳಿ, ಹಣ ನಿಮ್ಮ ಹಳ್ಳಿ ತಲುಪಿದೆಯೇ? ಅದು ಎಲ್ಲಿ ಹೋಯಿತು? ಮೋದಿಜಿ ಅದನ್ನು ಕಳುಹಿಸಿದ 3,95,000 ಕೋಟಿ ರೂಪಾಯಿ ಎಲ್ಲಿಗೆ ಹೋಯಿತು? ಇದನ್ನು ಸೋದರಳಿಯ ಮತ್ತವರ ಕೂಟಕ್ಕೆ ಉಡುಗೊರೆಯಾಗಿ ನೀಡಲಾಗಿದೆ,” ಎಂದು ಹೇಳಿರುವುದಾಗಿ ಬ್ಯಾನರ್ಜಿ ಅರ್ಜಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.

ಶಾ ಅವರ ಆರೋಪದಲ್ಲಿ ಹುರುಳಿಲ್ಲ. ಅವು ಸತ್ಯಕ್ಕೆ ದೂರವಾದವು. ದೂರುದಾರರ ಘನತೆಗೆ ಕುಂದು ತರಲು ಮತ್ತು ಅವರ ಮಾನಹಾನಿ ಮಾಡುವ ತಂತ್ರ ಇದಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

[ಆದೇಶವನ್ನು ಇಲ್ಲಿ ಓದಿ]

Attachment
PDF
Amit_Shah_order.pdf
Preview

Related Stories

No stories found.
Kannada Bar & Bench
kannada.barandbench.com