ಯುಪಿಎಸ್‌ಸಿ 2021ರ ಫಲಿತಾಂಶ: ದೇಶದ ವಿವಿಧ ಕಾನೂನು ಪದವೀಧರರ ಸಾಧನೆ

ಬೆಂಗಳೂರಿನ ಎನ್‌ಎಲ್‌ಎಸ್‌ಐಯುನ ಮೂವರು ವಿದ್ಯಾರ್ಥಿಗಳು ಪರೀಕ್ಷೆ ತೇರ್ಗಡೆಯಾದವರ ಪಟ್ಟಿಯಲ್ಲಿದ್ದಾರೆ.
ಯುಪಿಎಸ್‌ಸಿ 2021ರ ಫಲಿತಾಂಶ: ದೇಶದ ವಿವಿಧ ಕಾನೂನು ಪದವೀಧರರ ಸಾಧನೆ
Published on

ಕನಿಷ್ಠ ಏಳು ಕಾನೂನು ಪದವೀಧರರು 2021ರ ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ಪ್ರಸಕ್ತ ಸಾಲಿನ ಪರೀಕ್ಷೆಗಳಲ್ಲಿ ಕನಿಷ್ಠ ಏಳು ಕಾನೂನು ಪದವೀಧರರು ಉತ್ತೀರ್ಣರಾಗಿದ್ದಾರೆ.

ಬೆಂಗಳೂರಿನ ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಮೂವರು ವಿದ್ಯಾರ್ಥಿಗಳು, ಹೈದರಾಬಾದ್‌ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (ಎನ್‌ಎಎಲ್‌ಎಸ್‌ಎಆರ್‌), ರಾಯಪುರದ ಹಿದಾಯತುಲ್ಲಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎಚ್‌ಎನ್‌ಎಲ್‌ಯು), ಕೊಚ್ಚಿಯ ರಾಷ್ಟ್ರೀಯ ಉನ್ನತ ಕಾನೂನು ಅಧ್ಯಯನ ವಿವಿ ಹಾಗೂ ಪಂಜಾಬ್‌ ವಿವಿಗೆ ಸೇರಿದ ವಿಶ್ವವಿದ್ಯಾಲಯ ಕಾನೂನು ಅಧ್ಯಯನ ಸಂಸ್ಥೆಯ ತಲಾ ಒಬ್ಬರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಎನ್‌ಎಲ್‌ಎಸ್‌ಐಯುನ 2021ರ ಬ್ಯಾಚ್‌ನ ಅವಿನಾಶ್ ವಿ ತಮ್ಮ ಮೊದಲ ಪ್ರಯತ್ನದಲ್ಲೇ 31ನೇ ರ್‍ಯಾಂಕ್ ಗಳಿಸಿ ಇಡೀ ಕರ್ನಾಟಕಕ್ಕೇ ಅತಿ ಹೆಚ್ಚು ಅಂಕ ಗಳಿಸಿದ್ದಾರೆ. ಪಂಜಾಬ್‌ ವಿವಿಗೆ ಸೇರಿದ ಯುಐಎಲ್‌ಎಸ್‌ನ ಪದವೀಧರ ರೈತ ಕುಟುಂಬದಿಂದ ಬಂದಿರುವ ಜಸ್ಪಿಂದರ್ ಸಿಂಗ್ ಭುಲ್ಲರ್ ತಮ್ಮ ಎರಡನೇ ಪ್ರಯತ್ನದಲ್ಲಿ 33ನೇ ರ್‍ಯಾಂಕ್ ಗಳಿಸಿದ್ದಾರೆ. ಅವರು ತಮ್ಮ ಕುಟುಂಬದ ಮೊದಲ ತಲೆಮಾರಿನ ಪದವೀಧರ.

Also Read
ಧನಂಜಯ್ '22: ಕಾನೂನು ವೃತ್ತಿ ಆರಂಭಿಸಲಿರುವ ಎನ್ಎಲ್‌ಯು ಪದವೀಧರರಿಗೆ ಹಣಕಾಸು ನೆರವು ಪ್ರಕಟಿಸಿದ ಸಿಎಎನ್ ಪ್ರತಿಷ್ಠಾನ

2018 ರ ಎನ್‌ಎಲ್‌ಎಸ್‌ಐಯು ಪದವೀಧರೆ ಮತ್ತು ಚಿನ್ನದ ಪದಕ ವಿಜೇತೆ ಶ್ರದ್ಧಾ ಗೋಮ್ ಅಖಿಲ ಭಾರತ ಮಟ್ಟದಲ್ಲಿ 60ನೇ ರ್‍ಯಾಂಕ್ ಪಡೆದಿದ್ದಾರೆ. 2018ರ ಬ್ಯಾಚ್‌ನ ಕೊಚ್ಚಿ ಎನ್‌ಯುಎಎಲ್‌ಎಸ್‌ ವಿದ್ಯಾರ್ಥಿ ಅಖಿಲ್ ವಿ ಮೆನನ್ 66ನೇ ರ್‍ಯಾಂಕ್ ಗಳಿಸಿದ್ದಾರೆ. ಎಚ್‌ಎನ್‌ಎಲ್‌ಯುನ 2020ರ ಹಳೆಯ ವಿದ್ಯಾರ್ಥಿ ಗೌರಬ್ ಕುಮಾರ್ ಅಗರ್ವಾಲ್ ಅವರು ತಮ್ಮ ಎರಡನೇ ಪ್ರಯತ್ನದಲ್ಲಿ 86ನೇ ರ್‍ಯಾಂಕ್ ಗಳಿಸಿದ್ದಾರೆ.

ಎನ್‌ಎಎಲ್‌ಎಸ್‌ಎಆರ್‌ನ 2019ರ ಬ್ಯಾಚ್‌ನ ಲೊವಿಶ್ ಗಾರ್ಗ್ ಅವರು 184ನೇ ರ್‍ಯಾಂಕ್‌ನೊಂದಿಗೆ ಪರೀಕ್ಷೆಯಲ್ಲಿ ತೇರ್ಗಡೆಯಗಿದ್ದು ಭಾರತೀಯ ಪೊಲೀಸ್ ಸೇವೆಯಲ್ಲಿ ತೊಡಗಿಕೊಳ್ಳುವ ಉದ್ದೇಶ ಹೊಂದಿದ್ದಾರೆ.

2016ರಲ್ಲಿ ಪದವಿ ಪಡೆದ ಮತ್ತೊಬ್ಬ ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿ ಯೋಗೇಶ್ ದಿಲ್ಹೋರ್ ತನ್ನ ಅಂತಿಮ ಪ್ರಯತ್ನದಲ್ಲಿ 633ನೇ ರ್‍ಯಾಂಕ್ ಪಡೆದಿದ್ದಾರೆ.

Kannada Bar & Bench
kannada.barandbench.com