
ಹೈಕೋರ್ಟ್ ರಿಜಿಸ್ಟ್ರಿ ಇಮೇಲ್ ಕಳಿಸುವ ಬದಲಿಗೆ ಅಂಚೆ ಮೂಲಕ ಪತ್ರ ಬರೆದಿದ್ದರಿಂದ ತಮಗೆ ತಲುಪಬೇಕಾದ ಸಂವಹನವು ನಿಧಾನವಾಯಿತು ಎಂದು ಸಮಜಾಯಿಷಿ ನೀಡಿದ್ದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಗೆ ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠ ಕಠಿಣ ಎಚ್ಚರಿಕೆ ನೀಡಿದೆ [ಮೋಹನ್ ಕೊರ್ಡೆ ಅವರ ಪತ್ನಿ ಸುನೀತಾ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರ ನಡುವಣ ಪ್ರಕರಣ]
ಮ್ಯಾಜಿಸ್ಟ್ರೇಟ್ ಮೇಲಧಿಕಾರಿಗಳೊಂದಿಗೆ ಸಂವಹನ ನಡೆಸುವಾಗ ಸರಿಯಾದ ಪದಗಳನ್ನು ಬಳಸಬೇಕು ಮತ್ತು ವಿಧೇಯರಾಗಿರಬೇಕು ಎಂದು ಜೂನ್ 23ರಂದು ಹೊರಡಿಸಿದ ಆದೇಶದಲ್ಲಿ, ಹೈಕೋರ್ಟ್ ಎಚ್ಚರಿಕೆ ನೀಡಿದೆ.
ಕ್ರಿಮಿನಲ್ ತನಿಖೆಗೆ ಸಂಬಂಧಿಸಿದ ರಿಟ್ ಅರ್ಜಿಯನ್ನು ವಿಚಾರಣೆ ಮಾಡುವಾಗ ಹೈಕೋರ್ಟ್ ಈ ಹಿಂದೆ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಿಂದ ವಾಸ್ತವಿಕ ವರದಿ ಕೇಳಿತ್ತು. ಇದರ ವಿವರವುಳ್ಳ ಪತ್ರವನ್ನು ತ್ವರಿತವಾಗಿ ಹೈಕೋರ್ಟ್ ರಿಜಿಸ್ಟ್ರಿ ಕಳಿಸಿಕೊಟ್ಟಿಲ್ಲ ಎಂದು ನ್ಯಾಯಾಧೀಶರು ಉಚ್ಚ ನ್ಯಾಯಾಲಯಕ್ಕೆ ಮಾರುತ್ತರ ನೀಡಿದ್ದರು.
ಮಾಹಿತಿಯನ್ನು ಇಮೇಲ್ ಮಾಡುವ ಬದಲಿಗೆ ಅಂಚೆ ಮೂಲಕ ಕಳಿಸಲಾಗಿದೆ ಎಂದು ನ್ಯಾಯಾಧೀಶರು ದಪ್ಪ ಅಕ್ಷರಗಳಲ್ಲಿ ಪ್ರತಿಕ್ರಿಯೆ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಸಂಜಯ್ ದೇಶಮುಖ್ ಅವರಿದ್ದ ಪೀಠವು ಹೈಕೋರ್ಟ್ ಹೇಗೆ ಸಂವಹನವನ್ನು ಮಾಡಬೇಕು ಎಂದು ನಿರ್ಧರಿಸುವುದು ಮ್ಯಾಜಿಸ್ಟ್ರೇಟ್ ಅವರಿಗೆ ಬಿಟ್ಟ ಸಂಗತಿಯಲ್ಲ ಎಂದು ಕಟುವಾಗಿ ತನ್ನ ಆದೇಶದಲ್ಲಿ ದಾಖಲಿಸಿತು ನುಡಿಯಿತು.
ನ್ಯಾಯಾಧೀಶರು ವರ್ಗವಾಗಲಿದ್ದಾರೆ ಎಂಬುದನ್ನು ಇದೇ ವೇಳೆ ಗಮನಿಸಿದ ಹೈಕೋರ್ಟ್ “ಮುಂದೆ ಮೇಲಾಧಿಕಾರಿಗಳೊಂದಿಗೆ ಅವರು ಸಂವಹನ ನಡೆಸಲು ಅನುವಾಗುವಂತೆ ತಾನು ನೀಡುತ್ತಿರುವ ಆದೇಶದ ಪ್ರತಿಯನ್ನು ಅವರು ವರ್ಗವಾಗುವ ಸ್ಥಳಕ್ಕೆ ಕಳಿಸಿಕೊಡುವಂತೆ ರಿಜಿಸ್ಟ್ರಿ ಅವರಿಗೆ ಸೂಚಿಸಿತು.ರು