ರಾಮನ ಬಗ್ಗೆ ರಾಹುಲ್ ಹೇಳಿಕೆ: ಅರ್ಜಿ ವಜಾಗೊಳಿಸಿದ ವಾರಾಣಸಿ ನ್ಯಾಯಾಲಯ

ವಕೀಲ ಹರಿಶಂಕರ್ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ನೀರಜ್ ಕುಮಾರ್ ತ್ರಿಪಾಠಿ ವಜಾಗೊಳಿಸಿದರು.
Lord Ram Statue
Lord Ram Statue
Published on

ಕಳೆದ ತಿಂಗಳು ಅಮೆರಿಕದ ವಿಶ್ವವಿದ್ಯಾಲಯವೊಂದರಲ್ಲಿ ಭಾಷಣ ಮಾಡುವಾಗ ರಾಮನ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಉತ್ತರ ಪ್ರದೇಶದ ವಾರಾಣಸಿಯ ಜನಪ್ರತಿನಿಧಿಗಳ ನ್ಯಾಯಾಲಯ ಇತ್ತೀಚೆಗೆ ವಜಾಗೊಳಿಸಿದೆ.

ವಕೀಲ ಹರಿಶಂಕರ್ ಪಾಂಡೆ ಸಲ್ಲಿಸಿದ್ದ ಅರ್ಜಿಯನ್ನು ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ  ನೀರಜ್ ಕುಮಾರ್ ತ್ರಿಪಾಠಿ ವಜಾಗೊಳಿಸಿರುವುದು ವರದಿಯಾಗಿದೆ.

Also Read
ಸಾವರ್ಕರ್ ಕುರಿತ ಮಾನನಷ್ಟ ಮೊಕದ್ದಮೆ ಹೂಡಿರುವಾತ ತಾನು ಗೋಡ್ಸೆ ವಂಶಸ್ಥ ಎಂಬುದನ್ನು ಬಹಿರಂಗಪಡಿಸಿಲ್ಲ: ರಾಹುಲ್ ಗಾಂಧಿ

ಬ್ರೌನ್ ವಿಶ್ವವಿದ್ಯಾಲಯದಲ್ಲಿ ಮಾಡಿದ ಭಾಷಣದಲ್ಲಿ ಗಾಂಧಿಯವರು ಭಗವಾನ್ ರಾಮನನ್ನು "ಪೌರಾಣಿಕ ಮತ್ತು ಕಾಲ್ಪನಿಕ ವ್ಯಕ್ತಿ" ಎಂದು ಉಲ್ಲೇಖಿಸಿರುವುದನ್ನು ಪ್ರಶ್ನಿಸಿ ಮೇ 12ರಂದು ಪಾಂಡೆ ಎಂಬವರು ದೂರು ದಾಖಲಿಸಿದ್ದರು.

ಈ ಹೇಳಿಕೆ ದ್ವೇಷಪೂರಿತ ಮತ್ತು ವಿವಾದಾತ್ಮಕ ಎಂದು ಅವರು ಆರೋಪಿಸಿದ್ದರು. ದಂಡ ಸಂಹಿತೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಅವರು ಕೋರಿದರು. ಆದರೆ, ನ್ಯಾಯಾಲಯ ಅರ್ಜಿ ವಜಾಗೊಳಿಸಿತು.

Kannada Bar & Bench
kannada.barandbench.com