ಎಪ್ಪತ್ತರ ದಶಕದ ತುರ್ತು ಪರಿಸ್ಥಿತಿ ವೇಳೆ ಬಂಧನಕ್ಕೊಳಗಾದ ವ್ಯಕ್ತಿಗಳನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಘೋಷಿಸುವಂತೆ ಸಂಘಟನೆಯೊಂದು ಸುಪ್ರೀಂಕೋರ್ಟ್ ಮೊರೆ ಹೋಗಿದೆ. 1975 ರಲ್ಲಿ ಇಂದಿರಾಗಾಂಧಿ ಸರ್ಕಾರ ಘೋಷಿಸಿದ ತುರ್ತು ಪರಿಸ್ಥಿತಿಯನ್ನು ಅಸಾಂವಿಧಾನಿಕ ಎಂದು ಘೋಷಿಸಲು ಇತ್ತೀಚೆಗೆ ಸಲ್ಲಿಸಿದ ಅರ್ಜಿಯಲ್ಲಿ ಮಧ್ಯಪ್ರವೇಶಿಸಲು ಅಖಿಲ ಭಾರತ ಲೋಕಂತ್ರ ಸೇನಾನಿ ಜಂಟಿ ಕ್ರಿಯಾ ಸಮಿತಿ ಮುಂದಾಗಿದೆ.
ಸಂಘಟನೆ ಒಂದು ಮಾತೃವೇದಿಕೆಯಾಗಿದ್ದು ದೇಶದೆಲ್ಲೆಡೆ ತುರ್ತು ಪರಿಸ್ಥಿತಿಯ ಸಂತ್ರಸ್ತರನ್ನು ಪ್ರತಿನಿಧಿಸುವ ಹಲವು ಸಂಸ್ಥೆಗಳನ್ನು ಇದು ಒಳಗೊಂಡಿದೆ ಎಂದು ವಕೀಲರಾದ ಭಾರತಿ ತ್ಯಾಗಿ ಅವರ ಮೂಲಕ ಸಲ್ಲಿಸಲಾದ ಮಧ್ಯಪ್ರವೇಶ ಅರ್ಜಿಯಲ್ಲಿ ತಿಳಿಸಲಾಗಿದೆ.
ಹತ್ತು ರಾಜ್ಯಗಳು ಅರ್ಜಿದಾರರನ್ನು ಗುರುತಿಸಿ ಅವರಿಗೆ ಮಾಸಿಕ ಪಿಂಚಣಿ, ಉಚಿತ ಆರೋಗ್ಯ ಸೇವೆ ಮತ್ತು ಪ್ರಯಾಣದ ಪಾಸ್‌ಗಳನ್ನು ವಿತರಿಸಿವೆ ಎಂದು ಕೂಡ ಅರ್ಜಿಯಲ್ಲಿ ತಿಳಿಸಲಾಗಿದೆ. ಈ ರಾಜ್ಯಗಳಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಛತ್ತೀಸ್‌ಗಡ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನ ಸೇರಿವೆ ಎಂದು ಉಲ್ಲೇಖಿಸಲಾಗಿದೆ.
ಆದರೂ ಈ ಕಲ್ಯಾಣ ಯೋಜನೆಗಳು ಸ್ಥಿರವಾಗಿಲ್ಲ ಮತ್ತು ಅಧಿಕಾರದಲ್ಲಿರುವ ಪಕ್ಷವನ್ನು ಅವಲಂಬಿಸಿ ಅವು ಬದಲಾಗುತ್ತವೆ ಎಂದು ಸಂಘಟನೆ ತಿಳಿಸಿದೆ. ರಾಜ್ಯಗಳಲ್ಲಿ ಆಡಳಿತ ಪಕ್ಷ ಬದಲಾದ ಪರಿಣಾಮ ರಾಜ್ಯ ಸರ್ಕಾರಗಳು ಸದಸ್ಯರಿಗೆ ಹೇಗೆ ಆರ್ಥಿಕ ನೆರವು ನಿಲ್ಲಿಸಿದವು ಎಂಬುದನ್ನು ಉದಾಹರಣೆಗಳ ಮೂಲಕ ಅರ್ಜಿಯಲ್ಲಿ ವಿವರಿಸಲಾಗಿದೆ.
"ಈ ಸೌಲಭ್ಯಗಳನ್ನು ಸ್ಥಿರ ರೀತಿಯಲ್ಲಿ ಒದಗಿಸಲಾಗಿಲ್ಲ ಮತ್ತು ಅಧಿಕಾರದಲ್ಲಿರುವ ಪಕ್ಷದ ಮರ್ಜಿಗೆ ಅನುಗುಣವಾಗಿ ಹಾಗೂ ರಾಜ್ಯ ರಾಜಕೀಯದ ಕಾರಣಕ್ಕಾಗಿ ಇದನ್ನು ಸಂಪೂರ್ಣ ತೆಗೆದುಹಾಕಲಾಗಿದೆ."
ಅಖಿಲ ಭಾರತ ಲೋಕಂತ್ರ ಸೆನಾನಿ ಜಂಟಿ ಕ್ರಿಯಾ ಸಮಿತಿ
ತುರ್ತು ಪರಿಸ್ಥಿತಿಯ ಸಂತ್ರಸ್ತರನ್ನು "ಕ್ರೂರವಾಗಿ ಹಿಂಸಿಸಲಾಯಿತು" ಮತ್ತು ಅವರನ್ನು "ಮಂಜಿನ ಇಟ್ಟಿಗೆಗಳ" ಮೇಲೆ ಹಲವಾರು ಗಂಟೆಗಳ ಕಾಲ ಇಡಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಅನುಭವಿಸಿದ ಜೈಲುವಾಸದ ಕಾರಣ ಪರಿಹಾರ ಮತ್ತು ಪಿಂಚಣಿಗಾಗಿ ಅವರು ಕೇರಳ ಹೈಕೋರ್ಟ್ ಕದ ತಟ್ಟಿದ್ದರು ಎಂದು ಅರ್ಜಿ ಸಲ್ಲಿಸಿರುವ ಸಂಸ್ಥೆ ತಿಳಿಸಿದೆ. ಆದರೆ ಕೇಂದ್ರ ಸರ್ಕಾರವನ್ನು ಪ್ರಕರಣದಲ್ಲಿ ಒಳಗೊಳ್ಳಬೇಕಿದ್ದ ನ್ಯಾಯಾಲಯ, ಆ ಮನವಿಯನ್ನು ವಿಲೇವಾರಿ ಮಾಡಲಾಯಿತು ಎಂದು ಹೇಳಿದೆ.
ವೃದ್ಧ ಅರ್ಜಿದಾರೆ ವೆರಾ ಸರಿನ್ ಸಲ್ಲಿಸಿದ್ದ ಅಹವಾಲನ್ನು ಮಾರ್ದನಿಸುತ್ತಾ ತನ್ನ ಸದಸ್ಯರು ಕಾನೂನುಬದ್ಧ ಹಕ್ಕು ಮತ್ತು ಸ್ವಾತಂತ್ರ್ಯದಿಂದ ವಂಚಿತರಾಗಿದ್ದಾರೆ ಎಂದು ಸಂಘಟನೆ ಹೇಳಿದೆ.
ತುರ್ತುಪರಿಸ್ಥಿತಿ ಘೋಷಣೆಯ ಸಿಂಧುತ್ವವನ್ನು ಪರಿಶೀಲಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಾದಿಸಿದ್ದರು.
“ಯುದ್ಧಾಪರಾಧಗಳ ಕುರಿತಾದ ವಿಚಾರಗಳ ಬಗ್ಗೆ ಇನ್ನೂ ವಿಚಾರಣೆ ನಡೆಸಲಾಗುತ್ತಿದೆ. ವಿಶ್ವ ಸಮರದ ಬಳಿಕವೂ ಆಗ ನಡೆದ ಹತ್ಯಾಕಾಂಡ ಕುರಿತು ದಾವೆಗಳನ್ನು ಹೂಡಲಾಗುತ್ತಿದೆ. ಇದು (ರಾಷ್ಟ್ರೀಯ ತುರ್ತು ಪರಿಸ್ಥಿತಿ) ಸಂವಿಧಾನಕ್ಕೆ ಮಾಡಿರುವ ವಂಚನೆ. ಈ ಕುರಿತು ಘನ ನ್ಯಾಯಾಲಯ ನಿರ್ಧರಿಸಬೇಕು ಎಂದು ನನಗೆ ಬಲವಾಗಿ ಅನ್ನಿಸುತ್ತಿದೆ. ಇದು ರಾಜಕೀಯ ಚರ್ಚೆಗೆ ಗ್ರಾಸವಾಗುವ ವಿಚಾರವಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕೈದಿಗಳಿಗೆ ಏನಾಯಿತು ಎಂದು ನಾವು ನೋಡಿಲ್ಲವೇ” ಎಂದು ಹೇಳಿದ್ದರು.