ಹೈಕೋರ್ಟ್‌ನಲ್ಲಿ ಡಿ.11ರಿಂದ ವಿಡಿಯೊ ಕಾನ್ಫರೆನ್ಸ್‌ ಪುನಾರಂಭ; ಮಾರ್ಗಸೂಚಿ ಪ್ರಕಟಿಸಿದ ಹೈಕೋರ್ಟ್‌

ಎಲ್ಲಾ ವಕೀಲರು, ಪಾರ್ಟಿ ಇನ್‌ ಪರ್ಸನ್ಸ್‌, ದಾವೆದಾರರು ಕಡ್ಡಾಯವಾಗಿ ಜೂಮ್‌ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಬಳಕೆದಾರರನ್ನು ಮಾತ್ರ ನ್ಯಾಯಾಲಯದ ಕಲಾಪಕ್ಕೆ ಅನುಮತಿಸಲಾಗುವುದು ಎಂದು ತಿಳಿಸಿರುವ ನ್ಯಾಯಾಲಯ.
Karnataka HC and Video conference
Karnataka HC and Video conference
Published on

ಕರ್ನಾಟಕ ಹೈಕೋರ್ಟ್‌ನ ಮೂರೂ ಪೀಠಗಳಲ್ಲಿ ಸೋಮವಾರದಿಂದ (ಡಿಸೆಂಬರ್‌ 11) ಮತ್ತೆ ವಿಡಿಯೊ ಕಾನ್ಫರೆನ್ಸ್‌ ಸೇವೆ ಪ್ರಾಯೋಗಿಕ ಆಧಾರದಲ್ಲಿ ಆರಂಭವಾಗಲಿದೆ ಎಂದು ಹೈಕೋರ್ಟ್‌ನ ಕಂಪ್ಯೂಟರ್‌ ವಿಭಾಗದ ರಿಜಿಸ್ಟ್ರಾರ್‌ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸಂಬಂಧ ಮಾರ್ಗಸೂಚಿಯನ್ನೂ ಹೊರಡಿಸಲಾಗಿದೆ.

ಎಲ್ಲಾ ವಕೀಲರು, ಪಾರ್ಟಿ ಇನ್‌ ಪರ್ಸನ್ಸ್‌, ದಾವೆದಾರರು ಕಡ್ಡಾಯವಾಗಿ ಜೂಮ್‌ ವೇದಿಕೆಯಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಾಯಿತ ಬಳಕೆದಾರರನ್ನು ಮಾತ್ರ ನ್ಯಾಯಾಲಯದ ಕಲಾಪಕ್ಕೆ ಅನುಮತಿಸಲಾಗುವುದು. ವಕೀಲರು, ಪಾರ್ಟಿ ಇನ್‌ ಪರ್ಸನ್ಸ್‌, ದಾವೆದಾರರು ಲಿಸ್ಟ್‌ ಪಟ್ಟಿ, ಪ್ರಕರಣದ ಸಂಖ್ಯೆ ಮತ್ತು ಹೆಸರನ್ನು ಉಲ್ಲೇಖಿಸಬೇಕು ಅದೇ ರೀತಿ ಮಾಧ್ಯಮದವರು ತಮ್ಮ ಹೆಸರು, ಸಂಸ್ಥೆಯ ವಿವರಗಳನ್ನು ಉಲ್ಲೇಖಿಸಬೇಕು ಎನ್ನಲಾಗಿದೆ. ಎಲ್ಲಾ ಕೋರ್ಟ್‌ ಹಾಲ್‌ಗಳಲ್ಲೂ ಕಾಯ್ದಿರಿಸುವ ಕೊಠಡಿ ಇರಲಿದೆ. ಸರಿಯಾದ ಪ್ರಕರಣದ ಸಂಖ್ಯೆ ಉಲ್ಲೇಖಿಸಿರುವವರನ್ನು ಮಾತ್ರ ಕಲಾಪಕ್ಕೆ ಅನುಮತಿಸಲಾಗುತ್ತದೆ. ಭಾರತದ ಹೊರಗಿನಿಂದ ವಿಚಾರಣೆಯಲ್ಲಿ ಭಾಗವಹಿಸುವವರು ನ್ಯಾಯಾಂಗ ರಿಜಿಸ್ಟ್ರಾರ್‌ ಅವರಿಗೆ ಈಮೇಲ್‌ (regjudicial@hck.gov.in) ಕಳುಹಿಸಿ ಅನುಮತಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.

Also Read
ಅನುಚಿತ ಘಟನೆ: ವಿಡಿಯೊ ಕಾನ್ಫರೆನ್ಸ್‌, ಲೈವ್‌ ಸ್ಟ್ರೀಮಿಂಗ್‌ ತಾತ್ಕಾಲಿಕವಾಗಿ ಅಮಾನತು ಮಾಡಿದ ಕರ್ನಾಟಕ ಹೈಕೋರ್ಟ್‌

ಡಿಸೆಂಬರ್‌ 4ರಂದು ಹೈಕೋರ್ಟ್‌ನ ಕೆಲವು ಕೋರ್ಟ್‌ಗಳಲ್ಲಿನ ವಿಡಿಯೊ ಕಾನ್ಫರೆನ್ಸ್‌ ವೇಳೆ ಅನುಚಿತ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳಲ್ಲಿ ಲೈವ್‌ ಸ್ಟ್ರೀಮಿಂಗ್‌ ಮತ್ತು ವಿಡಿಯೊ ಕಾನ್ಫರೆನ್ಸ್‌ ಅನ್ನು ಹೈಕೋರ್ಟ್‌ ನಿರ್ಬಂಧಿಸಿತ್ತು. 

Kannada Bar & Bench
kannada.barandbench.com