ಸಿಜೆಐ ಚಂದ್ರಚೂಡ್ ಪತ್ನಿ ಗುರಿಯಾಗಿಸಿ ಟ್ವೀಟ್: ಸೈಬರ್ ದೂರು ದಾಖಲಿಸಿಕೊಂಡ ಪ. ಬಂಗಾಳ ಪೊಲೀಸರು

ಕಲ್ಪನಾ ದಾಸ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವೈಯಕ್ತಿಕ ವೈದ್ಯರ ಬಂಧು ಎಂದು ಟ್ವೀಟ್‌ಗಳು ಆರೋಪಿಸಿದ್ದವು.
ಸಿಜೆಐ ಚಂದ್ರಚೂಡ್ ಪತ್ನಿ ಗುರಿಯಾಗಿಸಿ ಟ್ವೀಟ್: ಸೈಬರ್ ದೂರು ದಾಖಲಿಸಿಕೊಂಡ ಪ. ಬಂಗಾಳ ಪೊಲೀಸರು
Published on

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಅವರ ಪತ್ನಿಯನ್ನು ಗುರಿಯಾಗಿಸಿಕೊಂಡು ಮಾಡಲಾದ ದುರುದ್ದೇಶಪೂರಿತ ಟ್ವೀಟ್‌ಗಳ ಕುರಿತು ಪಶ್ಚಿಮ ಬಂಗಾಳ ಪೊಲೀಸರಿಗೆ ಸೈಬರ್ ದೂರು ನೀಡಲಾಗಿದೆ.

Also Read
ಆರ್‌ ಜಿ ಕರ್ ಕಾಲೇಜು ಪ್ರಕರಣ: ವೈದ್ಯಕೀಯ ವೃತ್ತಿಪರರ ಸುರಕ್ಷತೆಗಾಗಿ ರಾಷ್ಟ್ರೀಯ ಕಾರ್ಯಪಡೆ ರಚಿಸಿದ ಸುಪ್ರೀಂ

ಸಿಜೆಐ ಚಂದ್ರಚೂಡ್‌ ಅವರ ಪತ್ನಿ ಕಲ್ಪನಾ ದಾಸ್ ಅವರು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವೈಯಕ್ತಿಕ ವೈದ್ಯರ ಬಂಧು ಎಂದು ಪ್ರಕಟವಾದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ದೂರು ದಾಖಲಾಗಿದೆ.

Also Read
ವೈದ್ಯೆ ಅತ್ಯಾಚಾರ ಮತ್ತು ಕೊಲೆ: ಹಣಕಾಸು ಅವ್ಯವಹಾರ ತನಿಖೆ ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಮಾಜಿ ಪ್ರಾಂಶುಪಾಲ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಯುವ ಸ್ಥಾನಿಕ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ಸಂಬಂಧಿಸಿದಂತೆ ಸಿಜೆಐ ನೇತೃತ್ವದ ಪೀಠವು ಸ್ವಯಂಪ್ರೇರಿತ ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದೆ.

Also Read
ವೈದ್ಯೆ ಅತ್ಯಾಚಾರ ಪ್ರಕರಣ: ಸಾಮಾಜಿಕ ಮಾಧ್ಯಮಗಳಿಂದ ಸಂತ್ರಸ್ತೆಯ ವಿವರ ತೆಗೆದುಹಾಕಲು ಸುಪ್ರೀಂ ಆದೇಶ

ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ಸಿಜೆಐ ರಾಜ್ಯ ಸರ್ಕಾರದ ನಡೆಯನ್ನು ಟೀಕಿಸಿದ್ದರು. ಜೊತೆಗೆ ವೈದ್ಯರು ಮತ್ತು ವೈದ್ಯಕೀಯ ವೃತ್ತಿಪರರ ಸುರಕ್ಷತೆ ಮತ್ತು ಘನತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು , ಲಿಂಗ ಆಧಾರಿತ ಹಿಂಸಾಚಾರ ತಡೆಗಟ್ಟಲು ಹಾಗೂ ಕೆಲಸದ ಸ್ಥಳದಲ್ಲಿ ವೈದ್ಯರು ಮತ್ತಿತರ ವೈದ್ಯಕೀಯ ವೃತ್ತಿಪರರು ಎದುರಿಸುತ್ತಿರುವ ಯೋಗಕ್ಷೇಮ ಮತ್ತು ಸುರಕ್ಷತೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ನಿವಾರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ರಾಷ್ಟ್ರೀಯ ಕಾರ್ಯಪಡೆಯೊಂದನ್ನು (ಎನ್‌ಟಿಎಫ್‌)  ಸ್ಥಾಪಿಸಿತ್ತು.

ಮತ್ತೊಂದೆಡೆ ಅತ್ಯಾಚಾರ ಮತ್ತು ಹತ್ಯೆಗೀಡಾದ ಸ್ಥಾನಿಕ ವೈದ್ಯೆಯ ಹೆಸರು, ಫೋಟೋ, ವಿಡಿಯೋ ಮತ್ತಿತರ ಮಾಹಿತಿಗಳನ್ನು ತೆಗೆದುಹಾಕುವಂತೆ ಎಲ್ಲಾ ಸುದ್ದಿ ಮತ್ತ ಸಾಮಾಜಿಕ ಮಾಧ್ಯಮ ಜಾಲತಾಣಗಳಿಗೆ ಸರ್ವೋಚ್ಚ ನ್ಯಾಯಾಲಯ ಆದೇಶಿಸಿತ್ತು.

Kannada Bar & Bench
kannada.barandbench.com