ಪರಿಸ್ಥಿತಿ ಕಠಿಣವಾದಾಗ ಕಠಿಣ ನ್ಯಾಯಾಧೀಶರಷ್ಟೇ ಮುಂದುವರಿಯುತ್ತಾರೆ: ಸಿಜೆಐ ಡಿ ವೈ ಚಂದ್ರಚೂಡ್

ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಜನರ ವಿಶ್ವಾಸ ಮತ್ತು ನಂಬಿಕೆ ಎಂಬುದು ನ್ಯಾಯಾಂಗ ಸ್ವಾತಂತ್ರ್ಯದ ತೀವ್ರ ಅರ್ಥದಲ್ಲಿದೆ ಎಂದು ಅವರು ಹೇಳಿದರು.
ಪರಿಸ್ಥಿತಿ ಕಠಿಣವಾದಾಗ ಕಠಿಣ ನ್ಯಾಯಾಧೀಶರಷ್ಟೇ ಮುಂದುವರಿಯುತ್ತಾರೆ: ಸಿಜೆಐ ಡಿ ವೈ ಚಂದ್ರಚೂಡ್
A1

ಆಡಳಿತಾತ್ಮಕ ಭಾಗದಲ್ಲಿ ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಂಬಂಧ ದೃಢವಾದ ಸಾಂವಿಧಾನಿಕ ರಾಜತಾಂತ್ರಿಕತೆ ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್ ಶುಕ್ರವಾರ ಹೇಳಿದರು.

ಗುವಾಹಟಿ ಹೈಕೋರ್ಟ್‌ನ ಎಪ್ಪತ್ತನೇ ವರ್ಷಾಚರಣೆ ಸಮಾರಂಭದಲ್ಲಿ ಸಿಜೆಐ ಮಾತನಾಡಿದರು. ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಜನರ ವಿಶ್ವಾಸ ಮತ್ತು ನಂಬಿಕೆ ಎಂಬುದು ನ್ಯಾಯಾಂಗ ಸ್ವಾತಂತ್ರ್ಯದ ತೀವ್ರ ಅರ್ಥದಲ್ಲಿದೆ ಎಂದು ಅವರು ತಿಳಿಸಿದರು.

ಸಿಜೆಐ ಭಾಷಣದ ಪ್ರಮುಖಾಂಶಗಳು

  • ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗದಂತಹ ಎಲ್ಲಾ ಮೂರು ಅಂಗಗಳು ರಾಷ್ಟ್ರ ನಿರ್ಮಾಣದ ಸಾಮಾನ್ಯ ಕಾರ್ಯದಲ್ಲಿ ತೊಡಗಿಕೊಂಡಿವೆ.

  • ನ್ಯಾಯಾಂಗದ ಮೇಲಿನ ನಾಗರಿಕರ ವಿಶ್ವಾಸವು ಅದರ ಭೀತರಹಿತ ಸ್ವಾತಂತ್ರ್ಯದ ಮೇಲೆ ಅವಲಂಬಿತವಾಗಿದೆ. ಅದೇ ರೀತಿ, ನ್ಯಾಯಾಂಗದ ನ್ಯಾಯಸಮ್ಮತತೆಯು ಜನತೆಯು ನ್ಯಾಯಾಂಗದ ಮೇಲೆ ಇರಿಸಿರುವ ವಿಶ್ವಾಸದ ಮೇಲೆ ನಿಂತಿದೆ. ಈ ವಿಶ್ವಾಸವು ಜನತೆಯು ತಮ್ಮ ಅಗತ್ಯದ ಹಾಗೂ ಸಂಕಷ್ಟದ ಸಮದಯದಲ್ಲಿ ಮೊದಲ ಹಾಗೂ ಅಂತಿಮ ಆಯ್ಕೆಯಾಗಿ ನ್ಯಾಯಾಂಗವನ್ನು ಅಯ್ಕೆ ಮಾಡಿಕೊಳ್ಳುತ್ತಾರೆಯೇ ಎನ್ನುವುದನ್ನು ಅವಲಂಬಿಸಿದೆ.

  • ಸಾಂವಿಧಾನಿಕ ರಾಜನೀತಿ ಎಂಬುದು ಆಡಳಿತಾತ್ಮಕವೇ ಇರಲಿ ಅಥವಾ ನ್ಯಾಯಿಕ ಭಾಗವೇ ಆಗಿರಲಿ ಅಲ್ಲಿ ಚರ್ಚೆ ಮತ್ತು ಸಂವಾದದ ಅಗತ್ಯತತೆ ಇದೆಯೇ ವಿನಾ ಸಾರ್ವಜನಿಕ ಶ್ರೇಷ್ಠತೆಯಲ್ಲ.

  • (ತುರ್ತು ಪರಿಸ್ಥಿತಿ ಸಂದರ್ಭವನ್ನು ಪ್ರಸ್ತಾಪಿಸುತ್ತಾ) ಪರಿಸ್ಥಿತಿ ಕಠಿಣವಾದಾಗ ಕಠಿಣ ನ್ಯಾಯಾಧೀಶರು ಮುಂದೆ ಸಾಗುತ್ತಾರೆ.

  • ಸಾಮಾಜಿಕ ವಾಸ್ತವತೆಯ ಬಗ್ಗೆ ಸಹಾನುಭೂತಿ ಹೊಂದಿರುವ ಮತ್ತು ಭಾವನಾತ್ಮಕವಾಗಿರುವ ನ್ಯಾಯಾಧೀಶರು ಕಾನೂನನ್ನು ಜಾಣ್ಮೆಯಿಂದ ಬಳಸಿ, ವ್ಯಾಖ್ಯಾನಿಸಿದಾಗ ಅದು ನ್ಯಾಯವನ್ನು ಅರಿಯುವ ಹೆಜ್ಜೆಯಾಗುತ್ತದೆ.

  • ಆದರೆ ಕಾನೂನನ್ನು ತಾತ್ವಿಕತೆ ಇಲ್ಲದೆ ಬಳಸಿದಾಗ ಅದು ಸ್ವೇಚ್ಛಾಚಾರದ ಹೊರೆ ಹೊರುತ್ತದೆ.

  • ತಂತ್ರಜ್ಞಾನ ವಿಚಾರದಲ್ಲಿ ಭಾರತೀಯ ನ್ಯಾಯಾಂಗ ಮಹತ್ತರ ಹೆಜ್ಜೆ ಇರಿಸಿದೆ. ಭಾರತೀಯ ಸಾಮಾಜಿಕ ಸಂದರ್ಭಕ್ಕೆ ತಕ್ಕಂತೆ ತಂತ್ರಜ್ಞಾನವನ್ನು ರೂಪಿಸಬೇಕಾಗಿದೆ.

  • ನ್ಯಾಯಾಂಗ ವ್ಯವಸ್ಥೆಯ ಪ್ರಕ್ರಿಯೆ ಮತ್ತು ರಚನಾತ್ಮಕ ವಿನ್ಯಾಸ ಎಲ್ಲರನ್ನೂ ಒಳಗೊಂಡಿದ್ದಾಗ ಮಾತ್ರ ಫಲಿತಾಂಶ ನೀಡುತ್ತದೆ.

ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕೂಡ ಭಾಗವಹಿಸಿದ್ದರು.

Kannada Bar & Bench
kannada.barandbench.com