ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಬಾಲಿವುಡ್‌ ಗಾಯಕ ಲಕ್ಕಿ ಅಲಿ ಲೋಕಾಯುಕ್ತಕ್ಕೆ ದೂರು

ರಾಜ್ಯ ಸರ್ಕಾರದ ಆಡಳಿತ ಯಂತ್ರದ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಹಾಗೂ ಹಣಬಲದಿಂದ ಸಿಂಧೂರಿ, ಆಕೆಯ ಪತಿ ಮತ್ತು ಆಕೆಯ ರಾಜಕೀಯ ಸಂಬಂಧಿಯೊಬ್ಬರು ಅಕ್ರಮವಾಗಿ ತಮಗೆ ಸೇರಿದ ಭೂಮಿ ಒತ್ತುವಾರಿ ಮಾಡಿಕೊಂಡಿದ್ದಾರೆ ಎಂದು ಲಕ್ಕಿ ಅಲಿ ಆರೋಪಿಸಿದ್ದಾರೆ.
Lucky Ali, IAS officer Rohini Sindhuri
Lucky Ali, IAS officer Rohini SindhuriLucky Ali (IG) IAS officer Rohini Sindhuri (FB)
Published on

ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ಆಕೆಯ ಪತಿ ಮತ್ತು ಅವರ ಮೈದುನ ವಿರುದ್ಧ ಅಕ್ರಮ ಭೂಮಿ ಒತ್ತುವರಿ ಆರೋಪ ಮಾಡಿರುವ ಬಾಲಿವುಡ್‌ ಗಾಯಕ ಲಕ್ಕಿ ಅಲಿ ಎಂದೇ ಪ್ರಸಿದ್ಧಿಯಾಗಿರುವ ಮಕ್ಸೂದ್‌ ಎಂ ಅಲಿ ಅವರು ಕರ್ನಾಟಕ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.

ಈ ವಿಚಾರವನ್ನು ಲಕ್ಕಿ ಅಲಿ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಲಕ್ಕಿ ಅಲಿ ಅವರು ಸಿಂಧೂರಿ, ಆಕೆಯ ಪತಿ, ಮೈದುನ ಸರ್ಕಾರದ ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಹಾಗೂ ಹಣಬಲದಿಂದ ತಮಗೆ ಸೇರಿದ ಭೂಮಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅಲಿ ಅವರು ಇದೇ ಮೊದಲ ಬಾರಿಗೆ ಭೂಮಿ ಒತ್ತುವರಿ ವಿಚಾರವನ್ನು ಪ್ರಸ್ತಾಪಿಸುತ್ತಿಲ್ಲ. ಈ ವಿಚಾರದ ಕುರಿತು 2022ರ ಡಿಸೆಂಬರ್‌ನಲ್ಲಿ ಪೊಲೀಸ್‌ ಮಹಾನಿರ್ದೇಶಕರಿಗೆ ಹಲವು ಟ್ವೀಟ್‌ಗಳ ಮೂಲಕ ಗಮನಸೆಳೆದಿದ್ದರು. ತಮ್ಮ ಟ್ರಸ್ಟ್‌ ಆಸ್ತಿಯನ್ನು ಬೆಂಗಳೂರಿನ ಭೂ ಮಾಫಿಯಾ ಜೊತೆಗೂಡಿ ಸಿಂಧೂರಿ ನೆರವಿನಿಂದ ಸುಧೀರ್‌ ರೆಡ್ಡಿ ಮತ್ತು ಮಧು ರೆಡ್ಡಿ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಈ ಮಧ್ಯೆ, ಸಿಂಧೂರಿ ಮತ್ತು ಐಪಿಎಸ್‌ ಅಧಿಕಾರಿ ಡಿ ರೂಪಾ ನಡುವಿನ ಕಾನೂನು ಹೋರಾಟವೂ ಗಮನಸೆಳೆದಿದತ್ತು.

Also Read
ನ್ಯಾಯಾಂಗ ನಿಂದನೆ: ಬಾಲಿವುಡ್‌ ಗಾಯಕ ಲಕ್ಕಿ ಅಲಿ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ ರೋಹಿಣಿ ಸಿಂಧೂರಿ ಪತಿ ಸುಧೀರ್

ಆಸ್ತಿ ವಿವಾದ ಪ್ರಕರಣದಲ್ಲಿ ನ್ಯಾಯಾಲಯದ ಮಧ್ಯಂತರ ಆದೇಶ ಉಲ್ಲಂಘಿಸುವ ಮೂಲಕ ಬಾಲಿವುಡ್‌ ಹಾಡುಗಾರ ಮಕ್ಸೂದ್‌ ಮಹಮ್ಮದ್‌ ಅಲಿ ಅಲಿಯಾಸ್‌ ಲಕ್ಕಿ ಅಲಿ ಸೇರಿದಂತೆ ಇತರೆ ಪ್ರತಿವಾದಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಸುಧೀರ್‌ ರೆಡ್ಡಿ ಅವರು ಬೆಂಗಳೂರಿನ ನ್ಯಾಯಾಲಯದಲ್ಲಿ ದಾಖಲಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

Kannada Bar & Bench
kannada.barandbench.com