ಬೀಳ್ಕೊಡುಗೆ ಭಾಷಣದಲ್ಲಿ ಹಲವು ವಿಚಾರಗಳನ್ನು ಪ್ರಸ್ತಾಪಿಸುವೆ: ಸಿಜೆಐ ಎನ್ ವಿ ರಮಣ

ಸಿಜೆಐ ರಮಣ ಅವರು ಆಗಸ್ಟ್ 26ರಂದು ನಿವೃತ್ತರಾಗಲಿದ್ದು, ನಂತರ ನ್ಯಾಯಮೂರ್ತಿ ಯು ಯು ಲಲಿತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
CJI NV Ramana
CJI NV Ramana
Published on

ಹಲವು ಸಮಸ್ಯೆಗಳನ್ನು ತಾವು ಪ್ರಸ್ತಾಪಿಸಲು ಬಯಸುವುದಾಗಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ತಿಳಿಸಿದ್ದು ಆದರೆ ಅಧಿಕಾರದಿಂದ ನಿರ್ಗಮಿಸಿದ ಬಳಿಕ ವಿದಾಯ ಭಾಷಣದಲ್ಲಿ ಮಾತ್ರ ಅವುಗಳನ್ನು ಹೇಳುವೆ ಎಂದು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್‌ ರಿಜಿಸ್ಟ್ರಿಯಲ್ಲಿನ ಕುಂದು ಕೊರತೆಗಳ ಬಗ್ಗೆ ಹಿರಿಯ ವಕೀಲ ದುಷ್ಯಂತ್ ದವೆ ಅವರು ಪ್ರಸ್ತಾಪಿಸಿದಾಗ ಸಿಜೆಐ ಈ ವಿಚಾರ ತಿಳಿಸಿದರು.

Also Read
ನ್ಯಾಯಾಂಗ ತನ್ನ ಸಮಸ್ಯೆ ಮುಚ್ಚಿಡದೆ ಚರ್ಚಿಸಿದರೆ ಜನರಿಗೆ ಉತ್ತಮ ಸೇವೆ ಸಲ್ಲಿಸಲು ಸಾಧ್ಯ: ಸಿಜೆಐ ರಮಣ

"ನಿನ್ನೆ ರಾತ್ರಿ 8 ಗಂಟೆಯವರೆಗೆ ಪ್ರಕರಣದ ಸಾರಾಂಶ ಓದಿದೆವು. ಅನೇಕ ಚರ್ಚೆಗಳನ್ನು ಕೂಡ ಮಾಡಿದ್ದೇವೆ. ನಂತರ ಈ ಪ್ರಕರಣ ತೆಗೆದು ಬೇರೊಂದು ಪ್ರಕರಣ ಸೇರಿಸಲಾಗಿದೆ. ಇದು ತಪ್ಪು. ರಿಜಿಸ್ಟ್ರಿಯ ಈ ಕ್ರಮಕ್ಕೆ ಅಸಮ್ಮತಿ ಇದೆ" ಎಂದು ದವೆ ಅವರು ಸಿಜೆಐ ಮುಂದೆ ಆಕ್ಷೇಪಿಸಿದರು.

ಇದಕ್ಕೆ ಸಿಜೆಐ ರಮಣ, “ಪ್ರಸ್ತಾಪಿಸಲು ಬಯಸುವ ಅನೇಕ ವಿಚಾರಗಳಿವೆ. ಆದರೆ ಕಚೇರಿಯಿಂದ ಹೊರಬರುವ ಮೊದಲು ನಾನು ಏನನ್ನೂ ಹೇಳಲು ಇಚ್ಛಿಸುವುದಿಲ್ಲ. ಆದರೆ ನನ್ನ ವಿದಾಯ ಭಾಷಣದಲ್ಲಿ ಈ ಎಲ್ಲದರ ಬಗ್ಗೆ ಮಾತನಾಡುತ್ತೇನೆ. ದಯವಿಟ್ಟು ಕಾಯಿರಿ” ಎಂದರು.

ಸಿಜೆಐ ರಮಣ ಅವರು ಆಗಸ್ಟ್ 26ರಂದು ನಿವೃತ್ತರಾಗಲಿದ್ದು, ನಂತರ ನ್ಯಾಯಮೂರ್ತಿ ಯು ಯು ಲಲಿತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

Kannada Bar & Bench
kannada.barandbench.com