ವಿನ್ಜೊ ಸಹ ಸಂಸ್ಥಾಪಕ ಪವನ್‌ ನಂದಾ 14 ದಿನ ನ್ಯಾಯಾಂಗ ಬಂಧನಕ್ಕೆ

ಪವನ್‌ ನಂದಾ ಅವರ ನಾಲ್ಕು ದಿನಗಳ ಇ ಡಿ ಕಸ್ಟಡಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ನ್ಯಾಯಾಧೀಶರಾದ ಎಂ ಚಂದ್ರಶೇಖರ್‌ ರೆಡ್ಡಿ ಅವರ ಮುಂದೆ ಹಾಜರುಪಡಿಸಿದ್ದರು.
Paavan Nanda & Saumya Singh Rathore, ED
Paavan Nanda & Saumya Singh Rathore, ED
Published on

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (ಪಿಎಂಎಲ್‌ಎ) ಬಂಧಿತರಾಗಿದ್ದ ಗೇಮಿಂಗ್‌ ಕಂಪನಿ ವಿನ್ಜೊ ಪ್ರೈವೇಟ್‌ ಲಿಮಿಟೆಡ್‌ನ ಸಹ ಸಂಸ್ಥಾಪಕ ಪವನ್‌ ನಂದಾರನ್ನು ಬೆಂಗಳೂರಿನ ಜಾರಿ ನಿರ್ದೇಶನಾಲಯದ (ಇ ಡಿ) ವಿಶೇಷ ನ್ಯಾಯಾಲಯವು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದೆ.

ಪವನ್‌ ನಂದಾ ಅವರ ನಾಲ್ಕು ದಿನಗಳ ಇ ಡಿ ಕಸ್ಟಡಿ ಇಂದು ಮುಕ್ತಾಯವಾದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವರನ್ನು ನ್ಯಾಯಾಧೀಶರಾದ ಎಂ ಚಂದ್ರಶೇಖರ್‌ ರೆಡ್ಡಿ ಅವರ ಮುಂದೆ ಹಾಜರುಪಡಿಸಿದ್ದರು. ಈ ವೇಳೆ ಮಾಹಿತಿ ಪಡೆದ ನ್ಯಾಯಾಲಯವು ಪವನ್‌ ನಂದಾ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತು.

Also Read
ಅಕ್ರಮ ಹಣ ವರ್ಗಾವಣೆ ಪ್ರಕರಣ: ವಿನ್ಜೋನ ಸೌಮ್ಯಾ ಸಿಂಗ್‌ ರಾಥೋಡ್‌ಗೆ ಜಾಮೀನು, ಪವನ್‌ ನಂದಾ ಇ ಡಿ ಕಸ್ಟಡಿಗೆ

ಈ ನಡುವೆ ಪವನ್‌ ಪರ ವಕೀಲೆ ಪಿ ಎಲ್‌ ವಂದನಾ ಅವರು ಹೊಸದಾಗಿ ಅವರ ಪರವಾಗಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದರು. ಈ ಹಿಂದೆ ನ್ಯಾಯಾಲಯವು ಪವನ್‌ ನಂದಾ ಅವರನ್ನು 11 ದಿನ ಇ ಡಿ ಕಸ್ಟಡಿಗೆ ನೀಡಿತ್ತು.

ಕೋಟ್ಯಂತರ ಮಂದಿಗೆ ಆಲ್ಗಾರಿದಮ್‌ ತಿರುಚಿ, ಬೋಟ್ಸ್‌ ಬಳಕೆ ಮಾಡಿ ವಂಚಿಸಲಾಗಿದೆ. ಇಲ್ಲಿ ಗಳಿಸಿದ ಹಣವನ್ನು ವಿದೇಶದಲ್ಲಿರುವ ನಕಲಿ ಕಂಪನಿಗಳಲ್ಲಿ ಹೂಡಿಕೆ ಮಾಡಲಾಗಿದೆ. ತಟಸ್ಥ ಖಾತೆಯಲ್ಲಿರುವ 43 ಕೋಟಿ ರೂಪಾಯಿ ಹಣವು ಅಕ್ರಮ ಹಣವಾಗಿದ್ದು,ಕಂಪನಿಗೆ ಸೇರಿದ 177 ಕೋಟಿ ರೂಪಾಯಿಯು ಅಪರಾಧದ ಪ್ರಕ್ರಿಯೆ ಭಾಗ ಎಂದು ತನಿಖೆ ಬಹಿರಂಗಗೊಳಿಸಿದೆ ಎಂಬುದು ಇ ಡಿ ವಾದವಾಗಿದೆ.

ಡಿಸೆಂಬರ್‌ 26ರಂದು ವಿನ್ಜೊದ ಮತ್ತೊಬ್ಬ ಸಹ ಸಂಸ್ಥಾಪಕಿ ಸೌಮ್ಯಾ ಸಿಂಗ್‌ ರಾಥೋಡ್‌ ಅವರಿಗೆ ಜಾಮೀನು ಮಂಜೂರು ಮಾಡಿದ್ದ ನ್ಯಾಯಾಲಯವು ನಾಲ್ಕು ದಿನ ಪವನ್‌ ನಂದಾ ಅವರನ್ನು ಇ ಡಿ ಕಸ್ಟಡಿಗೆ ನೀಡಿತ್ತು.

Kannada Bar & Bench
kannada.barandbench.com