ಸುದ್ದಿಗಳು

ಆರೋಗ್ಯ ಕುರಿತ ಹೊಸ ವರದಿ ದೊರೆಯದೆ ಆಸ್ಪತ್ರೆಯಿಂದ ವರವರರಾವ್ ಸ್ಥಳಾಂತರ ಇಲ್ಲ ಎಂದ ಬಾಂಬೆ ಹೈಕೋರ್ಟ್

Bar & Bench

ಭೀಮ ಕೋರೆಗಾಂವ್‌ ಪ್ರಕರಣದ ಆರೋಪಿ, ಹೋರಾಟಗಾರ ವರವರರಾವ್‌ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರಿಂದ ಹೊಸ ವರದಿ ದೊರೆಯದ ಹಿನ್ನೆಲೆಯಲ್ಲಿ ಅವರನ್ನು ಮುಂದಿನ ವಿಚಾರಣೆಯವರೆಗೆ ಆಸ್ಪತ್ರೆಯಿಂದ ಸ್ಥಳಾಂತರಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್‌ ಸೋಮವಾರ ತಿಳಿಸಿತು. ಇದೇ ವೇಳೆ, ನ್ಯಾಯಮೂರ್ತಿಗಳಾದ ಎಸ್‌ ಎಸ್‌ ಶಿಂಧೆ ಮತ್ತು ಎಂ ಎಸ್‌ ಕಾರ್ಣಿಕ್‌ ಅವರಿದ್ದ ಪೀಠ ಪ್ರಕರಣವನ್ನು ಡಿ 7ಕ್ಕೆ ಮುಂದೂಡಿದೆ.

“ನಾವು ಇಂದೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಬಹುಶಃ ಮುಂದಿನ ವಿಚಾರಣೆ ವೇಳೆಗೆ ಆಗಬಹುದು. ಅವರ (ಆರೋಗ್ಯ ಕುರಿತ) ಇತ್ತೀಚಿನ ವರದಿ ಲಭ್ಯವಾಗಿಲ್ಲ. ಹಿಂದಿನ ವರದಿಯನ್ನೇ ಅವಲಂಬಿಸಿ ಇರಲು ಸಾಧ್ಯವಿಲ್ಲ” ಎಂದ ನ್ಯಾಯಾಲಯ, ರಾವ್‌ ಅವರ ಆರೋಗ್ಯ ಗಮನಿಸಿ ಆದ್ಯತೆಯ ಮೇರೆಗೆ ವಿಚಾರಣೆ ನಡೆಸಲು ನಿರ್ಧರಿಸಿದೆ.

ವಿಚಾರಣೆಯ ಒಂದು ಹಂತದಲ್ಲಿ ʼಇಂತಹ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳಲಾಗದು. ಇಂತಹವನ್ನು ಆಲಿಸಿ ತೀರ್ಮಾನಕ್ಕೆ ಬರಬೇಕು. ಇಂದು ನಾವು ವಿಚಾರಣೆ ನಡೆಸದೇ ಹೋದರೆ ನಾನಾವತಿ ಆಸ್ಪತ್ರೆಯಿಂದ ತಳೋಜಾ ಜೈಲಿಗೆ ಅವರನ್ನು ಸ್ಥಳಾಂತರಿಸುವುದು ಕಷ್ಟವಾಗುತ್ತದೆ ಎಂದು ಹೇಳಿತು.

ವಿಚಾರಣೆಯ ಒಂದು ಹಂತದಲ್ಲಿ ʼಇಂತಹ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳಲಾಗದು. ಈ ಬಗೆಯ ಪ್ರಕರಣಗಳನ್ನು ಆಲಿಸಿ ತೀರ್ಮಾನಕ್ಕೆ ಬರಬೇಕು. ಇಂದು ನಾವು ವಿಚಾರಣೆ ನಡೆಸದೇ ಹೋದರೆ ನಾನಾವತಿ ಆಸ್ಪತ್ರೆಯಿಂದ ತಳೋಜಾ ಜೈಲಿಗೆ ಅವರನ್ನು ಸ್ಥಳಾಂತರಿಸುವುದು ಕಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಮುಖ್ಯ ಪಬ್ಲಿಕ್‌ ಪ್ರಾಸಿಕ್ಯೂಟರ್‌ ದೀಪಕ್‌ ಠಾಕ್ರೆ ಅವರು ವರವರರಾವ್‌ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ವಾದಿಸಿದರು. ಆದರೆ ವರವರರಾವ್‌ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಆನಂದ್‌ ಗ್ರೋವರ್‌ ”ರಾವ್‌ ಅವರ ಆರೋಗ್ಯ ಕುರಿತು ನಿಗಾ ಇರಿಸಲಾಗಿದೆ. ರಕ್ತದೊತ್ತಡದಲ್ಲಿ ತೀವ್ರ ಏರಿಳಿತ ಕಂಡುಬರುತ್ತಿದೆ. ಬಹಳ ಸಲ ತಲೆಸುತ್ತು ಬರುತ್ತಿದೆ” ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟರು.

ಮತ್ತೊಂದೆಡೆ ನ್ಯಾಯಾಲಯ, ʼರಾವ್‌ ಅವರಿಗೆ ಪ್ರತಿಕ್ರಿಯೆ ನೀಡಲು ಸಾಧ್ಯ ಇಲ್ಲದೇ ಇರುವುದರಿಂದ, ವಕೀಲರು ತಮ್ಮ ವಿಚಾರಗಳನ್ನು ಲಿಖಿತ ರೂಪದಲ್ಲಿ ಅವರ ಮಗಳಿಗೆ ನೀಡಿ ಆಕೆ ಅವರಿಂದ ಪ್ರತಿಕ್ರಿಯೆ ಪಡೆಯಬಹುದುʼ ಎಂದು ಸೂಚಿಸಿತು. ನಾನಾವತಿ ಆಸ್ಪತ್ರೆಯ ಜನದಟ್ಟಣೆ, ಸಿಬ್ಬಂದಿ ಕೊರತೆ ಕುರಿತಂತೆಯೂ ಗ್ರೋವರ್‌ ನ್ಯಾಯಾಲಯದ ಗಮನ ಸೆಳೆದರು. ತಳೋಜಾ ಜೈಲಿನಲ್ಲಿಯೂ ಇದೇ ಸಮಸ್ಯೆ ಇರುವುದನ್ನು ಪ್ರಸ್ತಾಪಿಸಿದರು. ಆದರೆ ಆಸ್ಪತ್ರೆಯಲ್ಲಿ ನೀಡಲಾದ ಚಿಕಿತ್ಸೆ ಬಗ್ಗೆ ರಾವ್‌ ಕುಟುಂಬಕ್ಕೆ ತೃಪ್ತಿ ಇದೆ ಎಂದರು.

ಎರಡೂ ಕಡೆಯವರ ಒಮ್ಮತದೊಂದಿಗೆ ಜನವರಿ 7ಕ್ಕೆ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ತಿಳಿಸಿತು. ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್‌ ಎನ್‌ಐಎ ಪರ ವಕೀಲ ಸಂದೇಶ್‌ ಪಾಟೀಲ್‌, ಎಎಸ್‌ಜಿ ಅನಿಲ್‌ ಸಿಂಗ್‌ ವಿಚಾರಣೆ ವೇಳೆ ವಾದ ಮಂಡಿಸಿದರು.