ಸುದ್ದಿಗಳು

ಯೂಟ್ಯೂಬ್‌ನಲ್ಲಿ ಕಲಾಪಗಳ ನೇರ ಪ್ರಸಾರ ಆರಂಭಿಸಿದ ಬಾಂಬೆ ಹೈಕೋರ್ಟ್

ಹೈಕೋರ್ಟ್ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸಿಜೆಐ ಬಿ ಆರ್ ಗವಾಯಿ ಅವರು ಯೂಟ್ಯೂಬ್ ಸೇವೆ ಉದ್ಘಾಟಿಸಿದರು.

Bar & Bench

ಆನ್‌ಲೈನ್‌ ವಿಡಿಯೋ ವೇದಿಕೆ ಯೂಟ್ಯೂಬ್‌ನಲ್ಲಿ ಬಾಂಬೆ ಹೈಕೋರ್ಟ್‌  ಕಲಾಪಗಳ ನೇರ ಪ್ರಸಾರಕ್ಕೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಅರ್‌ ಗವಾಯಿ ಶನಿವಾರ ಚಾಲನೆ ನೀಡಿದರು.

 ಬಾಂಬೆ ಹೈಕೋರ್ಟ್‌ನ ಐದು ಪೀಠಗಳ ಕಲಾಪಗಳನ್ನು ಯೂಟ್ಯೂಬ್‌ ಮೂಲಕ ಇನ್ನು ಮುಂದೆ ನೇರ ಪ್ರಸಾರದಲ್ಲಿ ವೀಕ್ಷಿಸಬಹುದು.

ನ್ಯಾಯಾಲಯದ ಕಲಾಪಗಳ ನೇರ ಪ್ರಸಾರವನ್ನು ಶೀಘ್ರದಲ್ಲೇ ಪ್ರಾರಂಭಿಸಲು ತಾಂತ್ರಿಕ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಬಾಂಬೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಈ ಹಿಂದೆ ತಿಳಿಸಿದ್ದರು.

ಇಂದು, ಸಿಜೆಐ ಗವಾಯಿ ಅವರು ಹೈಕೋರ್ಟ್‌ನಲ್ಲಿ ಉಚಿತ ವೈಫೈ ಮತ್ತು ಅಂತರ್ಜಾಲ ಸೌಲಭ್ಯದೊಂದಿಗೆ ನೇರ ಪ್ರಸಾರ ಸೇವೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದರು.

ಕರ್ನಾಟಕ, ಗುಜರಾತ್‌, ಗುವಾಹಟಿ, ಕಲ್ಕತ್ತಾ, ತೆಲಂಗಾಣ, ಒರಿಸ್ಸಾ ಹೈಕೋರ್ಟ್‌ಗಳು ಮತ್ತಿತರ ಕೆಲ ನ್ಯಾಯಾಲಯಗಳು ಯೂಟ್ಯೂಬ್‌ನಲ್ಲಿ ಪೀಠದ ಕಲಾಪಗಳನ್ನು ನೇರ ಪ್ರಸಾರ ಮಾಡುತ್ತಿವೆ.

ಕೆಲವು ಹೈಕೋರ್ಟ್‌ಗಳು ತಮ್ಮ ಹೈಬ್ರಿಡ್ ಕೋರ್ಟ್ ಲಿಂಕ್‌ಗಳಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸುವುದಿಲ್ಲ. ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ವಿಚಾರಣೆಗಳು ಕೂಡ ನೇರ ಪ್ರಸಾರವಾಗುತ್ತಿವೆ.