ತಿರುವನಂತಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಲೋಕಸಭಾ ಚುನಾವಣೆಯ ವೇಳೆ ತಮ್ಮ ವಿರುದ್ಙ ಸುಳ್ಳು ಆರೋಪ ಮಾಡಿದ್ದಾರೆ ಎಂದು ದೂರಿ ಬಿಜೆಪಿಯ ಪರಾಜಿತ ಪ್ರತಿಸ್ಪರ್ಧಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಸಲ್ಲಿಸಿದ್ದ ಸಿವಿಲ್ ಮಾನನಷ್ಟ ಮೊಕದ್ದಮೆಯನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ [ರಾಜೀವ್ ಚಂದ್ರಶೇಖರ್ ಮತ್ತು ಶಶಿ ತರೂರ್ ನಡುವಣ ಪ್ರಕರಣ].
ಕಳೆದ ಲೋಕಸಭಾ ಚುನಾವಣೆ ವೇಳೆ ತಿರುವನಂತಪುರಂ ಕ್ಷೇತ್ರದ ಮತದಾರರಿಗೆ ತಾನು ಲಂಚ ನೀಡಿದ್ದಾಗಿ ತರೂರ್ ಟಿವಿ ಸಂದರ್ಶನವೊಂದರಲ್ಲಿ ನೀಡಿದ್ದ ಹೇಳಿಕೆ ಪ್ರಶ್ನಿಸಿ ರಾಜೀವ್ ಚಂದ್ರಶೇಖರ್ ದೂರು ದಾಖಲಿಸಿದ್ದರು.
ತರೂರ್ ನೀಡಿದ ಮಾಧ್ಯಮ ಸಂದರ್ಶನದಲ್ಲಿ ಅಂತಹ ಯಾವುದೇ ಆರೋಪವಿಲ್ಲ ಎಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪರಾಸ್ ದಲಾಲ್ ಅಭಿಪ್ರಾಯಪಟ್ಟಿದ್ದಾರೆ.
ರಾಜೀವ್ ಚಂದ್ರಶೇಖರ್ ಮತದಾರರಿಗೆ ಲಂಚ ನೀಡಿದ್ದಾರೆ ಎಂದು ಪ್ರಸ್ತಾಪಿತ ಆರೋಪಿ ದೂರಿಲ್ಲ. ತನ್ನ ವಿರೋಧ ಪಕ್ಷದ ಅಭ್ಯರ್ಥಿ ಮತದಾರರಿಗೆ ಲಂಚ ನೀಡಿದ್ದಾರೆ ಎಂದು ಕೂಡ ಆರೋಪಿ ಹೇಳಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
ಸಂದರ್ಭವನ್ನು ಮೀರಿ ತರೂರ್ ಅವರ ಸಂದರ್ಶದ ತುಣುಕೊಂದನ್ನು ಬೆಳಗಿನ ಸುದ್ದಿ ಕಾರ್ಯಕ್ರಮದಲ್ಲಿ ವಾರ್ತಾವಾಹಿನಿ ಪ್ರಸಾರ ಮಾಡಿತು. ಸಂದರ್ಶನವನ್ನು ಇಡಿಯಾಗಿ ವೀಕ್ಷಿಸಿದಾಗ ಸಂದರ್ಶನದ ವೇಳೆ ಆರೋಪಿ ಸ್ಥಾನದಲ್ಲಿರುವವರು ಯಾವುದೇ ಆರೋಪ ಮಾಡಿಲ್ಲ ಎಂದು ತಿಳಿದಬರುತ್ತದೆ ಎಂಬುದಾಗಿ ಅದು ಹೇಳಿದೆ.
ವಿಚಾರಣಾ ನ್ಯಾಯಾಲಯ ಕಳೆದ ವರ್ಷ ತರೂರ್ ವಿರುದ್ಧ ಐಪಿಸಿ ಸೆಕ್ಷನ್ 500 (ಮಾನನಷ್ಟ) ಮತ್ತು 171 ಜಿ (ಚುನಾವಣೆಯ ಮೇಲೆ ಪ್ರಭಾವ ಬೀರಲು ಸುಳ್ಳು ಹೇಳಿಕೆ) ಅಡಿಯಲ್ಲಿ ಆರೋಪಗಳನ್ನು ಪರಿಗಣಿಸಿತ್ತು.
ಸಾಮಾಜಿಕ ಜಾಲತಾಣಗಳು ಮತ್ತು ವಿವಿಧ ಸುದ್ದಿ ವಾಹಿನಿಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ತರೂರ್ ಅವರ ಹೇಳಿಕೆ ತಮ್ಮ ಪ್ರತಿಷ್ಠೆಗೆ ಮಸಿ ಬಳಿದಿದ್ದಲ್ಲದೆ ಚುನಾವಣೆಯಲ್ಲಿ ತನ್ನ ಸೋಲಿಗೆ ಕಾರಣವಾಯಿತು ಎಂದು ಚಂದ್ರಶೇಖರ್ ಹೇಳಿಕೊಂಡಿದ್ದರು.