Delhi High Court  
ಸುದ್ದಿಗಳು

ಸಂದರ್ಶನವನ್ನಷ್ಟೇ ಆಧರಿಸಿ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಅವಕಾಶ: ಯುಜಿಸಿ ನಿಯಮ ರದ್ದುಗೊಳಿಸಿದ ದೆಹಲಿ ಹೈಕೋರ್ಟ್

ಗುರುತರ ಅಂಗವೈಕಲ್ಯಕ್ಕೆ ತುತ್ತಾದವರಿಗೆ ಮೀಸಲಾದ ಸ್ಥಾನವನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ವಿಕಲಚೇತನ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಅದು ತೀರ್ಪು ನೀಡಿದೆ.

Bar & Bench

ಸಹಾಯಕ ಪ್ರಾಧ್ಯಾಪಕರನ್ನು ಸಂದರ್ಶನ ಆಧರಿಸಿಯಷ್ಟೇ ಆಯ್ಕೆ ಮಾಡಲು ಅವಕಾಶವಿತ್ತಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ನಿಯಮವನ್ನು ದೆಹಲಿ ಹೈಕೋರ್ಟ್‌ ಈಚೆಗೆ ರದ್ದುಗೊಳಿಸಿದೆ.

ಯುಜಿಸಿ ಮಾರ್ಗಸೂಚಿಗಳ ಷರತ್ತು 4.1. IBಯನ್ನು ನ್ಯಾಯಮೂರ್ತಿಗಳಾದ ಸಿ ಹರಿಶಂಕರ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ವಿಭಾಗೀಯ ಪೀಠ ಸಂಪೂರ್ಣ ರದ್ದುಗೊಳಿಸಲಿಲ್ಲವಾದರೂ ಸೆಕ್ಷನ್‌ ಈ ವಿಧಿ ಹಾಗೆಯೇ ಮುಂದುವರಿಯಲು ಅವಕಾಶ ನೀಡಿದರೆ ಅದು ಅನಿಯಂತ್ರತೆಗೆ ಅನುವು ಮಾಡಿಕೊಡುತ್ತದೆ ಹಾಗೂ ಸಂವಿಧಾನದ 14 ಮತ್ತು 16ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದಿತು.

ಹೀಗಾಗಿ ಕವೇಲ ಸಂದರ್ಶನ ಆಧಾರದ ಮೇಲಷ್ಟೇ ಆಯ್ಕೆ ಮಾಡುವುದನ್ನು ನಿರಾಕರಿಸುವ ರೀತಿಯಲ್ಲಿ ಈ ವಿಧಿಯನ್ನು ಮರುವ್ಯಾಖ್ಯಾನಿಸಬೇಕಿದೆ ಎಂದು ಅದು ತಿಳಿಸಿತು.

“ವರ್ಗ 4.1.I.Bಯನ್ನು ಸ್ವತಃ ಸಂವಿಧಾನಬಾಹಿರವೆಂದು ಸಂಪೂರ್ಣವಾಗಿ ರದ್ದುಗೊಳಿಸುವ ಅಗತ್ಯವಿಲ್ಲ. ಆದರೆ, ಈ ವಿಧಿಯನ್ನು ಸಂಪೂರ್ಣವಾಗಿ ಅಸಂರಚಿತ, ಮಾರ್ಗದರ್ಶನವಿಲ್ಲದ ಹಾಗೂ ಕೇವಲ ಸಂದರ್ಶನ ಆಧಾರಿತ ಆಯ್ಕೆ ಪ್ರಕ್ರಿಯೆಗೆ ಅನುಮತಿ ನೀಡುತ್ತದೆ ಅಥವಾ ಅದನ್ನು ಮಾನ್ಯಗೊಳಿಸುತ್ತದೆ ಎಂದು ಅರ್ಥೈಸಲಾಗುವುದಿಲ್ಲ ಎಂಬ ಅರ್ಥದಲ್ಲಿ ಮರುವ್ಯಾಖ್ಯಾನಿಸಬೇಕು. ಇದಕ್ಕೆ ವಿರುದ್ಧವಾದ ಯಾವುದೇ ವ್ಯಾಖ್ಯಾನವು ಆಯ್ಕೆ ಪ್ರಕ್ರಿಯೆಯನ್ನು ಅನಿನಿಯಂತ್ರತೆಗೆ ಈಡುಮಾಡಿ ಸಂವಿಧಾನದ 14 ಮತ್ತು 16ನೇ ವಿಧಿಗಳನ್ನು ಉಲ್ಲಂಘಿಸುತ್ತದೆ” ಎಂದು ಪೀಠ ವಿವರಿಸಿದೆ.

ಗುರುತರ ಅಂಗವೈಕಲ್ಯ (ಪಿಡಬ್ಲ್ಯೂಬಿಡಿ) ಹೊಂದಿರುವ ವ್ಯಕ್ತಿಗಳಿಗೆ ಮೀಸಲಾದ ಸ್ಥಾನವನ್ನು ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲ್ಯೂಎಸ್) ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಮೀಸಲಾದ ಹುದ್ದೆಯಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಅದು ಇದೇ ವೇಳೆ ತೀರ್ಪು ನೀಡಿದೆ.

ವಿಕಲಚೇತನ  ಅಭ್ಯರ್ಥಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ಯೋಜನೆ ಮತ್ತು ಆಡಳಿತ ಸಂಸ್ಥೆ (ಎನ್‌ಐಇಪಿಎ) ಅನುಸರಿಸಿದ್ದ ನೇಮಕಾತಿ ಪ್ರಕ್ರಿಯೆಯನ್ನು ರದ್ದುಪಡಿಸುವ ವೇಳೆ ನ್ಯಾಯಾಲಯ ಈ ತೀರ್ಮಾನಕ್ಕೆ ಬಂದಿತು.

ವಿಕಲಚೇತನರಿಗೆ ಮೀಸಲಾದ ಸಹಾಯಕ ಪ್ರಾಧ್ಯಾಪಕ ಹುದ್ದೆಯನ್ನು ಅದರ ಮೂಲ ಮೀಸಲಾತಿ ಸ್ಥಾನಮಾನ ಉಳಸಿಕೊಂಡು ಕಾನೂನುಬದ್ಧ ಆಯ್ಕೆ ಪ್ರಕ್ರಿಯೆ ಮೂಲಕ ಎಂಟು ವಾರದೊಳಗೆ ಮರು ಜಾಹೀರಾತು ನೀಡಬೇಕು ಎಂದು ನ್ಯಾಯಾಲಯ ಎನ್‌ಐಇಪಿಎಗೆ ನಿರ್ದೇಶಿಸಿದೆ.

ಆ ಮೂಲಕ ಶೇ ಮೀಸಲಾತಿ ಸೌಲಭ್ಯಕ್ಕೆ ಅರ್ಹನಾಗಿದ್ದರು ಕೂಡ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಯಾವುದೇ ವಿಕಲಚೇತನ ಅಭ್ಯರ್ಥಿಯನ್ನು ನೇಮಕ ಮಾಡಲು ಎನ್‌ಐಇಪಿಎ ನಿರಾಕರಿಸಿದ್ದನ್ನು ಪ್ರಶ್ನಿಸಿ ಶೇ 75ರಷ್ಟು ಚಲನಾಂಗ ವೈಕಲ್ಯ ಹೊಂದಿದ್ದ ಅಭ್ಯರ್ಥಿ ಡಾ. ಸಚಿನ್‌ ಕುಮಾರ್‌ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

[ತೀರ್ಪಿನ ಪ್ರತಿ]

Dr_Sachin_Kumar_v_NIEPA.pdf
Preview