ಇದೇ ಮೊದಲ ಬಾರಿಗೆ, ತನ್ನ ಆಡಳಿತಾತ್ಮಕ ಹುದ್ದೆಗಳ ನೇರ ನೇಮಕಾತಿ ಮತ್ತು ಬಡ್ತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಮೀಸಲಾತಿ ನೀತಿ ಜಾರಿಗೆ ತಂದಿದೆ
ಮಾದರಿ ಮೀಸಲಾತಿ ರೋಸ್ಟರ್ ಮತ್ತು ರಿಜಿಸ್ಟರ್ ಕುರಿತು ತಾನು ನೀಡಿರುವ ಆದೇಶ ಜೂನ್ 23 ರಿಂದ ಜಾರಿಗೆ ಬಂದಿದೆ ಎಂದು ಅದು ಹೊರಡಿಸಿರುವ ಸುತ್ತೋಲೆ ತಿಳಿಸಿದೆ.
ಈ ರೋಸ್ಟರ್ ಪರಿಶಿಷ್ಟ ಜಾತಿಗಳಿಗೆ ಶೇ 15 ಮತ್ತು ಪರಿಶಿಷ್ಟ ಪಂಗಡಗಳಿಗೆ ಶೇ 7.5ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದ್ದು ಪ್ರತಿ 200 ಮಂಜೂರಾದ ಹುದ್ದೆಗಳಲ್ಲಿ ಒಟ್ಟು 30 ಎಸ್‌ಸಿ ಮತ್ತು 15 ಎಸ್‌ಟಿ ಸಮುದಾಯಗಳ ಅಭ್ಯರ್ಥಿಗಳು ಮೀಸಲಾತಿಯಡಿ ಹುದ್ದೆ ಪಡೆಯಬಹುದಾಗಿದೆ.
ಜೂನ್ 24 ರ ಸುತ್ತೋಲೆಯನ್ನು ಎಲ್ಲಾ ಸುಪ್ರೀಂ ಕೋರ್ಟ್ ನೌಕರರು ಮತ್ತು ರಿಜಿಸ್ಟ್ರಾರ್‌ಗಳಿಗೆ ರವಾನಿಸಲಾಗಿದೆ. ಈ ಸುತ್ತೋಲೆಯು ಸಿಬ್ಬಂದಿಗೆ ಅಪ್‌ಲೋಡ್ ಮಾಡಿದ ರೋಸ್ಟರ್ ಮತ್ತು ರಿಜಿಸ್ಟರ್ ಅನ್ನು ಸುಪ್ರೀಂ ಕೋರ್ಟ್‌ನ ಆಂತರಿಕ ಜಾಲತಾಣವಾದ ಸಪ್ನೆಟ್ ಮೂಲಕ ಪಡೆಯಲು ಸೂಚಿಸಿದೆ.
ರೋಸ್ಟರ್ ಮತ್ತು ರಿಜಿಸ್ಟರ್ ಕುರಿತು ಆಕ್ಷೇಪಣೆಗಳಿದ್ದಲ್ಲಿ ನೇಮಕಾತಿ ವಿಭಾಗದ ರಿಜಿಸ್ಟ್ರಾರ್ (ನೇಮಕಾತಿ) ಅವರಿಗೆ ಕಳಿಸಿಕೊಡುವಂತೆ ಸೂಚಿಸಲಾಗಿದ