Kantara 
ಸುದ್ದಿಗಳು

ವರಾಹ ರೂಪಂ: ಕೋರಿಕ್ಕೋಡ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಥೈಕ್ಕುಡಂ ಬ್ರಿಜ್‌ಗೆ ಕೇರಳ ಹೈಕೋರ್ಟ್ ಅನುಮತಿ

ಕನ್ನಡದ ʼಕಾಂತಾರʼ ಚಿತ್ರದಲ್ಲಿನ ವರಾಹ ರೂಪಂ ಹಾಡನ್ನು ತನ್ನ ʼನವರಸಂʼ ಹಾಡಿನಿಂದ ಕೃತಿಚೌರ್ಯ ಮಾಡಲಾಗಿದೆ ಎಂದು ಮಲಯಾಳಂ ಸಂಗೀತ ತಂಡ ಥೈಕ್ಕುಡಂ ಬ್ರಿಜ್ ಆರೋಪಿಸಿದೆ.

Bar & Bench

ʼಕಾಂತಾರʼ ಚಿತ್ರದ ವರಾಹ ರೂಪಂ ಹಾಡಿನಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿರುವ ಸಂಬಂಧ ಕೇರಳದ ಸೂಕ್ತ ಜಿಲ್ಲಾ ನ್ಯಾಯಾಲಯದ ಮುಂದೆ ಮೊಕದ್ದಮೆ ಹೂಡಲು ಮಲಯಾಳಂ ಸಂಗೀತ ತಂಡ ʼಥೈಕ್ಕುಡಂ ಬ್ರಿಜ್‌ʼಗೆ ಕೇರಳ ಹೈಕೋರ್ಟ್‌ಇತ್ತೀಚೆಗೆ ಅನುಮತಿ ನೀಡಿದೆ.

ವರಾಹ ರೂಪಂ ಹಾಡು ಎರಡು ದಾವೆಗಳಿಗೆ ಸಂಬಂಧಿಸಿದ ವಿಷಯವಾಗಿದ್ದು ನವರಸಂ ಹಾಡಿನ ಹಕ್ಕುಸ್ವಾಮ್ಯ ಹೊಂದಿದ್ದ 'ಮಾತೃಭೂಮಿ ಮುದ್ರಣ ಮತ್ತು ಪ್ರಕಾಶನ ಸಂಸ್ಥೆ' ಹಾಗೂ ಐದು ವರ್ಷಗಳ ಹಿಂದೆ ಹಾಡನ್ನು ಸಂಯೋಜಿಸಿದ್ದ ಕೇರಳದ ಜನಪ್ರಿಯ ಸಂಗೀತ ತಂಡ 'ಥೈಕ್ಕುಡಂ ಬ್ರಿಜ್‌' ಮೊಕದ್ದಮೆ ಹೂಡಿದ್ದವು.

ಪ್ರಸ್ತುತ ಪ್ರಕರಣದಲ್ಲಿ 'ಥೈಕುಡಂ ಬ್ರಿಜ್‌' ಮೊದಲು ಕೋರಿಕ್ಕೋಡ್‌ ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು. ಅದರಂತೆ ಸಿನಿಮಾ ಪ್ರಸಾರ ಆನ್‌ಲೈನ್‌ ವೇದಿಕೆಗಳು ಹಾಗೂ ಚಿತ್ರಮಂದಿರಗಳಲ್ಲಿ ಕಾಂತಾರ ಚಿತ್ರ ಪ್ರದರ್ಶಿಸುವಾಗ ವರಾಹ ರೂಪಂ ಹಾಡನ್ನು ಬಳಸದಂತೆ ಚಲನಚಿತ್ರ ತಂಡವನ್ನು ನಿರ್ಬಂಧಿಸಿ ಕೋರಿಕ್ಕೋಡ್‌ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು.

ಆದರೆ ಬಳಿಕ ನಡೆದ ವಿಚಾರಣೆಯಲ್ಲಿ 'ಥೈಕ್ಕುಡಂ ಬ್ರಿಜ್‌' ಮನವಿ ವಜಾಗೊಳಿಸಿದ ಅದು ಪ್ರಕರಣದ ವಿಚಾರಣೆಯನ್ನು ತಾನು ನಡೆಸಲಾಗದು ಬದಲಿಗೆ ಎರ್ನಾಕುಲಂನಲ್ಲಿರುವ ವಾಣಿಜ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತೆ ಸೂಚಿಸಿತ್ತು.

ಆದರೆ ಈ ಆದೇಶಕ್ಕೆ ನಂತರ ಕೇರಳ ಹೈಕೋರ್ಟ್‌ ತಡೆ ನೀಡಿತು ಹೈಕೋರ್ಟ್‌ನಲ್ಲಿ ಅರ್ಜಿ ಬಾಕಿ ಇದ್ದಾಗಲೇ ಕಾಂತಾರ ನಿರ್ದೇಶನ ರಿಷಬ್‌ ಶೆಟ್ಟಿ ಸೇರಿದಂತೆ ವಿವಿಧ ಪ್ರತಿವಾದಿಗಳ ಹೆಸರನ್ನು 'ಥೈಕ್ಕುಡಂ ಬ್ರಿಜ್‌' ದಾವೆಯಿಂದ ಕೈಬಿಟ್ಟಿತ್ತು. ಪ್ರಕರಣದ ವಿಲೇವಾರಿ ಸಮಯದಲ್ಲಿ ಕಾಂತಾರ ಚಿತ್ರದ ಸಂಗೀತ ಸಂಯೋಜಕ ಬಿ ಎಲ್‌ ಅಜನೀಶ್‌ ಅವರನ್ನು ಮಾತ್ರ ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.

ಕೆಲ ದಿನಗಳ ಹಿಂದಿನ ವಿಚಾರಣೆ ವೇಳೆ ಕೋರಿಕ್ಕೋಡ್‌ ಜಿಲ್ಲಾ ನ್ಯಾಯಾಲಯದ ಎದುರು ಮೊಕದ್ದಮೆ ಹೂಡಲು 'ಥೈಕ್ಕುಡಂ ಬ್ರಿಜ್‌'ಗೆ ನ್ಯಾ. ಎಂ ಆರ್‌ ಅನಿತಾ ಅವರಿದ್ದ ಏಕಸದಸ್ಯ ಪೀಠ. ಅನುವು ಮಾಡಿಕೊಟ್ಟಿದೆ.

'ಥೈಕ್ಕುಡಂ  ಬ್ರಿಜ್‌' ಬಹುತೇಕ ಪ್ರತಿವಾದಿಗಳ ಹೆಸರನ್ನು ಕೈಬಿಟ್ಟಿರುವುದರಿಂದ ಈಗ ಅದು ಮಾಡಿದ ಮನವಿ ಹಾಗೂ ಕೋರಿದ ಪರಿಹಾರದಲ್ಲಿ ವ್ಯಾಪಕ ಬದಲಾವಣೆ ಮಾಡಬೇಕಾಗುವುದರಿಂದ ತಾನು ಪೂರ್ಣಪ್ರಮಾಣದಲ್ಲಿ ಮನವಿಯನ್ನು ವಿಲೇವಾರಿ ಮಾಡಲಾಗದು ಎಂದು ಪೀಠ ನುಡಿಯಿತು. ಬದಲಿಗೆ ಪ್ರಕರಣದ ಸಂದರ್ಭದಲ್ಲಿ ಎದುರಾದ ಕಾನೂನು ಪ್ರಶ್ನೆಗಳನ್ನು ಚರ್ಚಿಸುವುದು ಸೂಕ್ತ ಎಂದು ನ್ಯಾ. ಅನಿತಾ ಅಭಿಪ್ರಾಯಪಟ್ಟರು.