Solicitor General Tushar Mehta  
ಸುದ್ದಿಗಳು

ಕಾನೂನು ರೂಪಿಸುವುದು ಕೇವಲ ಒಂದು ಜ್ಞಾನಶಿಸ್ತಿನ ವಿಚಾರವಲ್ಲ; ವೃತಿಪರರ ಅವಶ್ಯಕತೆ ಇದೆ: ಎಸ್‌ ಜಿ ತುಷಾರ್‌ ಮೆಹ್ತಾ

ಒ ಪಿ ಜಿಂದಾಲ್‌ ಗ್ಲೋಬಲ್‌ ವಿಶ್ವವಿದ್ಯಾಲಯದಲ್ಲಿ ಆರಂಭಿಸಲಾದ ಮೂರು ಹೊಸ ಸ್ನಾತಕೋತ್ತರ ಪದವಿ ಕೋರ್ಸ್‌ಗಳನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

Bar & Bench

ಕಾನೂನಿನ ಕರಡು ರಚನೆ ಕೇವಲ ಒಂದು ಶೈಕ್ಷಣಿಕ ವಿಚಾರವಲ್ಲ ಬದಲಿಗೆ ಅದು ಕಲೆ, ವಿಜ್ಞಾನ, ಗಣಿತ ಹೀಗೆ ಅಪಾರ ಜ್ಞಾನಶಿಸ್ತಿನ ಸಮಾಗಮ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ತಿಳಿಸಿದರು.

ಶಾಸಕಾಂಗ ಕರಡು ರಚನೆಯೂ ಸೇರಿದಂತೆ ಹರಿಯಾಣದ ಒಪಿ ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾಲಯದ ಮೂರು ಹೊಸ ಸ್ನಾತಕೋತ್ತರ ಕೋರ್ಸ್‌ಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇಶಕ್ಕೆ ಕಾನೂನುಗಳ ಮಸೂದೆ ರೂಪಿಸುವಲ್ಲಿ ತರಬೇತಿ ಪಡೆದ ಸಮರ್ಥ ಹಾಗೂ ನಿಷ್ಠಾವಂತ ವೃತ್ತಿಪರರ ಅಗತ್ಯವಿದೆ ಎಂದ ಅವರು ಕಾನೂನು ಕ್ಷೇತ್ರದಲ್ಲಿ ಅತ್ಯಂತ ಕಡೆಗಣನೆಗೆ ತುತ್ತಾಗಿರುವ ವಿಷಯಗಳಲ್ಲಿ ಮಸೂದೆ ರಚನೆಯೂ ಒಂದು ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕಾನೂನು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರಲ್ಲಿ ಮಸೂದೆ ರಚನೆಯೇ ಅಂತಿಮ ವ್ಯತ್ಯಾಸ ತರಬಲ್ಲದು ಎಂದು ಅವರು ಹೇಳಿದರು. ಕೇವಲ ಒಂದು ಪದ  ಕಾನೂನು ವಿಧಾನದ ಸ್ವರೂಪವನ್ನು ಬದಲಿಸಬಲ್ಲದು. “May” ಮತ್ತು “Shall” ಎಂಬ ಪದಗಳ ಬಳಕೆ ಕಾನೂನು ಕಡ್ಡಾಯವೋ ಅಥವಾ ಮಾರ್ಗದರ್ಶಕವೋ ಎಂಬುದನ್ನು ನಿರ್ಧರಿಸುತ್ತದೆ ಎಂದರು.

ಮಸೂದೆ ರಚನೆಯಲ್ಲಿ ನಿಖರವಾದ ಭಾಷೆಯ ಬಳಕೆ ಅತ್ಯಂತ ಮಹತ್ವದ್ದಾಗಿದೆ. ವಿರಾಮ, ಅಲ್ಪವಿರಾಮದಂತಹ ಚಿಹ್ನೆಗಳಿಗೂ ಕಾನೂನು ವ್ಯಾಖ್ಯಾನದಲ್ಲಿ ಮಹತ್ವ ಇದೆ ಎಂಬುದನ್ನು ಅವರು ತಮ್ಮ ಅನುಭವವೊಂದನ್ನು ವಿವರಿಸುವ ಮೂಲಕ ವಿವರಿಸಿದರು.

1800ರ ದಶಕದಲ್ಲಿ ಲಾರ್ಡ್‌ ಮೆಕಾಲೆ ರಚಿಸಿದ ಭಾರತೀಯ ದಂಡ ಸಂಹಿತೆ ಅತ್ಯಂತ ನಿಖರವಾದ ಶಾಸನ ರಚನೆಯ ಉದಾಹರಣೆ ಎಂದು ಅವರು ಹೇಳಿದರು.ಉತ್ತಮ ಶಾಸನ