ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ, ಅಶೋಕ್ ಭೂಷಣ್,  ಮತ್ತು ಎಂ.ಆರ್.ಶಾ
ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ, ಅಶೋಕ್ ಭೂಷಣ್, ಮತ್ತು ಎಂ.ಆರ್.ಶಾ 
ಸುದ್ದಿಗಳು

‘ಶೂನ್ಯ ವರ್ಷ’ ಆತಂಕಕ್ಕೆ ಕಾರಣ ಇಲ್ಲ, ಗೃಹಾಧಾರಿತ ಆನ್‌ಲೈನ್ ಪರೀಕ್ಷೆಯಲ್ಲಿ ಪಾರದರ್ಶಕತೆ ಅಸಾಧ್ಯ: ಸುಪ್ರೀಂ ಅಭಿಮತ

Bar & Bench

ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ ನಡೆಸಿದ ರಾಷ್ಟ್ರೀಯ ಕಾನೂನು ಪ್ರವೇಶಾತಿ ಪರೀಕ್ಷೆ (ಎನ್ಎಲ್ಎಟಿ 2020) ನಡಾವಳಿಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ್ದು ಸಾಮಾನ್ಯ ಕಾನೂನು ಪ್ರವೇಶಾತಿ ಪರೀಕ್ಷೆ (ಸಿಎಲ್ಎಟಿ 2020) ಮೂಲಕವೇ ಪ್ರವೇಶಾತಿ ನಡೆಯಬೇಕು ಎಂದು ಆದೇಶಿಸಿದೆ.

ಇದೇ ವೇಳೆ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳ ಒಕ್ಕೂಟಕ್ಕೆ ಮರಳಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್.ಶಾ ಅವರಿದ್ದ ನ್ಯಾಯಪೀಠ ತಿಳಿಸಿದೆ. ಪ್ರತ್ಯೇಕ ಪ್ರವೇಶಾತಿ ಪರೀಕ್ಷೆ ನಡೆಸುವುದನ್ನು ವಿರೋಧಿಸಿದ್ದ ಒಕ್ಕೂಟ ಕಾನೂನು ಶಾಲೆಯ ಉಪಕುಲಪತಿ ವಿರುದ್ಧ ಕ್ರಮ ಕೈಗೊಂಡಿತ್ತು.

ವಿಶೇಷವಾಗಿ ದೇಶದ ಪ್ರಮುಖ ಕಾನೂನು ವಿವಿಗೆ ಪ್ರವೇಶ ಪರೀಕ್ಷೆ ನಡೆಸುವಾಗ ಗೃಹಾಧಾರಿತ ಆನ್‌ಲೈನ್ ಪರೀಕ್ಷೆ ರೀತಿಯ ವಿಧಾನದಲ್ಲಿ ಪಾರದರ್ಶಕತೆ, ನ್ಯಾಯಪರತೆ ಹಾಗೂ ಪ್ರಾಮಾಣಿಕತೆ ಅಸಾಧ್ಯ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.

ತಕ್ಷಣ ಪ್ರವೇಶಾವಕಾಶ ಕಲ್ಪಿಸದಿದ್ದರೆ ಈ ಶೈಕ್ಷಣಿಕ ಸಾಲು ‘ಶೂನ್ಯ ವರ್ಷ’ವಾಗುತ್ತದೆ ಎಂದು ಕಾನೂನು ಶಾಲೆ ಆತಂಕ ವ್ಯಕ್ತಪಡಿಸಿತ್ತು. ಈ ತಾರ್ಕಿಕತೆಯನ್ನು ಒಪ್ಪದ ಕೋರ್ಟ್ ‘ಸಿಎಲ್ಎಟಿ ಪರೀಕ್ಷೆ ಬಳಿಕ ಅಕ್ಟೋಬರ್ ನಂತರ ಪದವಿ ತರಗತಿಗಳು ಆರಂಭವಾದರೂ ಒಳ್ಳೆಯ ಶೈಕ್ಷಣಿಕ ಮಾರ್ಗಗಳನ್ನು ಕಂಡುಕೊಳ್ಳಬಹುದಾಗಿತ್ತು’ ಎಂದು ತಿಳಿಸಿದೆ.