ಸುದ್ದಿಗಳು

ನೆಲಸಮವಾದ ನೋಯ್ಡಾ ಅವಳಿ ಕಟ್ಟಡ: ಇಲ್ಲಿದೆ ಸುಪ್ರೀಂ ಕೋರ್ಟ್‌ ನಡೆಸಿದ್ದ ವಿಚಾರಣೆಯ ವಿವರ

ನ್ಯಾಯಾಲಯದಲ್ಲಿ ಬಹಳ ದಿನಗಳವರೆಗೆ ವಿಚಾರಣೆ ನಡೆದು ಸುಪ್ರೀಂ ಕೋರ್ಟ್‌ ಅಂತಿಮವಾಗಿ ಕಟ್ಟಡ ನೆಲಸಮಗೊಳಿಸುವಂತೆ ಕೆಲ ದಿನಗಳ ಹಿಂದೆ ಆದೇಶ ನೀಡಿತ್ತು.

Bar & Bench

ಕಡೆಗೂ ನೋಯ್ಡಾದ ವಿವಾದಾತ್ಮಕ ಅವಳಿ ಕಟ್ಟಡವನ್ನು ಇಂದು ನೆಲಸಮಗೊಳಿಸಲಾಗಿದೆ. ಸುಪ್ರೀಂ ಕೋರ್ಟ್‌ ಆದೇಶದಂತೆ ಈ ಕಾರ್ಯಾಚರಣೆ ನಡೆದಿದೆ. ಹದಿನಾಲ್ಕು ಅಂತಸ್ತಿನ ಕಟ್ಟಡಕ್ಕೆ ಅನುಮತಿ ಪಡೆದು ನಲವತ್ತು ಅಂತಸ್ತಿನ ಕಟ್ಟಡ ಕಟ್ಟಿದ್ದು, ಉದ್ಯಾನವನ ಸ್ಥಳವನ್ನು ಆಕ್ರಮಿಸಿಕೊಂಡಿದ್ದರಿಂದ ಕಟ್ಟಡ ವಿವಾದದ ಕೇಂದ್ರ ಬಿಂದುವಾಗಿತ್ತು.

ನೆಲಸಮ ಕಾರ್ಯಾಚರಣೆಗಾಗಿ ಮೂರು ಸಾವಿರ ಕೆಜಿಗೂ ಹೆಚ್ಚು ಸ್ಫೋಟಕಗಳನ್ನು ಬಳಸಲಾಯಿತು. ನೋಯ್ಡಾ ಪಾಲಿಕೆಯ ಮಾರ್ಗದರ್ಶನದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟಿದ್ದ ಕಂಪೆನಿ ಸೂಪರ್‌ ಟೆಕ್‌ ಹಣ ಬಳಸಿಯೇ ಇಡೀ ಕಟ್ಟಡವನ್ನು ನೆಲಸಮಗೊಳಿಸಲಾಯಿತು. ಕಾರ್ಯಾಚರಣೆಗೆಂದು ರೂ 20 ಕೋಟಿ ವೆಚ್ಚವಾಯಿತು. ಮೀಪದ ಕಟ್ಟಡಗಳಿಗೆ ಮುಂಜಾಗ್ರತೆ ಕ್ರಮವಾಗಿ ಹೊದಿಕೆಗಳನ್ನು ಹಾಕಲಾಗಿತ್ತು. ಇಡೀ ಪ್ರದೇಶದಲ್ಲಿದ್ದ ಜನರನ್ನು ತೆರವುಗೊಳಿಸಲಾಗಿತ್ತು. ಸುತ್ತಲಿನ ಪ್ರದೇಶದಲ್ಲಿ ಪ್ರತ್ಯೇಕ ಸಂಚಾರ ವ್ಯವಸ್ಥೆ, ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಕಟ್ಟಡ ಧರೆಗುರುಳುತ್ತಿದ್ದಂತೆ ಇಡೀ ಪ್ರದೇಶ ದೂಳಿನಿಂದ ಆವೃತವಾಯಿತು.

ನ್ಯಾಯಾಲಯದಲ್ಲಿ ಬಹಳ ದಿನಗಳವರೆಗೆ ವಿಚಾರಣೆ ನಡೆದು ಸುಪ್ರೀಂ ಕೋರ್ಟ್‌ ಅಂತಿಮವಾಗಿ ಕಟ್ಟಡ ನೆಲಸಮಗೊಳಿಸುವಂತೆ ಕೆಲ ದಿನಗಳ ಹಿಂದೆ ಆದೇಶ ನೀಡಿತ್ತು. ನ್ಯಾಯಾಲಯ ವಿಚಾರಣೆಯ ಸುದ್ದಿಗಳು ಬಾರ್‌ ಅಂಡ್‌ ಬೆಂಚ್‌ ಜಾಲತಾಣದಲ್ಲಿ ಪ್ರಕಟಗೊಂಡಿದ್ದವು. ಅದರ ವಿವರಗಳು ಇಲ್ಲಿವೆ: