Sudarshan TV- UPSC Jihad 
ಸುದ್ದಿಗಳು

ಮುಸ್ಲಿಮರಿಗೆ ಯುಪಿಎಸ್‌ಸಿ ಕೋಚಿಂಗ್ ನೀಡುವ ಸಂಸ್ಥೆಗೆ ಉಗ್ರರ ನಂಟಿರುವ ಸಂಸ್ಥೆಗಳಿಂದ ದೇಣಿಗೆ: ಸುದರ್ಶನ್ ಟಿವಿ ಆರೋಪ

ಯಾವುದೇ ಸಮುದಾಯ/ ವ್ಯಕ್ತಿಗಳ ವಿರುದ್ಧ ಕೆಟ್ಟ ಧೋರಣೆ ಇರಿಸಿಕೊಂಡಿಲ್ಲ ಮತ್ತು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸೇವೆಗೆ ತೊಡಗುವ ಯಾವುದೇ ಪ್ರತಿಭಾನ್ವಿತ ಅಭ್ಯರ್ಥಿಯ ಆಯ್ಕೆಯನ್ನು ವಿರೋಧಿಸುವುದಿಲ್ಲ’ ಎಂದು ಸುದರ್ಶನ್ ಟಿವಿ ಸಮರ್ಥಿಸುತ್ತದೆ.

Bar & Bench

‘ಯಾವುದೇ ಸಮುದಾಯ/ ವ್ಯಕ್ತಿಗಳ ವಿರುದ್ಧ ಕೆಟ್ಟ ಧೋರಣೆ ಇರಿಸಿಕೊಂಡಿಲ್ಲ ಮತ್ತು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸೇವೆಗೆ ತೊಡಗುವ ಯಾವುದೇ ಪ್ರತಿಭಾನ್ವಿತ ಅಭ್ಯರ್ಥಿಯ ಆಯ್ಕೆಯನ್ನು ವಿರೋಧಿಸುವುದಿಲ್ಲ’ ಎಂದು ಸುದರ್ಶನ್ ಟಿವಿ ಸಮರ್ಥಿಸುತ್ತದೆ.

ಮುಸ್ಲಿಂ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಕೋಚಿಂಗ್ ನೀಡುವ ಜಕಾತ್ ಫೌಂಡೇಶನ್ ಆಫ್ ಇಂಡಿಯಾ ಸಂಸ್ಥೆ (ZFI) ವಿವಿಧ ಭಯೋತ್ಪಾದಕ ಸಂಘಟನೆಗಳಿಂದ ಹಣ ಸ್ವೀಕರಿಸಿದ್ದು ಇದನ್ನು ಉಲ್ಲೇಖಿಸಿ ಪ್ರಸಾರ ಮಾಡಿದ ಕಾರ್ಯಕ್ರಮದಲ್ಲಿ ಯುಪಿಎಸ್‌ಸಿ ಜಿಹಾದ್ ಪದ ಬಳಕೆ ಮಾಡಿರುವುದಾಗಿ ಸುದರ್ಶನ್ ಟಿವಿ ಸುಪ್ರೀಂಕೋರ್ಟಿಗೆ ತಿಳಿಸಿದೆ.

ವಾಹಿನಿಯ "ಬಿಂದಾಸ್ ಬೋಲ್" ಕಾರ್ಯಕ್ರಮದ ಪ್ರಸಾರಕ್ಕೆ ತಡೆ ನೀಡಬೇಕೆಂದು ಕೋರಿ ವಕೀಲ ಫಿರೋಜ್ ಇಕ್ಬಾಲ್ ಖಾನ್ ಅವರು ಸಲ್ಲಿಸಿರುವ ಅರ್ಜಿಯಲ್ಲಿ ಮುಸ್ಲಿಮರ ಬಗ್ಗೆ ಪೂರ್ವಗ್ರಹ ಹೊಂದಿರುವ ಕಾರ್ಯಕ್ರಮ ಪ್ರಸಾರ ಮಾಡುವುದರಿಂದ ದೇಶದ ಕೋಮು ಸೌಹಾರ್ದಕ್ಕೆ ಧಕ್ಕೆ ಒದಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಸುದರ್ಶನ್ ಟಿವಿಯಾವುದೇ ಸಮುದಾಯ/ ವ್ಯಕ್ತಿಗಳ ವಿರುದ್ಧ ಕೆಟ್ಟ ಧೋರಣೆ ಇರಿಸಿಕೊಂಡಿಲ್ಲ ಮತ್ತು ಕೇಂದ್ರ ಅಥವಾ ರಾಜ್ಯ ಸರ್ಕಾರಗಳ ಸೇವೆಗೆ ತೊಡಗುವ ಯಾವುದೇ ಪ್ರತಿಭಾನ್ವಿತ ಅಭ್ಯರ್ಥಿಯ ಆಯ್ಕೆಯನ್ನು ವಿರೋಧಿಸುವುದಿಲ್ಲ. ಅಲ್ಲದೆ ನಿರ್ದಿಷ್ಟ ಸಮುದಾಯವೊಂದು ಯುಪಿಎಸ್‌ಸಿ ಪರೀಕ್ಷೆಗಳಲ್ಲಿ ಭಾಗಿಯಾಗಬಾರದು ಎಂದು ಯಾವುದೇ ಹೇಳಿಕೆ ಅಥವಾ ಸಂದೇಶ ನೀಡಿಲ್ಲ ಎಂದು ವಾಹಿನಿ ಸಮರ್ಥಿಸಿಕೊಂಡಿದೆ.

ಜಡ್ಎಫ್ಐಗೆ ಕೊಡುಗೆ ನೀಡುವವರಲ್ಲಿ ಕೆಲವರು ಉಗ್ರಗಾಮಿ ಗುಂಪುಗಳಿಗೆ ಧನಸಹಾಯ ನೀಡುವ ಸಂಸ್ಥೆಗಳ ಜೊತೆ ನಂಟು ಇರಿಸಿಕೊಂಡಿದ್ದಾರೆ ಎಂದು ಚಾನೆಲ್ ಹೇಳಿದೆ. ಸಂಸ್ಥೆ ಹೀಗೆ ಪಡೆದ ಹಣವನ್ನು ಐಎಎಸ್, ಐಪಿಎಸ್ ಅಥವಾ ಯುಪಿಎಸ್‌ಸಿ ಆಕಾಂಕ್ಷಿಗಳ ಅಧ್ಯಯನಕ್ಕೆ ವಿನಿಯೋಗಿಸಲು ಬಳಸುತ್ತಿದೆ ಎಂದು ಸುದರ್ಶನ್ ಟಿವಿ ಹೇಳಿದೆ.

ಪ್ರದರ್ಶನವು ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ ಎಂದು ಚಾನೆಲ್ ತಿಳಿಸಿದೆ.

ಜಕಾತ್ ಫೌಂಡೇಶನ್ ಆಫ್ ಇಂಡಿಯಾದ ಸೈಯದ್ ಜಾಫರ್ ಮಹಮೂದ್ ಅವರನ್ನು ಚರ್ಚೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿತ್ತು. ಈ ಸಂಬಂಧ ಸಿಬ್ಬಂದಿಯನ್ನು ಅವರ ಕಚೇರಿ ಮತ್ತು ಮನೆಗೆ ಕಳಿಸಿಕೊಡಲಾಗಿತ್ತು. ಇಷ್ಟಾದರೂ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ ಎಂದು ಅದು ವಿವರಿಸಿದೆ.

"ಉಗ್ರಗಾಮಿಗಳ ಜೊತೆ ನಂಟು ಇರಿಸಿಕೊಂಡ ಸಂಸ್ಥೆಗಳೊಂದಿಗೆ" ಯುಪಿಎಸ್‌ಸಿ ಕೋಚಿಂಗ್ ಸಂಸ್ಥೆ ಶಾಮೀಲಾಗಿದೆ ಎಂಬ ನಿಟ್ಟಿನಲ್ಲಿ ವಾಹಿನಿ, ಇಂಗ್ಲೆಂಡಿನ ಮದೀನಾ ಪ್ರತಿಷ್ಠಾನದಿಂದ ಜಡ್ಎಫ್ಐ ದೇಣಿಗೆ ಸ್ವೀಕರಿಸಿದೆ ಎಂದು ಹೇಳಿದೆ.

ಇಂಗ್ಲೆಂಡ್ ಮತ್ತು ವೇಲ್ಸ್‌ನ ಚಾರಿಟಿ ಆಯೋಗದ ದಾಖಲೆಗಳ ಪ್ರಕಾರ, ಮದೀನಾ ಪ್ರತಿಷ್ಠಾನದ ಟ್ರಸ್ಟಿ ಡಾ.ಜಾಹಿದ್ ಅಲಿ ಪರ್ವೇಜ್ ಅವರು ಇಸ್ಲಾಮಿಕ್ ಫೌಂಡೇಶನ್‌ನ ಟ್ರಸ್ಟಿಯೂ ಆಗಿದ್ದಾರೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ತಾಲಿಬಾನ್ ಮತ್ತು ಅಲ್-ಖೈದಾಗಳ ಜೊತೆ ನಂಟು ಹೊಂದಿ ವಿಶ್ವಸಂಸ್ಥೆಯ ದಿಗ್ಬಂಧನ ಪಟ್ಟಿಯಲ್ಲಿರುವ ವ್ಯಕ್ತಿಗಳ ಪೈಕಿ ಇಸ್ಲಾಮಿಕ್ ಫೌಂಡೇಶನ್ನಿನ ಇಬ್ಬರು ಟ್ರಸ್ಟಿಗಳು ಇದ್ದಾರೆ ಎಂದು ಟೈಮ್ಸ್, ಯುಕೆ ವರದಿ ಮಾಡಿದೆ. "ವರದಿಗಳ ಪ್ರಕಾರ, 2019ರ ಸೆಪ್ಟೆಂಬರ್‌ನಲ್ಲಿ ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿಯಲ್ಲಿ ಮದೀನಾ ಟ್ರಸ್ಟ್ ಭಾಗಿಯಾಗಿದೆ" ಎಂದು ಚಾನೆಲ್ ಹೇಳಿದೆ.

ಇಂಗ್ಲೆಂಡ್ ಮತ್ತು ವೇಲ್ಸ್‌ನ ಚಾರಿಟಿ ಆಯೋಗದ ದಾಖಲೆಗಳ ಪ್ರಕಾರ, ಮದೀನಾ ಪ್ರತಿಷ್ಠಾನದ ಟ್ರಸ್ಟಿ ಡಾ.ಜಾಹಿದ್ ಅಲಿ ಪರ್ವೇಜ್ ಅವರು ಇಸ್ಲಾಮಿಕ್ ಫೌಂಡೇಶನ್‌ನ ಟ್ರಸ್ಟಿಯೂ ಆಗಿದ್ದಾರೆ ಎಂದು ದಾಖಲೆಗಳಿಂದ ತಿಳಿದು ಬಂದಿದೆ. ನಿಷೇಧಿತ ಭಯೋತ್ಪಾದಕ ಸಂಘಟನೆಗಳಾದ ತಾಲಿಬಾನ್ ಮತ್ತು ಅಲ್-ಖೈದಾಗಳ ಜೊತೆ ನಂಟು ಹೊಂದಿದ ಕಾರಣಕ್ಕೆ ವಿಶ್ವಸಂಸ್ಥೆಯ ದಿಗ್ಬಂಧನ ಪಟ್ಟಿಯಲ್ಲಿರುವ ವ್ಯಕ್ತಿಗಳ ಪೈಕಿ ಇಸ್ಲಾಮಿಕ್ ಫೌಂಡೇಶನ್ನಿನ ಇಬ್ಬರು ಟ್ರಸ್ಟಿಗಳು ಇದ್ದಾರೆ ಎಂದು ಟೈಮ್ಸ್, ಯುಕೆ ವರದಿ ಮಾಡಿದೆ. "ವರದಿಗಳ ಪ್ರಕಾರ, 2019ರ ಸೆಪ್ಟೆಂಬರ್‌ನಲ್ಲಿ ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿಯಲ್ಲಿ ಮದೀನಾ ಟ್ರಸ್ಟ್ ಭಾಗಿಯಾಗಿದೆ" ಎಂದು ಚಾನೆಲ್ ಹೇಳಿದೆ.