ಕರ್ನಾಟಕದಲ್ಲಿ ಮೆಗಾ ಇ- ಲೋಕ ಅದಾಲತ್‌ ಮೂಲಕ 1,15,925 ಪ್ರಕರಣಗಳು ಇತ್ಯರ್ಥ

ಸೆಪ್ಟೆಂಬರ್ 19ರಂದು ಬೆಳಿಗ್ಗೆ 11ರಿಂದ ಸಂಜೆ 5.30ರವರೆಗೆ ರಾಜ್ಯದೆಲ್ಲೆಡೆ 875 ನ್ಯಾಯಪೀಠಗಳನ್ನು ರಚಿಸುವ ಮೂಲಕ ಇ-ಲೋಕ್ ಅದಾಲತ್ ನಡೆಸಲಾಗಿದೆ.
ಮೆಗಾ ಇ ಲೋಕ್ ಅದಾಲತ್
ಮೆಗಾ ಇ ಲೋಕ್ ಅದಾಲತ್

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಆಯೋಜಿಸಿದ್ದ ಮೆಗಾ ಇ-ಲೋಕ್ ಅದಾಲತ್‌ನಲ್ಲಿ ಕರ್ನಾಟಕದ ಒಟ್ಟು 1,15,925 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಕ್ರಿಮಿನಲ್ ಸಂಧಾನ ಪ್ರಕರಣಗಳು, ಬ್ಯಾಂಕ್ ವಿಷಯಗಳು, ಹಣ ವಸೂಲಿ, ವಾಹನ ಅಪಘಾತ ಪರಿಹಾರ ಇತ್ಯರ್ಥ ನ್ಯಾಯಮಂಡಳಿ (MACT) ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ವೈವಾಹಿಕ ವಿವಾದಗಳು, ಭೂ ವ್ಯಾಜ್ಯಗಳು, ಕಂದಾಯ ವಿಷಯಗಳು ಮತ್ತಿತರ ಸಿವಿಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಇ- ಲೋಕ ಅದಾಲತ್‌ಗಾಗಿ 1,33,000 ಕ್ಕೂ ಹೆಚ್ಚು ಪ್ರಕರಣಗಳನ್ನು ಗುರುತಿಸಲಾಗಿತ್ತು.

Also Read
ದುಡಿಯುವವರಿಗಿಂತಲೂ ಗೃಹಿಣಿಯ ಸ್ಥಾನ ದೊಡ್ಡದು ಎಂದ ಮದ್ರಾಸ್ ಹೈಕೋರ್ಟ್: ಅಪಘಾತ ಪರಿಹಾರದಲ್ಲಿ ಹೆಚ್ಚಳ ಮಾಡಿದ ನ್ಯಾಯಾಲಯ
Also Read
ಸಂಸದರು, ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಲೇವಾರಿಗೆ ಪಿಐಎಲ್ ದಾಖಲಿಸಿಕೊಳ್ಳುವಂತೆ ಹೈಕೋರ್ಟ್ ಸೂಚನೆ

ಸೆಪ್ಟೆಂಬರ್ 19 ರಂದು ಬೆಳಿಗ್ಗೆ 11 ರಿಂದ ಸಂಜೆ 5.30 ರವರೆಗೆ ರಾಜ್ಯದಾದ್ಯಂತ 875 ನ್ಯಾಯಪೀಠಗಳನ್ನು ರಚಿಸುವ ಮೂಲಕ ಇ-ಲೋಕ ಅದಾಲತ್ ನಡೆಸಲಾಯಿತು. ಹೈಕೋರ್ಟ್‌ನಲ್ಲಿ ಒಟ್ಟು 15 ಪೀಠ ಮತ್ತು ಉಳಿದ 30 ಜಿಲ್ಲಾ ನ್ಯಾಯಾಲಯಗಳಲ್ಲಿ 860 ಪೀಠಗಳನ್ನು ರಚಿಸಲಾಗಿತ್ತು.

ಬೆಂಗಳೂರಿನ ಪ್ರಧಾನ ನ್ಯಾಯಪೀಠ ಸೇರಿದಂತೆ ಮೂರು ಹೈಕೋರ್ಟ್ ಪೀಠಗಳಲ್ಲಿ 925 ಪ್ರಕರಣಗಳು ಇತ್ಯರ್ಥಗೊಂಡಿದ್ದು, 30 ಜಿಲ್ಲೆಗಳಲ್ಲಿ 1,15,000 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಅವುಗಳಲ್ಲಿ 7,383 ಪ್ರಕರಣಗಳು ಪೂರ್ವ ಮೊಕದ್ದಮೆ ಹಂತದಲ್ಲಿವೆ ಮತ್ತು 1,07,617 ಪ್ರಕರಣಗಳ ವಿಚಾರಣೆ ಬಾಕಿ ಉಳಿದಿದೆ.

Also Read
ವಿಸ್ತೃತ ನ್ಯಾಯಪೀಠಕ್ಕೆ ಮರಾಠಾ ಮೀಸಲಾತಿ ಪ್ರಕರಣ; ಮರಾಠಾ ಕೋಟಾದಡಿ ಸದ್ಯಕ್ಕಿಲ್ಲ ಉದ್ಯೋಗ, ಪ್ರವೇಶಾತಿ

ಮೆಗಾ ಇ-ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡ ಒಟ್ಟು ಮೊತ್ತ ₹3,57,64,31,758 ಅದರಲ್ಲಿ ₹27,33,38,583ಗಳನ್ನು ದಂಡ, ಜುಲ್ಮಾನೆ ಹಾಗೂ ರಾಜಿ ಶುಲ್ಕವಾಗಿ ಪಡೆಯಲಾಗಿದ್ದು ರಾಜ್ಯ ಸರ್ಕಾರದ ಖಾತೆಗೆ ಜಮಾ ಮಾಡಲಾಗಿದೆ.

ವಾಹನ ಅಪಘಾತ ಪರಿಹಾರ ಇತ್ಯರ್ಥ ನ್ಯಾಯಮಂಡಳಿ (MACT) ಪ್ರಕರಣಗಳು, ನೆಗೋಷಿಯಬಲ್‌ ಇನ್ಸ್‌ಟ್ರೂಮೆಂಟ್‌ ಕಾಯ್ದೆ ಪ್ರಕರಣಗಳು, ಕಾನೂನು ಸೇವಾ ಕೇಂದ್ರದ (LAC) ಪ್ರಕರಣಗಳು ಸಿವಿಲ್ ಪ್ರಕರಣಗಳು ಸೇರಿದಂತೆ ಸಂತ್ರಸ್ತರು, ದೂರುದಾರರು, ಹಕ್ಕುದಾರರು, ಪಕ್ಷಗಳು ಇತ್ಯಾದಿಗಳಿಗೆ ಉಳಿದ ₹3,30,30,93,175 ಅನ್ನು ಪಾವತಿಸಲಾಗಿದೆ.

Related Stories

No stories found.
Kannada Bar & Bench
kannada.barandbench.com