[ವಿಧಿ ವರದಿ] ಕೋವಿಡ್ ನಿಯಮ ಉಲ್ಲಂಘನೆ: ಎರಡು ವರ್ಷಗಳ ಅವಧಿಯಲ್ಲಿ ದೆಹಲಿಯಲ್ಲಿ 54,919 ಮಂದಿ ಬಂಧನ

ಅಂತಹ ಪ್ರಕರಣಗಳಿಗೆ ನ್ಯಾಯಾಲಯಗಳು ವ್ಯಾಪಕ ಮಟ್ಟದಲ್ಲಿ ಭಿನ್ನ ಬಗೆಯ ಶಿಕ್ಷೆ ವಿಧಿಸಿದವು. ಮಾಸ್ಕ್ ಧರಿಸದಿದ್ದಕ್ಕೆ ಒಂದು ನ್ಯಾಯಾಲಯ ₹ 4400 ದಂಡ ವಿಧಿಸಿದರೆ, ಇನ್ನೊಂದು ₹50 ದಂಡ ವಿಧಿಸಿತ್ತು.
Face mask, car
Face mask, car

ಕೋವಿಡ್‌ ತಡೆಯಲು ಭಾರತ ದೇಶವ್ಯಾಪಿ ಲಾಕ್‌ಡೌನ್‌ ವಿಧಿಸಿತು. ಆ ಬಳಿಕ ನಿಯಮಾವಳಿ ಪಾಲನೆಯಾಗುತ್ತಿದೆಯೇ ಎಂಬುದನ್ನು ನೋಡಿಕೊಳ್ಳಲು ಕಾನೂನು ಜಾರಿ ಸಂಸ್ಥೆಗಳು 1897ರ ಸಾಂಕ್ರಾಮಿಕ ರೋಗ ಕಾಯಿದೆ, 2005ರ ವಿಪತ್ತು ನಿರ್ವಹಣಾ ಕಾಯಿದೆ ಹಾಗೂ ಭಾರತೀಯ ದಂಡ ಸಂಹಿತೆಯನ್ನು ಹಿಡಿದು ಸಜ್ಜಾದವು.

ನೀತಿ ನಿರೂಪಣೆಗೆ ಸಂಬಂಧಿಸಿದ ಚಿಂತಕರ ಚಾವಡಿಯಾದ ವಿಧಿ ಕಾನೂನು ನೀತಿ ಕೇಂದ್ರದ ಇತ್ತೀಚಿನ ವರದಿ ಹೇಳುವ ಪ್ರಕಾರ ಕೋವಿಡ್‌ ನಿಯಮಾವಳಿ ಉಲ್ಲಂಘಿಸಿದ್ದಕ್ಕಾಗಿ ದೆಹಲಿಯ ಏಳು ಜಿಲ್ಲೆಗಳಲ್ಲಿ ಮಾರ್ಚ್ 2020 ಮತ್ತು ಮಾರ್ಚ್ 2022ರ ನಡುವೆ 23,094 ಎಫ್‌ಐಆರ್‌ಗಳನ್ನು ದಾಖಲಿಸಲಾಯಿತು. ಅವುಗಳಲ್ಲಿ ಬಹುತೇಕ ಪ್ರಕರಣಗಳು ಮಾಸ್ಕ್‌ ಧರಿಸದೇ ಇದ್ದುದಕ್ಕಾಗಿ ದಾಖಲಾಗಿದ್ದವು. ಅಲ್ಲದೆ ಇಂತಹ ಪ್ರಕರಣಗಳಲ್ಲಿ 54,919 ಮಂದಿಯನ್ನು ಬಂಧಿಸಲಾಗಿತ್ತು.

ಪೀನಲೈಸಿಂಗ್‌ ಬಿಫೋರ್‌: ಪ್ರೊವೈಡಿಂಗ್‌: ಎ ಸ್ಟಡಿ ಆಫ್‌ ಎನ್‌ಫೋರ್ಸ್‌ಮೆಂಟ್‌ ಆಫ್‌ ಕೋವಿಡ್‌- 19 ಹೆಸರಿನ ಅಧ್ಯಯನ ವರದಿ ನಿಯಮಾವಳಿ ಜಾರಿಯಲ್ಲಿ ಪೊಲೀಸರು ಮತ್ತು ನ್ಯಾಯಾಲಯಗಳು ವಹಿಸಿದ ಪಾತ್ರವನ್ನು ಅರ್ಥಮಾಡಿಕೊಳ್ಳಲು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಗಳಿಗೆ ಸಲ್ಲಿಸಲಾದ ಎಫ್‌ಐಆರ್‌ಗಳು ಹಾಗೂ ಅವು ನೀಡಿದ ಆದೇಶಗಳನ್ನು ಪರಾಮರ್ಶೆಗೆ ಒಳಪಡಿಸಿದೆ. ದೆಹಲಿಯಲ್ಲಿ ಕೋವಿಡ್‌ ನಿಯಮಾವಳಿ ಜಾರಿಗೆ ತರುವುದಕ್ಕಾಗಿ ಕ್ರಿಮಿನಲ್‌ ಕಾನೂನುಗಳನ್ನು ಹೇಗೆ ಬಳಸಿಕೊಳ್ಳಲಾಗಿತ್ತು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಅಧ್ಯಯನದ ಉದ್ದೇಶವಾಗಿತ್ತು.

Also Read
ಮತ್ತೆ ಲಾಕ್‌ಡೌನ್‌ ಜಾರಿಯಾದರೆ ಉಗ್ರ ಹೋರಾಟ ಅನಿವಾರ್ಯ: ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಎನ್ ದೇವೇಂದ್ರಪ್ಪ

ಸರ್ಕಾರದ ಬೆಂಬಲದ ಕ್ರಮಗಳು ಇಲ್ಲದಿದ್ದಾಗ ಕ್ರಿಮಿನಲ್ ನಿರ್ಬಂಧಗಳು ಸಾರ್ವಜನಿಕ ನಡವಳಿಕೆಗೆ ಮಾರ್ಗದರ್ಶನ ನೀಡಬಹುದೇ ಎಂದು ಮತ್ತಷ್ಟು ಅರ್ಥಮಾಡಿಕೊಳ್ಳಲು ಮತ್ತು ಕೋವಿಡ್‌ ರೋಗವನ್ನು ಸರ್ಕಾರದ ನಿರ್ವಹಿಸಿದ ರೀತಿಯ ಕುರಿತಂತೆ ಸಾರ್ವಜನಿಕವಾಗಿ ಇರುವ ಗ್ರಹಿಕೆಯನ್ನು ದಾಖಲಿಸಲು ಸಮೀಕ್ಷೆ ನಡೆಸಲಾಗಿತ್ತು.

ವರದಿಯ ಪ್ರಮುಖ ಅವಲೋಕನಗಳು

  • ದೈನಂದಿನ ದಂಡದ ಗುರಿಯನ್ನು ₹2000ದಷ್ಟು ಭಾರಿ ಮೊತ್ತಕ್ಕೆ ನಿಗದಿಪಡಿಸಿ ಶಿಕ್ಷೆ ವಿಧಿಸುವ ಮೂಲಕ ರೋಗ ತಡೆಯಲು ಸರ್ಕಾರ ಮುಂದಾಗಿತ್ತು. ದೆಹಲಿಯ ವಿವಿಧ ಜಿಲ್ಲೆಗಳಲ್ಲಿ ₹ 90 ಕೋಟಿಗಳಷ್ಟು  ಮೊತ್ತವನ್ನು ಪೊಲೀಸರು ಮತ್ತು ಇತರೆ ಅಧಿಕಾರಿಗಳು ದಂಡದ ರೂಪದಲ್ಲಿ ಸಂಗ್ರಹಿಸಿದ್ದಾರೆ.

  • ಅಂತಹ ಪ್ರಕರಣಗಳಿಗೆ ನ್ಯಾಯಾಲಯಗಳು ವ್ಯಾಪಕ ಮಟ್ಟದಲ್ಲಿ ಭಿನ್ನ ಬಗೆಯ  ಶಿಕ್ಷೆ ವಿಧಿಸಿದವು. ಮಾಸ್ಕ್ ಧರಿಸದಿದ್ದಕ್ಕೆ ಒಂದು ನ್ಯಾಯಾಲಯ ₹4400 ದಂಡ ವಿಧಿಸಿದರೆ, ಇನ್ನೊಂದು ₹ 50 ದಂಡ ವಿಧಿಸಿತ್ತು.

  • ಒಟ್ಟು 110 ಪ್ರಕರಣಗಳನ್ನು ವರದಿ ವಿಶ್ಲೇಷಿಸಿದ್ದು ಅವುಗಳಲ್ಲಿ 106 ಪ್ರಕರಣಗಳಲ್ಲಿ ಆರೋಪಿಗಳು ತಾವು ತಪ್ಪಿತಸ್ಥರು ಎಂದು ಒಪ್ಪಿಕೊಂಡಿದ್ದರು. ಅವುಗಳಲ್ಲಿ 102 ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಯಿತು. ತಾವು ಯಾವುದೇ 'ತಪ್ಪಿತಸ್ಥರಲ್ಲ' ಎಂದು ಸಲ್ಲಿಸಿದ್ದ ಅರ್ಜಿಗಳಲ್ಲಿ ಶಿಕ್ಷೆಯಾಗಲಿಲ್ಲ.

  • ವಿಶ್ಲೇಷಿಸಿದ 44 ಆದೇಶಗಳಲ್ಲಿ, 37  ಶಿಕ್ಷೆ ತೀರ್ಪುಗಳು ಚಿಕ್ಕದಾಗಿದ್ದು ಅಗತ್ಯ ಕಾರ್ಯವಿಧಾನ ಮತ್ತು ಸಾಕ್ಷ್ಯ ಅವಶ್ಯಕತೆಗಳ ಬಗ್ಗೆ ಅಷ್ಟೇನೂ ಚರ್ಚಿಸಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಲಾದ ಆದೇಶಗಳಲ್ಲಿ ಪ್ರಾಸಿಕ್ಯೂಷನ್‌ನ ಗುರುತರ ಸಮಸ್ಯೆಗಳತ್ತ ಬೆರಳು ಮಾಡಿತ್ತು.    

ಸಂಪೂರ್ಣ ವರದಿಗಾಗಿ ಇಲ್ಲಿ ಕ್ಲಿಕ್ಕಿಸಿ.

Related Stories

No stories found.
Kannada Bar & Bench
kannada.barandbench.com